ಬೆಂಗಳೂರು, ಡಿಸೆಂಬರ್ 25: ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಳಿ, ಜೊತೆಗೆ ಆಗಾಗ ಬೀಳುವ ಮಂಜಿನ ವಾತಾವರಣ ಮುಂದುವರಿಯಲಿದೆ. ಇಂದು ಬುಧವಾರ (ಡಿಸೆಂಬರ್ 25) ನಗರದ ಕೆಲವೆಡೆ ಚದುರಿದಂತೆ ಹಗುರದಿಂದ ವ್ಯಾಪಕ ಮಳೆ ಆಗಬಹುದು. ವಿಶೇಷವೆಂದರೆ ಇದು ಹಿಂಗಾರು ಅವಧಿ ಆಗಿರುವ ಕಾರಣ ಮಳೆ ಜೊತೆಗೆ ಬಿಸಿಲಿನ ದರ್ಶನವು ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಬಂಗಾಳಕೊಲ್ಲಿ ಭಾಗದಲ್ಲಿ ಸಮುದ್ರ ಮೇಲ್ಮೈನಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದು ತಮಿಳುನಾಡು ಕರಾವಳಿ ಯತ್ತ ಚಲಿಸಲಿದೆ. ಈ ಕಾರಣದಿಂದ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನಲ್ಲಿ ಚಳಿ ವಾತವರಣ ನಿಧಾನವಾಗಿ ಹೆಚ್ಚಾಗುತ್ತಿದೆ.

ಕೆಲವು ವಾರಗಳ ಹಿಂದಿಷ್ಟು ಚಳಿ ನಗರದಲ್ಲಿ ಇಲ್ಲವಾದರೂ ನಿಧಾನಕ್ಕೆ ಹೆಚ್ಚಾಗುತ್ತಿದೆ. ಇಂದು ನಗರದಲ್ಲಿ ಅಲ್ಲಲ್ಲಿ ಮಳೆ ಬರುವ ಮುನ್ಸೂಚನೆ ಸಿಕ್ಕಿದೆ. ಜನರು ಆರೋಗ್ಯದತ್ತ ಗಮನ ಹರಿಸಬೇಕಿದೆ. ನಗರದಲ್ಲಿ ಕನಿಷ್ಠ ತಾಪಮಾನ 18 ಹಾಗೂ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮುಂದಿನ ಒಂದು ವಾರದಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ಐಎಂಡಿ ತಿಳಿಸಿದೆ.

ಬುಧವಾರ ಬೆಳಗ್ಗೆ ಕೊಂಚ ಮಬ್ಬು ವಾತಾವರಣ ಕಂಡು ಬರಬಹುದು. ಸಂಜೆ ಇಲ್ಲವೇ ರಾತ್ರಿ ಹೊತ್ತಿಗಾಗಲೇ ಅಲ್ಲಲ್ಲಿ ಹಗುರದಿಂದ ವ್ಯಾಪಕ ಮಳೆ ಸುರಿಯುವ ಸಾಧ್ಯತೆಗಳು ಇವೆ.

ರಾಜ್ಯದಲ್ಲಿ ಮುಂದುವರಿದ ಒಣಹವೆ

ಕರ್ನಾಟಕದಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗರುದಿಂದ ಸಾಧಾರಣವಾಗಿ ಮಳೆ ಆಗುವ ನಿರೀಕ್ಷೆ ಇವೆ. ಉತ್ತರ ಒಳನಾಡಿ, ಕರಾವಳಿ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯುವ ನಿರೀಕ್ಷೆ ಇದೆ. ಇಲ್ಲೆಲ್ಲೆ ಬೆಳಗ್ಗೆ ವಿಪರೀತ ಚಳಿ ಸೃಷ್ಟಿಯಾಗಿದೆ. ಮಧ್ಯಾಹ್ನ ಬಿರು ಬಿಸಿಲು ಕಂಡು ಬರುತ್ತಿದೆ.

ಒಂದು ವೇಳೆ ಚಂಡಮಾರುತದಲ್ಲಿನ ತೀವ್ರತೆ ಹೆಚ್ಚಾದರೆ ತಮಿಳುನಾಡು, ಕರ್ನಾಟಕದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾರಪುರ, ತುಮಕೂರು, ರಾಮನಗರ, ಮಂಡ್ಯ ಇನ್ನಿತರ ದಕ್ಷಿಣ ಒಳನಾಡಿನಲ್ಲಿ ಭಾರ ಮಳೆ ಬರಬಹುದು.

Published by

Leave a Reply

Your email address will not be published. Required fields are marked *