ಸೈಬರ್ ಕಳ್ಳರ ಚಮತ್ಕಾರ | ರಿವಾರ್ಡ್ಸ್, ವಿದ್ಯುತ್, ನೀರಿನ ಬಿಲ್ ಪಾವತಿ ಸೋಗು ಎಪಿಕೆ ಫೈಲ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ!
ನಿಮ್ಮ ವಾಟ್ಸ್‌ಅಪ್‌ಗೆ ಬ್ಯಾಂಕಿನಿಂದ ರಿವಾರ್ಡ್ ಪಾಯಿಂಟ್ಸ್ ಅಥವಾ ಬೆಸ್ಕಾಂ, ನೀರಿನ ಬಿಲ್ ಪಾವತಿಗೆ ಇಲ್ಲಿ ಕ್ಲಿಕ್ ಮಾಡುವಂತೆ ಆ್ಯಂಡೇಡ್ ಪ್ಯಾಕೇಜ್ ಕಿಟ್ (ಎಪಿಕೆ) ಫೈಲ್ ಬಂದರೆ ಎಚ್ಚರವಾಗಿರಿ! ನೀವೇನಾದರೂ ಮೈಮರೆತು ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಗೆ, ಕನ್ನ ಗ್ಯಾರಂಟಿ. ಇತ್ತೀಚೆಗೆ ಇಂತಹದೊಂದು ಎಪಿಕೆ ಫೈಲ್ ಗಳು ವಾಟ್ಸ್ ಅಪ್ ಗ್ರೂಪ್, ವೈಯಕ್ತಿವಾಗಿಯೂ ಬರಲು ಆರಂಭಿಸಿವೆ. ಇದು ಸೈಬರ್ ಹೈಂ ಖದೀಮರ ಕೃತ್ಯ ಎಂಬುದು ದೃಢವಾಗಿದೆ.
ಸಾಮಾನ್ಯವಾಗಿ ಎಸ್‌ಬಿಐ, ಕೆನರಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ರಾಷ್ಟ್ರೀಕೃತ ಬ್ಯಾಂಕ್ ಗಳ ಹೆಸರಿನ ಲೋಗೋವನ್ನು ಡಿಪಿಗೆ ಇಟ್ಟುಕೊಂಡು ಫೈಲ್ ಗಳನ್ನು ಫಾರ್ವಡ್ ಮಾಡುತ್ತಾರೆ. ಅದರಲ್ಲಿ ಬ್ಯಾಂಕ್ ವ್ಯವಹಾರದಿಂದ ನಿಮಗೆ ರಿವಾರ್ಡ್ ಪಾಯಿಂಟ್ಸ್ ಬಂದಿದೆ, ಸ್ವೀಕರಿಸಲು ಈ ಫೈಲ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಇದಲ್ಲದೆ, ವಿದ್ಯುತ್, ನೀರಿನ ಬಿಲ್, ಆಸ್ತಿ. ತೆರಿಗೆ ಸೇರಿ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕ ವಸೂಲಿ ರೂಪದಲ್ಲಿ ಎಪಿಕೆ ಫೈಲ್ ಸೃಷ್ಟಿಸುತ್ತಾರೆ. ಅದರಲ್ಲಿಯೂ ಫೈಲ್ ಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೆಂಡ್ ಮಾಡಿ ಫೈನ್ ಡೌನ್ ಲೋಡ್‌ಗೆ ಸೂಚಿಸುತ್ತಾರೆ. ಈ ಸಂದೇಶ ನಂಬಿ ಎಪಿಕೆ ಫೈಲ್ ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಮೊದಲ ಹಂತದಲ್ಲಿ ಬ್ಯಾಂಕ್ ಖಾತೆ ವಿವರ ಕೇಳಲಿದೆ. ಮಾಹಿತಿ ಭರ್ತಿ ಮಾಡಿದರೆ ಖಾತೆ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಕೆಲವೊಂದು ಸಮಯದಲ್ಲಿ ಎಪಿಕೆ ಫೈಲ್ ಡೌನ್ ಲೋಡ್ ಮಾಡಿಕೊಂಡ ಕೂಡಲೇ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆಗಳಿವೆ. ಆಗ ಮೊಬೈಲ್ ಕಂಟ್ರೋಲ್
check your electricity bilapk
11 MAPK
Message
Sunday
4:22 ಪಿಎಂ
SBI REWARD POINT.apk
1.8 MB APK
9:26 PM
ಪೂರ್ಣ ಸೈಬರ್ ಕಳ್ಳರಿಗೆ ಲಭ್ಯವಾಗಿ ಅದರಲ್ಲಿನ ಡೇಟಾ ಕಳವು ಮಾಡುವ ಸಾಧ್ಯತೆಗಳೂ ಇರಲಿದೆ. ಇದಲ್ಲದೆ, ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್‌ಗೆ ಮೊಬೈಲ್ ನಂಬರ್: ಲಿಂಕ್ ಆಗಿದ್ದರೆ ಸ್ವಯಂಚಾಲಿತವಾಗಿ ಖಾತೆಯಲ್ಲಿನ ಹಣ ಕಳ್ಳರ ಪಾಲಾಗುತ್ತದೆ. ಆದ್ದರಿಂದ ಎಪಿಕೆ ಅಪ್ಲಿಕೇಷನ್ ಮತ್ತು ಫೈಲ್‌ಗಳು ಬಂದರೆ ಬಳಸದಂತೆ ಸೈಬರ್ ಕ್ರೈಂ ಪೊಲೀಸರು ಸಲಹೆ ನೀಡಿದ್ದಾರೆ.
ಗ್ರೂಪ್ ಹ್ಯಾಕ್ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗಳಿಗೂ ಎಪಿಕೆ ಫೈಲ್‌ಗಳು ಬರುತ್ತಿವೆ.
ಗ್ರೂಪ್‌ನಲ್ಲಿರುವ ವ್ಯಕ್ತಿಯ ಮೊಬೈಲ್ ಹ್ಯಾಕ್ ಮಾಡಿ ಆತನ ಹೆಸರಿನಲ್ಲಿ ಫೈಲ್ ಗಳನ್ನು ಸೆಂಡ್ ಮಾಡುತ್ತಾರೆ. ಆಗ ಡಿಪಿ ಲೋಗೋ ಬಳಕೆ ಮಾಡಿರುತ್ತಾರೆ. ಮೊಬೈಲ್ ನಂಬರ್ ಸೇಮ್ ಇರಲಿದ್ದು,
ಖಾಸಗಿ ಡೇಟಾಗೂ ಅಪಾಯ ಸೈಬರ್ ಕಳ್ಳರು ಕಳುಹಿಸುವ ಎಪಿಕೆ ಫೈಲ್ ಗಳು ಮತ್ತು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಾಗ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಗಳು ಸಂಪೂರ್ಣ ಹ್ಯಾಕ್ ಆಗುವ ಸಾಧ್ಯತೆಗಳಿವೆ. ನಿಮಗೆ ಗೊತ್ತಿಲ್ಲದೆ ಮೊಬೈಲ್‌ನಲ್ಲಿರುವ ಖಾಸಗಿ ದತ್ತಾಂಶಗಳನ್ನು ಕದ್ದು ದುರ್ಬಳಕ್ಕೆ ಮಾಡಿಕೊಳ್ಳಲಿದ್ದಾರೆ. ಖಾಸಗಿ ಫೋಟೋ, ವಿಡಿಯೋ, ಬ್ಯಾಂಕ್ ಖಾತೆ ವಿವರ, ಕಂಪನಿ ಡೇಟಾ, ಸಾಫ್ಟ್‌ವೇರ್ ಸೇರಿ ಯಾವುದೇ ದತ್ತಾಂಶವೂ ಆಗಬಹುದು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನೈಜ ವ್ಯಕ್ತಿಗೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹ್ಯಾಕರ್ ಗೆ ಮಾತ್ರ ಅವಕಾಶ ಇರಲಿದೆ. ಗ್ರೂಪ್ ಸದಸ್ಯನೇ ಕಳುಹಿಸಿರುವ ಅಪ್ಲಿಕೇಷನ್ ಅಥವಾ ಫೈಲ್ ಎಂದು ನಂಬಿ ಮೋಸಕ್ಕೆ ಒಳಗಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಸಹ ಸದಸ್ಯರು ಡಿಲೀಟ್ ಮಾಡಿ ಅರಿವು ಮೂಡಿಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಎಪಿಕೆ: ಆ್ಯಂಡೇಡ್ ಪ್ಯಾಕೇಜ್ ಕಿಟ್ (ಎಪಿಕೆ). ಆಪರೇಟಿಂಗ್ ಸಿಸ್ಟಮ್, ಆ್ಯಪ್, ಅಪ್ಲಿಕೇಷನ್ ರವಾನೆ ಮತ್ತು ಇನ್‌ಸ್ಟಾಲ್ ಮಾಡುವ ಸಾಧನವಾಗಿದೆ. ಅಪ್ಲಿಕೇಷನ್ ರನ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡುವ ಡೇಟಾವನ್ನು ಇದರಲ್ಲಿ ರವಾನೆ ಮಾಡುತ್ತಾರೆ. ಅದನ್ನು ನಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ರನ್ ಮಾಡಿದಾಗ ಹ್ಯಾಕ್ ಆಗಲಿದೆ.
published by
twelvenewz.com