ಬೆಳಗಾವಿ (ಡಿ.19): ವಿಧಾನ ಪರಿಷತ್ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಪ್ರಾಸ್ಟಿಟ್ಯೂಟ್ (ವೇ*) ಎಂಬ ಪದವನ್ನು ಬಳಕೆ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲಿಯೇ ಸುವರ್ಣ ಸೌಧದೊಳಗೆ ನುಗ್ಗಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ಮಾಡಿದ್ದಾರೆ.
ಸುವರ್ಣ ಸೌಧದಲ್ಲಿ ಭಾರೀ ಭದ್ರತಾ ಲೋಪ ಕಂಡುಬಂದಿದ್ದು, ಹುಚ್ಚ ಸಿಟಿ ರವಿ ಹೊರಗೆ ಬಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಎರಡನೇ ಬಾರಿಗೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಸುರ್ಣ ಸೌಧದ ವಿಐಪಿ ಗೇಟಿನ ಬಳಿ ಕಾರಿನಿಂದ ಇಳಿದಾಗ ಹಲ್ಲೆ ಯತ್ನದಿಂದ ತಪ್ಪಿಸಿಕೊಂಡು ಒಳಗೆ ಹೋದ ಸಿ.ಟಿ. ರವಿ ಅವರು ಒಳಗೆ ಹೋಗಿದ್ದಾರೆ. ನಂತರ, ಒಳಗೆ ಸೆಕ್ಯೂರಿಟಿ ಬಾಗಿಲಿನಿಂದ ಒಳಗೆ ಹೋಗುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಹಾಗೂ ಲಕ್ಷ್ಮೀ ಅವರ ಸಹೋದರ ಚನ್ನರಾಜ್ ಅವರ ಆಪ್ತನಿಂದ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲಾಗಿದೆ. ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಹಾಗೂ ಅವರ ಸಹೋದರ ಚೆನ್ನರಾಜ್ ಪಿಎ ಸದ್ದಾಂ ಅವರಿಂದ ಹಲ್ಲೆ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ತಡೆಯಲು ಬಂದರೂ ರವಿ ಅವರ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಇದಾದ ನಂತರ ರವಿ ಅವರನ್ನು ಗೇಟಿನ ಒಳಗೆ ಕರೆದೊಯ್ದು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆಯೇನು?
ಬೆಳಗಾವಿಯ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಿಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಣ್ಣೀರಿಡುತ್ತಾ ಪರಿಷತ್ ಸಭೆಯಿಂದ ಹೊರಗೆ ಹೋಗಿದ್ದು, ಸಭಾಪತಿ ಅವರ ಕಚೇರಿಗೆ ಹೋಗಿ ಕುಳಿತಿದ್ದಾರೆ. ಅಲ್ಲಿ ಸಭಾಪತಿ ಬಂದ ನಂತರ ಸಿ.ಟಿ. ರವಿ ವಿರುದ್ಧ ದೂರು ದಾಖಲಿಸಿ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದಾದ ನಂತರ ಸಿಟಿ ರವಿ ಪದ ಬಳಕೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಮೂಲಕ ಪರಿಶೀಲನೆ ಮಾಡುವುದಕ್ಕೆ ಸಭಾಪರಿ ಅವರಿಂದ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
Published by
