ಚಿನ್ನ ಎಂದರೆನೇ ಹೂಡಿಕೆ. ಚಿನ್ನವನ್ನು ಹಲವರು ಖರೀದಿ ಮಾಡುವುದೇ ಕಷ್ಟದ ಸಮಯದಲ್ಲಿ ಚಿನ್ನ ನಮ್ಮ ಕೈಹಿಡಿಯುತ್ತದೆ ಎನ್ನುವ ಕಾರಣಕ್ಕೆ. ಆದರೆ, ಇದೀಗ ಚಿನ್ನದ ವಿಚಾರದಲ್ಲಿ ಆರ್‌ಬಿಐ ಮಹತ್ವದ ಬದಲಾವಣೆಯನ್ನು ತರಲು ಸೂಚನೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನವನ್ನು ಅಡಮಾನ ಇರಿಸುವುದರಲ್ಲಿ ಒಂದಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲ ನೀಡುವ ವಿಚಾರದಲ್ಲಿ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಅಥವಾ ಇರುವ ತಪ್ಪುಗಳನ್ನು ತೋರಿಸಿದೆ. ಇದರಿಂದ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್‌ಗಳು ಮತ್ತು ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳು ಇನ್ಮುಂದೆ ಕಂತಿನಲ್ಲಿ ಸಾಲ ತೀರಿಸುವ ಪದ್ಧತಿಯನ್ನು ಪರಿಚಯಿಸಲು ಮುಂದಾಗುತ್ತಿವೆ.

ಈ ಹೊಸ ಬದಲಾವಣೆಯಿಂದಾಗಿ ಚಿನ್ನದ ಮೇಲೆ ಸಾಲ ಪಡೆದುಕೊಳ್ಳುವವರಿಗೆ ಸ್ವಲ್ಪ ಕಷ್ಟವೇ ಆಗಲಿದೆ. ಸಾಮಾನ್ಯವಾಗಿ ಚಿನ್ನವನ್ನು ಅಡಮಾನ ಇರಿಸಿ ಸಾಲ ಪಡೆದುಕೊಂಡರೆ, ಅದನ್ನು ಒಂದೇ ಬಾರಿ ತೀರಿಸಿ ಅದನ್ನು ಬಿಡಿಸಿಕೊಳ್ಳಲಾಗುತ್ತದೆ. ಆ ಸಾಲವನ್ನು ತೀರಿಸುವ ವರೆಗೂ ಬಡ್ಡಿ ಮಾತ್ತ ಕಟ್ಟಲಾಗುತ್ತದೆ. ಆದರೆ, ಅದರಲ್ಲಿ ಇದೀಗ ಕೆಲವೊಂದು ಬದಲಾವಣೆಗಳು ಆಗುವ ಸಾಧ್ಯತೆ ಇದೆ.

ನೀವು ಸಾಲವನ್ನು ಪಡೆದುಕೊಂಡ ಕೂಡಲೇ ಅಂದರೆ ಉಳಿದ ವಸ್ತುಗಳನ್ನು ಖರೀದಿ ಮಾಡಿದ ಮೇಲೆ ಪ್ರತಿ ತಿಂಗಳು ಇಎಂಐ ಪಾವತಿ ಮಾಡುವ ರೀತಿಯಲ್ಲೇ ಪ್ರತಿ ತಿಂಗಳು ಬಡ್ಡಿ ಮತ್ತು ಅಸಲು ಪಾವತಿ ಮಾಡುವಂತೆ ಚಿನ್ನವನ್ನು ಅಡಮಾನ ಇರಿಸುವವರಿಗೆ ಸೂಚನೆ ನೀಡುವ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಚಿನ್ನವನ್ನು ಅಡಮಾನ ಇರಿಸಿದ ಮೊದಲ ತಿಂಗಳಿನಿಂದಲೇ ಇದು ಪ್ರಾರಂಭವಾಗುವ ಸಾಧ್ಯತೆ ಇದೆ.

ಇದಲ್ಲದೆ ಚಿನ್ನವನ್ನು ಅಡಮಾನ ಇರಿಸುವಾಗ ಟರ್ಮ್‌ಲೋನ್‌ ಮಾರ್ಗವನ್ನು ಅನುಸರಿಸಲು ಸಹ ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ. ಈಗ ನೀವು ಚಿನ್ನವನ್ನು ಅಡಮಾನ ಇರಿಸಿದರೆ, ಕೊನೆಯ ಹಂತದಲ್ಲಿ ಅದನ್ನು ಬಿಡಿಸಿಕೊಳ್ಳುವಾಗ ಒಟ್ಟು ಹಣ ನೀಡಿ ಬಿಡಿಸಿಕೊಳ್ಳಬಹುದು ಹೊಸ ಮಾರ್ಗದಲ್ಲಿ ಈ ರೀತಿ ವ್ಯವಸ್ಥೆ ಇರುವುದಿಲ್ಲ. ನೀವು ಅಸಲು ಹಾಗೂ ಬಡ್ಡಿಯನ್ನು ಏಕಕಾಲಕ್ಕೆ ಕಟ್ಟಬೇಕಾಗುತ್ತದೆ. ಇದರಿಂದ ಹೊರೆಯಾಗಲಿದೆ. ಯಾಕೆಂದರೆ ಚಿನ್ನವನ್ನು ಅಡಮಾನ ಇರಿಸುವ ಮುಖ್ಯ ಕಾರಣವೇ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯವಾಗಲಿ ಅಂತ. ಬಡ್ಡಿ ಹಾಗೂ ಅಸಲನ್ನು ಒಂದೇ ಬಾರಿ (ಪ್ರತಿ ತಿಂಗಳೂ Emi) ಇಂತಿಷ್ಟು ಅಂತ ಕಟ್ಟುವುದಾದರೆ ರಿಸ್ಕ್‌ ಆಗಲಿದೆ.

ಇನ್ನು ಈಗ ಇರುವ ಪದ್ಧತಿಯಲ್ಲಿ ಎರಡು ಆಯ್ಕೆಗಳು ಇದ್ದವು. ಚಿನ್ನವನ್ನು ಅಡಮಾನ ಇರಿಸಿದವರು ಅವರ ಬಳಿ ಹಣವಿದ್ದಾಗ ಸಾಲದ ಅವಧಿ ಅಂತ್ಯವಾಗುವುದರ ಮೊದಲು ಅಸಲು ಹಾಗೂ ಬಡ್ಡಿ ಮೊತ್ತವನ್ನು ಪಾವತಿಸುವುದರೊಂದಿಗೆ ಮರು ಪಾವತಿಯ ಆಯ್ಕೆಯನ್ನು ಕೊಡಲಾಗಿತ್ತು. ಆದರೆ, ಚಿನ್ನದ ಅಡಮಾನದಲ್ಲಿನ ಲೋಪಗಳನ್ನು ಆರ್‌ಬಿಐ ಗುರುತು ಮಾಡಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಹೇಳಿದೆ ಎನ್ನಲಾಗಿದೆ.

ಎಷ್ಟಿದೆ ಚಿನ್ನದ ಬೆಲೆ ?

ನವೆಂಬರ್‌ 29ಕ್ಕೆ ಚಿನ್ನದ ಬೆಲೆಯು 24 ಕ್ಯಾರೆಟ್‌ಗೆ ಪ್ರತಿ 100 ಗ್ರಾಂಗೆ 7,81,100 ರೂಪಾಯಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುವುದು ಸಾಮಾನ್ಯ ಎನ್ನುವಂತೆ ಇದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯು ಎರಡು ಪಟ್ಟಾಗಿದೆ. ಇದೇ ಕಾರಣಕ್ಕೆ ಚಿನ್ನ ಮೇಲೆ ಹೂಡಿಕೆ ಮಾಡುವುದು ಯಾವಾಗಲೂ ಲಾಭದಾಯಕ ಎನ್ನಲಾಗುತ್ತದೆ.

Published by

twelvenewz.com

Leave a Reply

Your email address will not be published. Required fields are marked *