
ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆಯೇ ಅವರ ವಿರುದ್ದ ಟ್ರೋಲ್ ಗಳ ಸುರಿಮಳೆ ಪ್ರಾರಂಭವಾಗಿದೆ. ಈ ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್ ಟ್ರೋಲ್ ಮುಖಾಂತರ ವಿಶ್ವವಿಖ್ಯಾತರಾಗಿದ್ದ ನಿಖಿಲ್ ಕುಮಾರಸ್ವಾಮಿ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನಗೆಪಾಟಲಿಗೆ ಈಡಾಗಿದ್ದಾರೆ.
ಒಬ್ಬ ಎಕ್ಸ್ ಬಳಕೆದಾರರು, ನಿಖಿಲ್ ಕುಮಾರಸ್ವಾಮಿಯವರೇ ರಾಜಕಾರಣ ನಿಮಗೆ ಹೇಳೀ ಮಾಡಿಸಿದ್ದಲ್ಲ. ಎಷ್ಟು ಸಲ ಸೋಲುತ್ತೀರಿ? ನೀವು ರಾಜಕೀಯಕ್ಕಿಂತ ಚಿತ್ರರಂಗದಲ್ಲಿರುವುದೇ ಮೇಲು ಎಂದು ಹೇಳಿದ್ದರೆ, ಮತ್ತೊಬ್ಬರು ಅಂಬರೀಶ್ ಅಭಿನಯದ ಡ್ರಾಮಾ ಸಿನಿಮಾದ ಹಾಡನ್ನು ಉಲ್ಲೇಖಿಸಿ ಬೊಂಬೆ ಆಡ್ಸೋನು ಮೇಲು ಕುಂತವ್ನೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಮತ್ತೊಬ್ಬರು ನಿಖಿಲ್ ಕುಮಾರಸ್ವಾಮಿ ಪ್ರಚಾರದ ಸಮಯದಲ್ಲಿ ಕಣ್ಣೀರು ಹಾಕಿಕೊಂಡಿರುವ ವಿಡಿಯೋವನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.
ಒಟ್ಟಾರೆ ಟ್ರೋಲು ಮತ್ತು ಸೋಲುಗಳ ಚಕ್ರವ್ಯೂಹದಲ್ಲಿ ಅಭಿನವ ಅಭಿಮನ್ಯು ನಿಖಿಲ್ ಚಕ್ರವರ್ತಿ ಸಿಲುಕಿಬಿದ್ದಿದ್ದಾರೆ.
https://www.instagram.com/reel/DCl2fk3Sb0F/?igsh=MWxlY3FwaTM5eDlyaA==
Published by
twelvenewz.com
edited by – navasamaja.com