ತೆಲಂಗಾಣ: ಹೊಸ ವರ್ಷದ ಪ್ರಯುಕ್ತ ಇಲ್ಲಿನ ಬಾರೊಂದರಲ್ಲಿ ಮದ್ಯ(Alcohol) ಕಳ್ಳತನ ಮಾಡಲು ಬಂದ ವ್ಯಕ್ತಿ ಒಂದಿಷ್ಟು ನಗದು ಮತ್ತು ಕೆಲ ಮದ್ಯದ ಬಾಟಲಿಗಳನ್ನು ಕದ್ದ ಇತ, ಬಳಿಕ ಬಾರಲ್ಲಿಯೇ ಕಂಠಪೂರ್ತಿ ಕುಡಿದು ಬಾರ್​ನಲ್ಲಿಯೇ ಅಮಲಿನಲ್ಲಿ ಮಲಗಿದ್ದಾನೆ. ಮರುದಿನ ಮುಂಜಾನೆ ಮದ್ಯದಂಗಡಿ ತೆರೆದ ಮಾಲೀಕ ಗಾಬರಿಯಾಗಿದ್ದಾನೆ.

ಹೈದರಬಾದ್​ನ ಮೇದಕ್​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಇಲ್ಲಿ ಕನದುರ್ಗಾ ಬಾರ್​ನ ಮೇಲ್ಚಾವಣಿಯ ಹಂಚು ತೆಗೆದು ಬಾರ್​ನೊಳಗೆ ನುಗ್ಗಿದ ವ್ಯಕ್ತಿ ಮೊದಲು ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ. ಬಳಿಕ ಕಳ್ಳತನ ಮಾಡಿ, ಕುಡಿದು ಮಲಗಿದ್ದಾನೆ ಎಂದು ವರದಿಯಾಗಿದೆ.

ಬಾ ಗುರು ಕಥೆ ಕೇಳು ಚಾನೆಲ್ subscribe ಮಾಡಿ

ಇದೀಗ ಬಾರ್​ನಲ್ಲಿ ಸಿಕ್ಕರುವ ಇತನ ಪೋಟೋ ಭಾರಿ ವೈರಲ್​ ಆಗಿದೆ. ಕಂಠಪೂರ್ತಿ ಕುಡಿದ ಹಿನ್ನೆಲೆ ಇತನ ಗುರುತು ಪತ್ತೆಯಾಗಿಲ್ಲ. ಇತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಾರ್​ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಡೆದಿದ್ದೇನು?

ಎಂದಿನಂತೆ ರಾತ್ರಿ 10 ಗಂಟೆಗೆ ಬಾರ್​ ಮುಚ್ಚಲಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ವ್ಯಕ್ತಿ ತಡರಾತ್ರಿ ಕಳ್ಳತನ ಮಾಡಲು ಬಂದಿದ್ದಾನೆ. ಆದರೆ, ಬಾರ್​ನೊಳಗೆ ಬರುವ ಮುಂಚೆ ಪಾನಮತ್ತನಾಗಿದ್ದ ಇತ. ಮತ್ತಷ್ಟು ಕುಡಿದ್ದಾನೆ. ಹೀಗಾಗಿ, ಅಮಲಿನಲ್ಲಿದ್ದ ಇತ ಹೊರಗಡೆ ಹೊಗಲು ಆಗಿಲ್ಲ. ಅಲ್ಲಿಯೇ ಮಲಗಿದ್ದಾನೆ. ಇದನ್ನು ಬೆಳಗ್ಗೆ ಬಾರ್ ಮಾಲೀಕರು ಗಮನಿಸಿದ್ದಾರೆ. (ಏಜೆನ್ಸೀಸ್​).

Published by

twelvenewz.com

Leave a Reply

Your email address will not be published. Required fields are marked *