
ಈ ಬಾರಿ ಮೆಗಾ ಹರಾಜಿನಲ್ಲಿ ವಿಕೆಟ್‌ಗಳ ಹಿಂದೆ ಗ್ಲೌಸ್‌ನೊಂದಿಗೆ ನಿಲ್ಲುವುದು ಮಾತ್ರವಲ್ಲದೆ ಬ್ಯಾಟ್‌ನಿಂದ ವಿಧ್ವಂಸಕ ಆಟವನ್ನು ಆಡಬಲ್ಲ ವಿಕೆಟ್ ಕೀಪರ್‌ಗಳ ಮೇಲೆ ಕೋಟ್ಯಂತರ ರೂಪಾಯಿಗಳನ್ನು ಚೆಲ್ಲಲು ಫ್ರಾಂಚೈಸಿಗಳು ಸಿದ್ಧವಾಗಿವೆ. ಹಾಗಾಗಿ ಮೆಗಾ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಪಡೆದಿರುವ ಟಾಪ್-5 ವಿಕೆಟ್ ಕೀಪರ್‌ಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.ಐಪಿಎಲ್ ಮೆಗಾ ಹರಾಜಿಗೆ ಕೇವಲ 3 ದಿನಗಳು ಮಾತ್ರ ಬಾಕಿ ಉಳಿದಿದೆ.

ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಹರಾಜು 3 ಗಂಟೆಗೆ ಪ್ರಾರಂಭವಾಗುತ್ತದೆ. ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು ಇದು ಸತತ ಎರಡನೇ ಬಾರಿ. 1574 ಆಟಗಾರರು ಹೆಸರು ನೋಂದಾಯಿಸಿದ್ದರೆ, 10 ಫ್ರಾಂಚೈಸಿಗಳ ಸೂಚನೆಯಂತೆ ಬಿಸಿಸಿಐ ಕೇವಲ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ.ಈ ಪೈಕಿ 10 ಫ್ರಾಂಚೈಸಿಗಳು ಒಟ್ಟು 204 ಆಟಗಾರರನ್ನು ಖರೀದಿಸಲಿದ್ದಾರೆ. 70 ವಿದೇಶಿ ಆಟಗಾರರು ಸೇರಿದ್ದಾರೆ. ಶಾರ್ಟ್‌ಲಿಸ್ಟ್ ಆದವರಲ್ಲಿ 366 ಭಾರತೀಯ ಕ್ರಿಕೆಟಿಗರು ಮತ್ತು 208 ವಿದೇಶಿ ಆಟಗಾರರು ಇದ್ದಾರೆ. ಆದರೆ ವಿಕೆಟ್ ಕೀಪರ್ಗಳು ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ವಿಕೆಟ್‌ಗಳ ಹಿಂದೆ ಗ್ಲೌಸ್‌ನೊಂದಿಗೆ ನಿಲ್ಲುವುದು ಮಾತ್ರವಲ್ಲದೆ ಬ್ಯಾಟ್‌ನಿಂದ ವಿಧ್ವಂಸಕ ಆಟವನ್ನು ಆಡಬಲ್ಲ ವಿಕೆಟ್ ಕೀಪರ್‌ಗಳ ಮೇಲೆ ಕೋಟ್ಯಂತರ ರೂಪಾಯಿಗಳನ್ನು ಚೆಲ್ಲಲು ಫ್ರಾಂಚೈಸಿಗಳು ಸಿದ್ಧವಾಗಿವೆ. ಹಾಗಾಗಿ ಮೆಗಾ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಪಡೆದಿರುವ ಟಾಪ್-5 ವಿಕೆಟ್ ಕೀಪರ್‌ಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ರಿಷಭ್ ಪಂತ್: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಹರಾಜಿನಲ್ಲಿ ದಾಖಲೆಯ ಬೆಲೆ ಪಡೆಯುವ ಸಾಧ್ಯತೆಯಿದೆ. ವಿಕೆಟ್‌ಗಳ ಹಿಂದೆ ಸಕ್ರಿಯವಾಗಿರುವುದರ ಹೊರತಾಗಿ, ಪಂತ್ ಪಂದ್ಯದ ಗತಿಯನ್ನ ಬದಲಾಯಿಸಬಲ್ಲ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದಲ್ಲದೆ, ಅವರು ನಾಯಕನ ಸ್ಥಾನಕ್ಕೆ ಸಮರ್ಥರಾಗಿದ್ದಾರೆ. 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪದಾರ್ಪಣೆ ಮಾಡಿದ ಪಂತ್, ರಸ್ತೆ ಅಪಘಾತದಿಂದಾಗಿ 2023 ರ ಋತುವನ್ನು ಹೊರತುಪಡಿಸಿ ಉಳಿದ ಎಲ್ಲಾ ಋತುಗಳಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದರು. ಅವರು ಐಪಿಎಲ್‌ನಲ್ಲಿ 35.31 ಸರಾಸರಿ ಮತ್ತು 148.93 ಸ್ಟ್ರೈಕ್ ರೇಟ್‌ನಲ್ಲಿ 3284 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡ ನಂತರ, ಅವರು 2021 ರಿಂದ ಕಳೆದ ಋತುವಿನವರೆಗೆ ದೆಹಲಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಕೆಎಲ್ ರಾಹುಲ್: ಕೆಎಲ್ ರಾಹುಲ್ 2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಕರ್ನಾಟಕ ವಿಕೆಟ್ ಕೀಪರ್ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನ ಪ್ರತಿನಿಧಿಸಿದ್ದಾರೆ. ಅವರು ಕಳೆದ ಮೂರು ಋತುಗಳಲ್ಲಿ ಎರಡು ಬಾರಿ ಲಕ್ನೋವನ್ನು ಪ್ಲೇಆಫ್‌ಗೆ ಮುನ್ನಡೆಸಿದ್ದರು. ಕಳೆದ ಏಳು ಸೀಸನ್‌ಗಳಲ್ಲಿ ಆರು ಬಾರಿ 500+ ಸ್ಕೋರ್ ಮಾಡಿದ್ದಾರೆ ಮತ್ತು ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್ ಎಂದು ಗುರುತಿಸಲ್ಪಟ್ಟಿದ್ದಾರೆ. ರಾಹುಲ್ ಓಪನರ್ ಆಗಿ ಆಡುವುದಲ್ಲದೆ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ನಾಯಕತ್ವ ಕೌಶಲ್ಯಗಳು ಅವರ ಹೆಚ್ಚುವರಿ ಸಾಮರ್ಥ್ಯವಾಗಿದೆ.

ಇಶಾನ್ ಕಿಶನ್: 2016 ರಲ್ಲಿ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು, ಇಶಾನ್ ಕಿಶನ್ ವಿಧ್ವಂಸಕ ಆರಂಭಿಕ-ವಿಕೆಟ್ ಕೀಪರ್ ಎಂದು ಸಾಬೀತುಪಡಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಮೆಗಾ ಹರಾಜಿನಲ್ಲಿ ಅವರು ದಾಖಲೆಯ 15.25 ಕೋಟಿ ರೂಗೆ ಮಾರಾಟವಾಗಿದ್ದರು. ಆದರೆ 2024 ರ ಋತುವಿನಲ್ಲಿ ಕೇವಲ 320 ರನ್ ಗಳಿಸಿದ ಇಶಾನ್ ಅವರನ್ನು ಮುಂಬೈ ರಿಲೀಸ್ ಮಾಡಿದೆ. ಐಪಿಎಲ್‌ನಲ್ಲಿ ಒಟ್ಟಾರೆ 105 ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ 28.53 ಸರಾಸರಿ ಮತ್ತು 135.87 ಸ್ಟ್ರೈಕ್ ರೇಟ್‌ನಲ್ಲಿ 2644 ರನ್ ಗಳಿಸಿದ್ದಾರೆ.

ಜೋಸ್ ಬಟ್ಲರ್: ಇಂಗ್ಲೆಂಡ್ ವೈಟ್ ಬಾಲ್ ತಂಡದ ನಾಯಕ ಜೋಸ್ ಬಟ್ಲರ್ 2016 ರಿಂದ ಐಪಿಎಲ್ ಆಡುತ್ತಿದ್ದಾರೆ. ಅವರು 2022 ರ ಋತುವಿನಲ್ಲಿ 863 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ಪಡೆದಿದ್ದರು. ಆದರೆ ಆ ಋತುವಿನ ನಂತರ, ಬಟ್ಲರ್ ರನ್ ಆರ್ಭಟ ಕ್ರಮೇಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ 34ರ ಹರೆಯದ ಬಟ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್ ರಿಲೀಸ್ ಮಾಡಿದೆ. ಆದರೆ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಂದ್ಯದ ಸ್ವರೂಪವನ್ನೇ ಬದಲಿಸುವ ಬ್ಯಾಟ್ಸ್‌ಮನ್ ಜೊತೆಗೆ ನಾಯಕತ್ವ ಗುಣಗಳು ಕೂಡ ಇರುವುದರಿಂದ ಬಟ್ಲರ್ಗೆ ಹರಾಜಿನಲ್ಲಿ ಭಾರಿ ಬೇಡಿಕೆ ಬಂದಿದೆ.

ಫಿಲಿಪ್ ಸಾಲ್ಟ್: ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ 2023 ರಿಂದ ಐಪಿಎಲ್ ಆಡುತ್ತಿದ್ದಾರೆ. ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಕಳೆದ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡಿದ್ದರು. ಕೆಕೆಆರ್ ಪರ ಆರಂಭಿಕನಾಗಿ ಎದುರಾಳಿ ಬೌಲರ್ ಗಳನ್ನು ದ್ವಂಸ ಮಾಡಿದ್ದರು. ಕಳೆದ ಋತುವಿನಲ್ಲಿ ಅವರು 39.55 ರ ಸರಾಸರಿಯಲ್ಲಿ ಮತ್ತು 182.01 ರ ಸ್ಟ್ರೈಕ್ ರೇಟ್‌ನಲ್ಲಿ 435 ರನ್ಗಳಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಅವರನ್ನ ಕೆಕೆಆರ್ ರಿಲೀಸ್ ಮಾಡಿತ್ತು.
Published by
twelvenewz.com
✍️ಪ್ರಶಾಂತ್ ಎಚ್ ವಿ