ಕೆಎನ್‌ಎನ್‍ಡಿಜಿಟಲ್ ಡೆಸ್ಕ್ : ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ನಡೆಸುತ್ತಿದ್ದು, ಅದ್ರಲ್ಲಿ ಈ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ರೈತರಿಗೆ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರ ಸಬ್ಸಿಡಿ ಯೋಜನೆಯನ್ನ ಪ್ರಾರಂಭಿಸಿದ್ದು, ಈ ಯೋಜನೆಯು ರೈತರಿಗೆ ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಖರೀದಿಸಲು ಸಹಾಯ ಮಾಡುತ್ತದೆ.

ಸಬ್ಸಿಡಿ ಟ್ರ್ಯಾಕ್ಟರ್‌’ಗಳು ರೈತರಿಗೆ ತುಂಬಾ ಉಪಯುಕ್ತ.!ಕೇಂದ್ರ ಸರ್ಕಾರ ಆರಂಭಿಸಿರುವ ಈ ಸಬ್ಸಿಡಿ ಯೋಜನೆಯ ಮೂಲಕ ರೈತರು ಟ್ರ್ಯಾಕ್ಟರ್ ಖರೀದಿಸುವಾಗ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು, ರೈತರು ಅರ್ಹತಾ ಮಾನದಂಡಗಳನ್ನ ಪೂರೈಸಬೇಕು. ಆದ್ರೆ, ಈ ಯೋಜನೆಗೆ ಸೇರುವ ರೈತರು ಭಾರತದ ಪ್ರಜೆಗಳಾಗಿರಬೇಕು. ಇನ್ನು ಈ ಯೋಜನೆಯಡಿ ಪ್ರತಿಯೊಬ್ಬ ರೈತರು ಕೇವಲ ಒಂದು ಟ್ರ್ಯಾಕ್ಟರ್ ಮಾತ್ರ ಖರೀದಿಸಬಹುದು. ಇನ್ನು ರೈತರು ಸಹಾಯಧನ ಪಡೆಯಲು ಕೆಲವು ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಪುಸ್ತಕ, ಭೂ ದಾಖಲೆಗಳು, ಮೊಬೈಲ್ ಸಂಖ್ಯೆಯನ್ನ ಆಧಾರ್ ಕಾರ್ಡ್’ಗೆ ಲಿಂಕ್ ಮಾಡಬೇಕು. ರೈತರಿಗೆ ಸಹಾಯ ಮಾಡಲು ಸರ್ಕಾರವು ಸಬ್ಸಿಡಿ ಸಾಲ ಮತ್ತು ಬಡ್ಡಿ ರಹಿತ ಸಾಲದಂತಹ ಅನೇಕ ಯೋಜನೆಗಳನ್ನ ಪರಿಚಯಿಸಿದೆ. ಈ ಯೋಜನೆಗಳು ರೈತರಿಗೆ ಸಾಕಷ್ಟು ನೆರವು ನೀಡುತ್ತವೆ. ಕೃಷಿ ಇಲಾಖೆಯು ರೈತರ ಬದುಕನ್ನ ಸುಧಾರಿಸಲು ಮತ್ತು ಅವರಿಗೆ ಅಗತ್ಯವಿರುವ ಪರಿಕರಗಳನ್ನ ಒದಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಕರ್ನಾಟಕದ ರೈತರು ಅರ್ಹತಾ ಮಾನದಂಡಗಳನ್ನ ಪೂರೈಸುವ ಮೂಲಕ ಮತ್ತು ಅಗತ್ಯ ದಾಖಲೆಗಳನ್ನ ಸಲ್ಲಿಸುವ ಮೂಲಕ ಈ ಯೋಜನೆಯನ್ನ ಪಡೆಯಬಹುದು.

ಅಂದ್ಹಾಗೆ, ಟ್ರ್ಯಾಕ್ಟರ್ ಇದ್ದರೆ ರೈತನಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ ಪ್ರಸ್ತುತ ಟ್ರ್ಯಾಕ್ಟರ್‌’ಗಳ ಬೆಲೆ ಕೈಗೆಟುಕುತ್ತಿಲ್ಲ. ಹೀಗಾಗಿ ರೈತರಿಗೆ ಅರ್ಧ ಬೆಲೆಯ ಟ್ರ್ಯಾಕ್ಟರ್ ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ, ಟ್ರ್ಯಾಕ್ಟರ್ ಖರೀದಿಯ ಮೇಲೆ 50 ಪರ್ಸೆಂಟ್ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ಗಳನ್ನು ಖರೀದಿಸಲು ಸಾಧ್ಯವಿದೆ.

Published by

Leave a Reply

Your email address will not be published. Required fields are marked *