Couple viral video : ಅಂತರ್ಜಾಲದಲ್ಲಿ ಅನೇಕ ವೈರಲ್ ವೀಡಿಯೊಗಳು ನಮಗೆ ಆಶ್ಚರ್ಯ ಮತ್ತು ಆಘಾತವನ್ನುಂಟುಮಾಡುತ್ತವೆ. ಇದಲ್ಲದೆ, ಪ್ರಾಣಿಗಳಿಗಿಂತ ಮನುಷ್ಯರು ಮಾಡುವ ಕೆಲಸಗಳು ವೈರಲ್ ಆಗುವ ಸಾಧ್ಯತೆ ಹೆಚ್ಚು. ಹೆಚ್ಚಾಗಿ, ಕಾಮಿಡಿ ವಿಡಿಯೋಗಳು ವೈರಲ್‌ ಆಗಲ್ಲ, ಬದಲಿಗೆ ಸ್ವಾಭಾವಿಕವಾಗಿ, ನೈಜವಾಗಿ ನಡೆಯುವ ಘಟನೆಗಳ ವಿಡಿಯೋ ಟ್ರೆಂಡ್‌ ಆಗುತ್ತವೆ..

ಈ ಪೈಕಿ ಪತಿ-ಪತ್ನಿಯರ ನಡುವೆ ನಡೆದ ಜಗಳದ ದೃಶ್ಯವನ್ನು ಯಾರೋ ಒಬ್ಬರು ರೆಕಾರ್ಡ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಈಗ ವೈರಲ್ ಆಗುತ್ತಿದೆ. ವೀಡಿಯೊದ ಆರಂಭದಲ್ಲಿ, ಮಹಿಳೆಯೊಬ್ಬಳು ಟವೆಲ್‌ ಸುತ್ತಿಕೊಂಡು ಗಂಡನೊಂದಿಗೆ ಜಗಳವಾಡುತ್ತಿದ್ದಾಳೆ.

ಕೆಳಗಿನ ಮಹಡಿಯಲ್ಲಿ ಹೊಡೆದಾಟ ನಡೆಯುತ್ತಿದ್ದಂತೆ, ಮೇಲಿನ ಮಹಡಿಯಿಂದ ಡೌಸರ್‌ನೊಂದಿಗೆ ನಿಂತಿದ್ದ ಯುವಕ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ. ಮೇಲಕ್ಕೆ ಏರಲು ಪ್ರಯತ್ನಿಸಿ, ಸ್ವಲ್ಪ ಸಮಯದವರೆಗೆ ಬಾಲ್ಕನಿಯಲ್ಲಿ ನೇತಾಡಿ, ನಂತರ ಕೆಳಗೆ ಜಿಗಿಯುತ್ತಾನೆ. ಕಾಲಿಗೆ ಪೆಟ್ಟಾದರೂ ಕುಂಟುತ್ತಾ ತಪ್ಪಿಸಿಕೊಳ್ಳುತ್ತಾನೆ..

ಯುವಕ ಮಹಿಳೆಯ ಜೊತೆ ಹಾಸಿಗೆಯಲ್ಲಿ ಮಲಗಿರುವಾಗ ಪತಿ ಬಂದಿರಬಹುದು. ಇದನ್ನು ಅರಿತ ಮಹಿಳೆ ಗಂಡನ ಜೊತೆ ಜಗಳವಾಡುವ ನೆಪದಲ್ಲಿ ಪ್ರೇಮಿಗೆ ತಪ್ಪಿಸಿಕೊಳ್ಳಲು ಸಹಾಯಮಾಡಿದ್ದಾಳೆ ಅಂತ ನೆಟ್ಟಿಗರು ಊಹೆ ಮಾಡಿಕೊಂಡಿದ್ದಾರೆ.. ಇದು ಗಂಭೀರವಾಗಿ ಕಂಡರೂ, ವೀಡಿಯೋ ನೋಡುವವರಿಗೆ ಸಖತ್‌ ಖುಷಿ ಕೊಟ್ಟಿದೆ..

Published by

Leave a Reply

Your email address will not be published. Required fields are marked *