ಮಾಯೋಟ್ ಡಿಸೆಂಬರ್ 16: ಚಂಡಮಾರುತ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಉತ್ತಮ ಉದಾಹರಣೆ ಮಾಯೋಟ್ ಎಂಬ ದೇಶಕ್ಕೆ ಅಪ್ಪಳಿಸಿರುವ ಚಿಡೋ ಎಂಬ ಚಂಡ ಮಾರುತ. ಮಾಯೋಟ್ ಎಂಬ ಬಡ ದೇಶದ ಮೇಲೆ ಅಪ್ಪಳಿಸಿರುವ ಈ ಚಂಡ ಮಾರುತ ಬರೋಬ್ಬರಿ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ.

ಆಫ್ರಿಕಾದ ಕರಾವಳಿಯ ಆಗ್ನೇಯ ಹಿಂದೂ ಮಹಾಸಾಗರದಲ್ಲಿರುವ ಮಾಯೋಟ್ ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟದ ಬಡ ಪ್ರದೇಶವಾಗಿದೆ. ಚಿಡೋ ಚಂಡಮಾರುತ ಇದೀಗ ಆಫ್ರಿಕಾದ ಪೂರ್ವ ಕರಾವಳಿಯನ್ನು ತಲುಪಿದ್ದು, ಅಲ್ಲಿ ಅಪಾಯದ ಸನ್ನಿವೇಶ ಸೃಷ್ಠಿಯಾಗಿದೆ. ಚಿಡೋ ಗಂಟೆಗೆ 220 ಕಿಲೋಮೀಟರ್‌ಗಿಂತಲೂ ಹೆಚ್ಚು ವೇಗವಾಗಿ ಸಂಚರಿಸುತ್ತಿದೆ. ಇದರಿಂದ ಹಲವಾರು ಮನೆಗಳು ಹಾನಿಗೊಳಗಾಗಿವೆ.

ಮಾಯೋಟ್​ನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಇದು ಆಫ್ರಿಕಾದ ಪೂರ್ವ ಕರಾವಳಿಯಿಂದ ಸುಮಾರು 800 ಕಿಲೋಮೀಟರ್ ದೂರದಲ್ಲಿರುವ ಎರಡು ಪ್ರಮುಖ ದ್ವೀಪಗಳಲ್ಲಿ ಹರಡಿದೆ. ಕೆಲವೆಡೆ ಇಡೀ ಪ್ರದೇಶವೇ ನಾಶವಾಗಿದೆ. ಹಲವು ಮರಗಳು ಧರೆಗುರುಳಿದ್ದು, ದೋಣಿಗಳು ಉರುಳಿ ಬಿದ್ದಿವೆ ಅಥವಾ ಮುಳುಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Published by

Leave a Reply

Your email address will not be published. Required fields are marked *