Oplus_131072

ಬೆಂಗಳೂರು, ನವೆಂಬರ್‌ 20: ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದೆ. ಮತದಾನದ ಬೆನ್ನಲ್ಲೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೂ ಹೊರ ಬಿದ್ದಿದ್ದು, ಜಿದ್ದಾಜಿದ್ದಿನಿಂದ ಕೂಡಿದ ಎರಡು ರಾಜ್ಯದಲ್ಲಿ ಎನ್​ಡಿಎ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ನಡುವೆ ಕರ್ನಾಟಕದ ಮೂರು ಕ್ಷೇತ್ರದ ಅಚ್ಚರಿ ಸಮೀಕ್ಷೆ ಹೊರಬಿದ್ದಿದೆ.ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನವೆಂಬರ್‌ 13 ರಂದು ನಡೆದಿದ್ದು, ನವೆಂಬರ್ 23ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದಕ್ಕೂ ಮೊದಲು ಮೂರು ಕ್ಷೇತ್ರಗಳಿಲ್ಲಿ ಎನ್​ಡಿಎ ಹಾಗೂ ಕಾಂಗ್ರೆಸ್​ ಎಷ್ಟೆಷ್ಟು ಗೆಲ್ಲಬಹುದು ಎಂದು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಪಿಮಾರ್ಕ್​ ಸಮೀಕ್ಷೆಅಚ್ಚರಿಯ ಅಂಕಿ ಅಂಶವನ್ನ ಪ್ರಕಟಿಸಿದೆ.

By Election Channapatna Shiggaon and Sandur Assembly exit poll

ಪಿ ಮಾರ್ಕ್​ ಸಮೀಕ್ಷೆ ಪ್ರಕಾರ ಮೂರು ಕ್ಷೇತ್ರಗಳ ಪೈಕಿ ಎನ್​ಡಿಎ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲಿದೆ. ಈ ಮೂಲಕ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯನ್ನು ಜೆಡಿಎಸ್​ ಮತ್ತು ಬಿಜೆಪಿ ವಶಪಡಿಸಿಕೊಳ್ವುಳುವ ಸಾಧ್ಯತೆಗಳಿವೆ. ಇನ್ನು ಸಂಡೂರು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಹಿರಿಯ ಶಾಸಕ ಸಿಪಿ ಯೋಗೇಶ್ವರ್‌ ವಿರುದ್ಧ ಸ್ಪರ್ಧಿಸಿದ್ದು, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರು ಕಾಂಗ್ರೆಸ್‌ನ ಯಾಸಿರ್ ಅಹಮದ್ ಖಾನ್ ಸ್ಪರ್ಧಿಸಿದ್ದಾರೆ. ಇನ್ನೂ ಸಂಡೂರಿನಲ್ಲಿ ಬಿಜೆಪಿಯ ಬಂಗಾರು ಹನುಮಂತು ಅವರಿಗೆ ಬಳ್ಳಾರಿ ಸಂಸದ ಇ ತುಕಾರಾಂ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಇ ಅನ್ನಪೂರ್ಣ ಅವರು ಕಣಕ್ಕಿಳಿದಿದ್ದರು.ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್‌ನ ಇ ತುಕಾರಾಂ ಕೇಂದ್ರ ಸಚಿವರಾಗಿ ನೇಮಕಗೊಂಡ ನಂತರ ಮೂರು ವಿಧಾನಸಭಾ ಸ್ಥಾನಗಳು ತೆರವಾದ ಕಾರಣ ಉಪಚುನಾವಣೆ ನಡೆಸಲಾಯಿತು.

ಸರಿಸುಮಾರು 770 ಮತಗಟ್ಟೆಗಳಲ್ಲಿ 7,00,000 ಕ್ಕೂ ಹೆಚ್ಚು ಅರ್ಹ ಮತದಾರರನ್ನು ಹೊಂದಿದ್ದು, ಒಟ್ಟು 45 ಅಭ್ಯರ್ಥಿಗಳು ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಉಪಚುನಾವಣೆಯ ಫಲಿತಾಂಶ ನವೆಂಬರ್ 23 ರಂದು ನಿಗದಿಯಾಗಿದೆ.ಇನ್ನೂ ಆಡಳಿತರೂಢ ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಇತ್ತ ಬಿಜೆಪಿ – ಜೆಡಿಎಸ್‌ ಮೈತ್ರಿ ಕೂಡ ಮೂರು ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಗೆಲ್ಲುವುದು ಪಕ್ಕಾ. ಇನ್ನು ಸಂಡೂರಿನಲ್ಲಿ ಈ ಬಾರಿ ಹೊಸ ಬದಲಾವಣೆ ಬಯಸಿ ಜನ ಎನ್​ಡಿಎಗೆ ಆಶೀರ್ವಾದ ಮಾಡಿದ್ದಾರೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇತ್ತು. ಆದರೆ, ಈ ಬಾರೀ ಮೂರು ಕ್ಷೇತ್ರದಲ್ಲಿ ಒಂದೊಂದು ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಈ ಬಾರಿ ಉಪಚುನಾವಣೆ ನಡೆದಿರುವ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಈ ಮೊದಲು ಕ್ರಮವಾಗಿ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಶಾಸಕರಿದ್ದರು. ಅದೇ ರೀತಿ ಈಗ ನಡೆದಿರುವ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಒಂದೊಂದು ಸ್ಥಾನದ ಸಾಧ್ಯತೆ ಬಗ್ಗೆ ಗುಪ್ತಚರ ವಿಭಾಗ ಅಂದಾಜಿಸಿದೆ ಎಂದು ತಿಳಿದುಬಂದಿದೆ.

Published by

twelvenewz.com

✍️ಪ್ರಶಾಂತ ಎಚ್ ವಿ

Leave a Reply

Your email address will not be published. Required fields are marked *