ಕೋರೊನಾ (Corona) ಭೀತಿಯಿಂದ ಇಡೀ ಜಗತ್ತೇ ಒಮ್ಮೆ ತತ್ತರಿಸಿ ಹೋಗಿತ್ತು. ಆದರೆ ಇತ್ತೀಚೆಗೆ ಕೊರೊನಾ ಭಯ ಜನರಲ್ಲಿ ಸಂಪೂರ್ಣವಾಗಿ ಹೋಗಿದೆ. ಇನ್ನು ಹೆಚ್ಚಿನವರಿಗೆ ಮುಂದೆ ಎಂತಹ ವೈರಸ್ ಬರಬಹುದು ಎಂಬ ಭಯವೂ ಕಾಡುತ್ತಿದೆ. ಇದೀಗ ಆಫ್ರಿಕನ್ ದೇಶವಾದ ಉಗಾಂಡಾ (Uganda) ಒಂದು ಸುದ್ದಿಯಿಂದ ಆಘಾತಕ್ಕೊಳಗಾಗಿದೆ.
ಬಂಡಿಬುಗ್ಯೋ ಜಿಲ್ಲೆಯಲ್ಲಿ ಒಂದು ವೈರಸ್‌ನಿಂದ (Virus) ಭಾರೀ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಈ ನಗರದಲ್ಲಿ ಸುಮಾರು 300 ಮಂದಿಗೆ ವಿಚಿತ್ರ ಕಾಯಿಲೆ (Weird Disease) ಬಂದಿತ್ತು. ಸ್ಥಳೀಯವಾಗಿ ಇದನ್ನು ‘ಡಿಂಗಾ ಡಿಂಗಾ’ ಎಂದು ಕರೆಯಲಾಗುತ್ತದೆ. ಈ ಹೆಸರು ಕೇಳಲು ತಮಾಷೆಯಾಗಿರಬಹುದು ಆದರೆ ಈ ವೈರಸ್ ತಮಾಷೆಯಲ್ಲ. ಇದು ಬಹಳ ಡೇಂಜರ್ ವೈರಸ್ ಆಗಿದ್ದು, ಹೆಚ್ಚಾಗಿ ಮಹಿಳೆಯರಲ್ಲಿ, ಹದಿಹರೆಯದ ಹುಡುಗಿಯರಲ್ಲಿ ಕಂಡುಬರುತ್ತಿದೆ.
ಡಿಂಗಾ ಡಿಂಗಾ ವೈರಸ್‌ನ ಲಕ್ಷಣಗಳು:
ಈ ವೈರಸ್‌ಗೆ ತುತ್ತಾದವರಿಗೆ ಜ್ವರ ಇರುತ್ತದೆ.
ಇಡೀ ದೇಹ ನಡುಗುತ್ತಿರುತ್ತದೆ.
ಇನ್ನು ಈ ವೈರಸ್ ತುಂಬಾನೇ ಡೇಂಜರ್ ಆಗಿದ್ದು, ದಿನೇ ದಿನೇ ವೀಕ್ ಆಗುತ್ತಾರೆ ಮತ್ತು ಅಲ್ಲಲ್ಲಿ ತೂಗಾಡುತ್ತಿರುತ್ತಾರೆ.
ಬಂಡಿಬುಗ್ಯೋ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಟಿಯಾ ಕ್ರಿಸ್ಟೋಫರ್ ಈ ವಿಚಿತ್ರ ವೈರಸ್ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದು, ಸದ್ಯ ಈ ವೈರಸ್ ಸೋಂಕಿತರಿಗೆ ಆಯಂಟಿಬಯೋಟಿಕ್ ನೀಡುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ತಂಡಗಳು ಚಿಕಿತ್ಸೆ ನೀಡುತ್ತಿದ್ದು, ಇದುವರೆಗೆ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.
ಪರಿಹಾರ ಇದ್ಯಾ?
“ಇದುವರೆಗೆ ಈ ವೈರಸ್‌ಗೆ ಯಾವುದೇ ಔಷಧಿ ಅಥವಾ ಲಸಿಕೆ ಪತ್ತೆ ಹಚ್ಚಿಲ್ಲ. ಕೆಲವು ವಿಧಾನಗಳನ್ನು ಪ್ರಯತ್ನಿಸಿದರೆ, ರೋಗಿಗಳು ಒಂದು ವಾರದ ನಂತರ ಚೇತರಿಸಿಕೊಳ್ಳುತ್ತಾರೆ. ಯಾರಾದರೂ ಈ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಅವರು ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಹೋಗಬೇಕು”ಎಂದು ಕಿಟಿಯಾ ಒತ್ತಾಯಿಸಿದರು.

ಪ್ರಸ್ತುತ, ಬಂಡಿಬುಗ್ಯೊ ಜಿಲ್ಲೆ ಹೊರತುಪಡಿಸಿ ಬೇರೆಲ್ಲೂ ಡಿಂಗಾ ಡಿಂಗಾ ಪ್ರಕರಣಗಳು ವರದಿಯಾಗಿಲ್ಲ. ಸರ್ಕಾರಿ ಆರೋಗ್ಯ ಇಲಾಖೆ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸುತ್ತಿದೆ. ಆದರೆ, ಈ ವೈರಸ್ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇದುವರೆಗೆ ಹೊರಬಿದ್ದಿಲ್ಲ.
ಕಾಂಗೋದಲ್ಲಿ ಮತ್ತೊಂದು ರೋಗ ಪತ್ತೆ:
ಉಗಾಂಡಾದಲ್ಲಿ ಯಾವ ರೀತಿಯ ವೈರಸ್ ಎಂಬುದು ಇನ್ನೂ ತಿಳಿದಿಲ್ಲ. ಮತ್ತೊಂದೆಡೆ, ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಮತ್ತೊಂದು ರೀತಿಯ ರೋಗ ಸಂಚಲನ ಸೃಷ್ಟಿಸಿದೆ. ಅದು ಯಾರಿಗೂ ಅರ್ಥವಾಗದ ವೈರಸ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ 400 ಜನರಿಗೆ ಸೋಂಕು ತಗುಲಿದ್ದು, 30 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ
ರೋಗಲಕ್ಷಣಗಳು ಹೇಗಿವೆ?
ಈ ವಿಚಿತ್ರ ಕಾಯಿಲೆಗೆ ತುತ್ತಾದವರಿಗೆ ಜ್ವರ, ತಲೆನೋವು, ಕೆಮ್ಮು, ಮೂಗು ಸೋರುವಿಕೆ ಮತ್ತು ಗಂಟಲು ನೋವು ಇರುತ್ತದೆ. ಸದ್ಯ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇದು ಇನ್ಫ್ಲುಯೆನ್ಸ, ಕೋವಿಡ್ 19, ಮಲೇರಿಯಾ, ದಡಾರ ಆಗಿರಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ ಲ್ಯಾಬ್ ವರದಿಗಳು ಬರದ ಕಾರಣ ಇನ್ನೂ ಏನೆಂಬುದು ಸಾಬೀತಾಗಿಲ್ಲ.
Published by
