
ಕಳೆದ ವಾರ ನಡೆದ ಕರ್ನಾಟಕ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಗಳಿಸುವ ಅತ್ತ ಮುನ್ನುಗ್ಗುತ್ತಿದೆ.

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆ ಸುಮಾರು 20000 ಸಾವಿರ ಮತಗಳ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಉಳಿದ 7 ಸುತ್ತುಗಳಲ್ಲಿ ಸಮಬಲದ ಪೈಪೋಟಿ ಏರ್ಪಡಬಹುದು ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಆಗಿದ್ದರೆ ಸಿ ಪಿ ಯೋಗೇಶ್ವರ್ ಸುಮಾರು 14 ರಿಂದ 18 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಾಣಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಸಿಗ್ಗಾವಿಯಲ್ಲೂ ಕೂಡ ಭರತ್ ಬೊಮ್ಮಾಯಿ 12000 ಸಾವಿರ ಮತಗಳ ಹಿನ್ನೆಡೆಯನ್ನು ಅನುಭವಿಸುತ್ತಿದ್ದಾರೆ ಯಾಸಿರ್ ಪಠಾಣ್ ಗೆ ಗೆಲುವು ಸನ್ನಿಹಿತವಾಗಿದೆ
ಬಳಿಕ ಸಂಡೂರು ಕಾಂಗ್ರೆಸ್ ಕೋಟೆ ಆಗಿದ್ದರು ಸ್ವಲ್ಪ ಮಟ್ಟಿಗೆ ಬಿಜೆಪಿ ಹಿನ್ನೆಡೆ ಅನುಭವಿಸುತ್ತಿದೆ ಆದರೆ ಇತ್ತೀಚಿನ ವರದಿ ಪ್ರಕಾರ ಸಂಡೂರು ಕ್ಷೇತ್ರದ ಅನ್ನಪೂರ್ಣೇಶ್ವರಿ ಅವರು 7000 ಸಾವಿರ ಮತಗಳ ಮುನ್ನಡೆಯನ್ನು ಪಡೆದ್ದಿದ್ದಾರೆ