
ಕಳೆದ ಶನಿವಾರ ಅಯ್ಯಪ್ಪನಾ ದರ್ಶನಕ್ಕೆ ಹೊರಟ್ಟಿದ ಹುಣಸೂರು ತಾಲ್ಲೂಕು ಮೈಸೂರೂ ಜಿಲ್ಲೆಯ ಬಿಳಿಕೆರೆ ಗ್ರಾಮದ ಅಯ್ಯಪ್ಪ ಭಕ್ತರ ಬಸ್ ಒಂದು ಕೇರಳದ ಮಾನಂದವಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಸದ್ಯ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಭಕ್ತರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಸ್ನಲ್ಲಿ ಸುಮಾರು 47 ಮಂದಿ ಅಯ್ಯಪ್ಪ ಭಕ್ತರು ಇರುವುದು ಮಾಹಿತಿ ಯಿಂದ ಹೊರಬಿದ್ದಿದೆ. ಅದೃಷ್ಟವಾಸತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ

