ಭೂಮಿ ಮೇಲೆ ಮನುಷ್ಯರ ದೌರ್ಜನ್ಯ ಹೆಚ್ಚಾದಷ್ಟು ಪ್ರಾಕೃತಿಕ ವಿಕೋಪಗಳು ಕೂಡ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಮನುಷ್ಯರು ಭೂಮಿ ಮೇಲೆ ತಮ್ಮ ದೌರ್ಜನ್ಯ ಮತ್ತಷ್ಟು ಹೆಚ್ಚು ಮಾಡಿದ್ದು, ಇದನ್ನ ಸಹಿಸದ ಭೂಮಿ ಮನುಷ್ಯರ ಎಡವಟ್ಟಿಗೆ ತಕ್ಕನಾದ ಶಿಕ್ಷೆಯನ್ನೇ ನೀಡುತ್ತಿದ್ದು ಈಗ ಮತ್ತೊಂದು ಭೀಕರ ಪರಿಸ್ಥಿತಿ ಎದುರಾಗಿದೆ.
ಚಂಡಮಾರುತ, ಅಕಾಲಿಕ ಮಳೆ, ವಾಯುಭಾರ ಕುಸಿತದ ನಡುವೆ ಇದೀಗ ಘೋರ ಭೂಕಂಪನ ಸಂಭವಿಸಿದ್ದು ಭೀಕರ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಸಮುದ್ರದ ಆಳದಲ್ಲಿ ಭೂಮಿ ಕಂಪಿಸಿದರೆ ಅದರ ತೀವ್ರತೆಗೆ ನೀರು ಕೂಡ ಮೇಲೆ & ಕೆಳಗೆ ತುಳುಕುತ್ತದೆ. ಇದರ ಪರಿಣಾಮ ಭಾರಿ ದೊಡ್ಡ ಪ್ರಮಾಣದಲ್ಲಿ ನೀರು ನೇರವಾಗಿ ಸಮುದ್ರ ಅಥವಾ ಸಾಗರದ ದಡಕ್ಕೆ ಅಪ್ಪಳಿಸುತ್ತದೆ. ಈ ರೀತಿಯಾಗಿ ಸಮುದ್ರ ಅಥವಾ ಸಾಗರದ ನೀರು ದಡಕ್ಕೆ ಅಪ್ಪಳಿಸುವ ಸಮಯದಲ್ಲಿ ದೊಡ್ಡ ಪ್ರಮಾಣದ ಅಲೆಗಳು ಏಳುತ್ತವೆ. ಈ ರೀತಿಯಾಗಿ ದಡಕ್ಕೆ ಅಪ್ಪಳಿಸುವ ಸಮುದ್ರದ ಅಲೆಗಳು ಘೋರ ವಿನಾಶ ಸೃಷ್ಟಿ ಮಾಡುತ್ತವೆ. ಅದೇ ರೀತಿ ಇದೀಗ 7.3 ತೀವ್ರತೆ ಭೂಕಂಪನಕ್ಕೆ ದ್ವೀಪರಾಷ್ಟ್ರ ಗಢಗಢ ನಡುಗಿದ್ದು, ಭೀಕರ ಸುನಾಮಿಯ ಎಚ್ಚರಿಕೆ ಸಿಕ್ಕಿದೆ.
ಭೀಕರ ಸುನಾಮಿಯ ಎಚ್ಚರಿಕೆ!
ಅಂದಹಾಗೆ ಈ ರೀತಿಯಾಗಿ ಭೀಕರ ಸುನಾಮಿ ಎಚ್ಚರಿಕೆ ಸಿಕ್ಕಿರುವುದು ಓಷೆಯಾನಿಯಾ ಭಾಗದ ದೇಶ ವನೌತು ಪ್ರದೇಶದಲ್ಲಿ. ವನೌತು ದೇಶ ಸಣ್ಣಪುಟ್ಟ ದ್ವೀಪಗಳಿಂದ ರಚನೆಯಾಗಿದ್ದು, ಈ ದೇಶದ ಪೋರ್ಟ್ ವಿಲ ಎಂಬ ಪ್ರದೇಶಕ್ಕೆ ಇದೀಗ ಭೀಕರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ರೀತಿ ಸುನಾಮಿ ಎಚ್ಚರಿಕೆ ಸಿಗುತ್ತಿದ್ದಂತೆ ಅಲ್ಲಿನ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಯಾವುದೇ ತುರ್ತು ಪರಿಸ್ಥಿತಿ ಎದುರಿಸುವ ದೇಶ ಸಜ್ಜಾಗಿರುವಂತೆ ಸರ್ಕಾರ ಕರೆ ನೀಡಿದೆ.
Published by
