ಶುಂಠಿ ಇಳುವರಿಯಲ್ಲೂ ಕುಷಿತ
ಕಳೆದ ವರ್ಷ ರೈತರು ಎಕರೆವಾರು ಇಳುವರಿ 400 ರಿಂದ 500 ಮೂಟೆ ಬೆಳೆಯುತ್ತಿದ ಕೃಷಿಕರು ಈ ವರ್ಷ ಎಕರೆವಾರು 250 ರಿಂದ 300 ಮೂಟೆ ಬೆಳೆಯಲು ಕಷ್ಟಪಡುತ್ತಿದ್ದಾರೆ.
ದರದಲ್ಲಿಯೂ ಕುಷಿತ
ರೈತರು ದೀಪಾವಳಿ ನಂತರ ದರ ಹೆಚ್ಚುತ್ತದೆ ಎಂದು ಭಾವಿಸಿದ್ದರು ಆದರೆ ರೈತರ ಆಸೆಗೆ ಮಾರುಕಟ್ಟೆ ದರ ಬಾರಿ ಕುಷಿತ ಕಾಣುತ್ತಿದ್ದು ಪ್ರತಿ ಕೆಜಿಯ ಬೆಲೆ 45 ರೂ ದೆಹಲಿ ಮಾರುಕಟ್ಟೆಯಲ್ಲಿ ಕಾಣುತ್ತಿದ್ದು. ಲೋಕಲ್ ಮಾರುಕಟ್ಟೆಯಲ್ಲಿ 25 ರಿಂದ 27 ರೂ ವರಗೆ ಬಿಕರಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಶುಂಠಿಯ ಬೆಲೆ ಇನ್ನು ಕುಷಿತ ಕಾಣುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತೀದ್ದಾರೆ.
ದರ ಕುಷಿಯಲು ಕಾರಣ
ಕಳೆದ ವರ್ಷ 5000 ದಿಂದ 8000 ದ ವರೆಗೆ ಇದ್ದ ದರ ಈ ವರ್ಷ ಏಕಾಏಕಿ 1500 ರೂ ಗೆ ಬಂದಿಳಿದಿದೆ ಇದ್ದಕ್ಕೆ ಕಾರಣ ಏನು ಎಂಬುದರ ಬಗ್ಗೆ ಚರ್ಚಿಸಿದಾಗ ಕರ್ನಾಟಕದ ಬೆಳೆಗೆ ಅಷ್ಟು ಬೇಡಿಕೆ ಇಲ್ಲದಿರುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಆಗುತ್ತಿರುವುದು ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಸುಮಾರು 36000 ಹೆಕ್ಟಾರ್ ಪ್ರದೇಶದಲ್ಲಿ ಶುಂಠಿ ನಾಟಿ ಮಾಡಿರುವುದು ಕಂಡುಬಂದಿದೆ.
ಶುಂಠಿಗೆ ಹೊಸ ರೋಗ
ಈ ವರ್ಷ ಶುಂಠಿ ಬೆಳೆಯಲ್ಲಿ ಎಂದು ಕಾಣದ ರೋಗವು ರೈತರಲ್ಲಿ ಭಯ ತರಿಸಿದೆ ಸುಮಾರು ಆರು ತಿಂಗಳ ನಂತರ ಕಾಣಿಸಿಕೊಳ್ಳುವ ಈ ರೋಗ ಬೆಳೆಯನ್ನೇ ಆಹುತಿ ತೆಗೆದುಕೊಳ್ಳುತ್ತಿದೆ ಆರೋಗ್ಯಯುತ ಗಿಡಕ್ಕೆ ಇದ್ದಕ್ಕಿದಂತ್ತೆ ಇತ್ತಾ ಬೆಂಕಿ ರೋಗವು ಅಲ್ಲದ ಕೊಳೆ ರೋಗವು ಅಲ್ಲದ ಮಹಾಮಾರಿ ಕಾಣಿಸುತ್ತಿದೆ. ವಿಜ್ಞಾನಿಗಳು ಇದರ ಬಗ್ಗೆ ಪರಿಶೀಲಿಸುತ್ತಿದ್ದು ಕಾರಣ ಹೊರಬರಬೇಕಿದೆ.
Published by
Comments
To leave a comment, click the button below to sign in with Google.