ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ.

ಇದರಲ್ಲಿ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.21.90 ಲಕ್ಷವಾದರೆ, ಮಹೀಂದ್ರಾ BE 6e (Mahindra BE 6e) ಬೆಲೆಯು ರೂ.18.90 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಮಹೀಂದ್ರಾ ಕಂಪನಿಯು INGLO ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಇವಿ-ನಿರ್ದಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಕೆಲವು ಭವಿಷ್ಯದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಇರಿಸಲು ಉದ್ದೇಶಿಸಲಾಗಿದೆ. ಮಹೀಂದ್ರಾ XEV 9e ಎಲೆಕ್ಟ್ರಿಕ್ ಕಾರು ತ್ರಿಕೋನ ಎಲ್‌ಇಡಿ ಹೆಡ್‌ಲ್ಯಾಂಪ್ ಕಾನ್ಫಿಗರೇಶನ್ ಅನ್ನು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಇರ್ನವರ್ಟಡ್ ಎಲ್-ಆಕಾರದ ಕನೆಕ್ಟಿವಿಟಿಯು LED DRL ಗಳೊಂದಿಗೆ LED ಟೈಲ್‌ಲೈಟ್‌ಗಳನ್ನು ಸಂರ್ಪಕಿಸುತ್ತದೆ.

ಈ ಮಹೀಂದ್ರಾ BE 6e ಎಲೆಕ್ಟ್ರಿಕ್ ಕಾರು ಫಾಂಟ್ ಲೈನ್ ಗಳು, ಬೃಹತ್ ವ್ಹೀಲ್ ಅರ್ಚಾರ್ ಗಳು, ಸಿ-ಆಕಾರದ LED DRL ಗಳು ಮತ್ತು ನಯವಾದ ಬಂಪರ್ ಅನ್ನು ಒಳಗೊಂಡಿದೆ. ಇನ್ನು ಏರೋಡೈನಾಮಿಕ್ ಖಚಿತಪಡಿಸಿಕೊಳ್ಳಲು ಹುಡ್ ಸ್ಕೂಪ್ ಅನ್ನು ಹೊಂದಿದೆ ಮತ್ತು ಹುಡ್‌ನಲ್ಲಿ BE ಲೋಗೋವನ್ನು ಹೊಂದಿದೆ. ಈ ಎಸ್‍ಯುವಿ ಆಪ್ಟಿಮೈಸ್ಡ್ 20-ಇಂಚಿನ ವ್ಹೀಲ್ ಗಳೊಂದಿಗೆ ಬರುತ್ತದೆ.

ಮಹೀಂದ್ರಾ XEV 9e ಮತ್ತು BE 6e ಎರಡೂ ಎಲೆಕ್ಟ್ರಿಕ್ ಕಾರುಗಳು ಡ್ರೈವರ್-ಕೇಂದ್ರಿತ ಕ್ಯಾಬಿನ್‌ಗಳೊಂದಿಗೆ ಬರುತ್ತವೆ. ಈ ಎಸ್‍ಯುವಿಗಳ ಕ್ಯಾಬಿನ್ ವಿನ್ಯಾಸಕ್ಕಾಗಿ ಫೈಟರ್ ಜೆಟ್‌ಗಳಿಂದ ಸ್ಫೂರ್ತಿ ಪಡೆದಿದೆ ಎಂದು ಕಾರು ತಯಾರಕರು ಹೇಳಿಕೊಂಡಿದ್ದಾರೆ. XEV 9e ಕ್ಯಾಬಿನ್‌ನಲ್ಲಿನ ಹೈಲೈಟ್ ಟ್ರಿಪಲ್-ಸ್ಕ್ರೀನ್ ಸೆಟಪ್ ಆಗಿದ್ದು, ಮೂರು 12.3-ಇಂಚಿನ ಡಿಸ್ಪ್ಲೇಗಳನ್ನು ಮಹೀಂದ್ರಾದ ಅಡ್ರೆನಾಕ್ಸ್ ಸಾಫ್ಟ್‌ವೇರ್‌ನಿಂದ ನಡೆಸುತ್ತದೆ.

ಎರಡೂ ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಡಿಸ್ ಪ್ಲೇ ಗಳನ್ನು ಹೊಂದಿವೆ. ಈ ಮಹೀಂದ್ರಾ XEV 9e ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ADAS ಸೂಟ್ ಅನ್ನು ಪಡೆಯುತ್ತದೆ. ಈ ಮಹೀಂದ್ರಾ BE 6e ಲೋಗೋದೊಂದಿಗೆ ದೊಡ್ಡ ಸನ್‌ರೂಫ್ ಅನ್ನು ಪಡೆಯುತ್ತದೆ. ಈ BE 6e ಎಲೆಕ್ಟ್ರಿಕ್ ಕಾರಿನ ADAS ಸೂಟ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು ಈ ಎರಡೂ ಎಸ್‌ಯುವಿಗಳಲ್ಲಿ 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಮತ್ತೊಂದು ಪ್ರಮುಖ ವೈಶಿಷ್ಟ್ಯವಾಗಿದೆ. ಮಹೀಂದ್ರಾ INGLO ಪ್ಲಾಟ್‌ಫಾರ್ಮ್ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತಿದೆ. ಇವುಗಳು 59 kWh ಮತ್ತು 79 kWh ಯುನಿಟ್ ಗಳಾಗಿವೆ. ಆರಂಭದಲ್ಲಿ, ಚಿಕ್ಕ ಬ್ಯಾಟರಿ ಪ್ಯಾಕ್ ರೂಪಾಂತರಗಳು ಮಾತ್ರ ಲಭ್ಯವಿರುತ್ತವೆ.

ಮಹೀಂದ್ರಾ XEV 9e ಮತ್ತು BE 6e ಗಳು ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇನ್ನು ಈ ಎರಡೂ ಎಲೆಕ್ಟ್ರಿಕ್ ಎಸ್‍ಯುವಿಗಳು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂಡಿದೆ. 175 kW DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 20 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ಈ ಮಹೀಂದ್ರಾ XEV 9e ಮತ್ತು BE 6e ಎಲೆಕ್ಟ್ರಿಕ್ ಎಸ್‍ಯುವಿಗಳ ಪವರ್‌ಟ್ರೇನ್‌ಗಳು 224 bhp ಮತ್ತು 278 bhp ನಡುವೆ ಪವರ್ ಅನ್ನು ಉತ್ಪಾದಿಸುತ್ತದೆ, ಇನ್ನು 79 kWh ಬ್ಯಾಟರಿ ಪ್ಯಾಕ್ ಫುಲ್ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಒಟ್ಟಾರೆಯಾಗಿ ಈ ಎರಡು ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತದಲ್ಲಿ ಸಂಚಲನವನ್ನು ಸೃಷ್ಟಿಸುವಲ್ಲಿ ಯಶ್ವಸಿಯಾಗಿದೆ.

Published by

twelvenewz.com

Leave a Reply

Your email address will not be published. Required fields are marked *