ಬೆಂಗಳೂರು: ಅವರಿಬರು ಅಣ್ಣ ತಮ್ಮ ಇಬ್ರು..ಅಕ್ಕ ತಂಗಿಯರನ್ನೇ ಮಧುವೆ ಹಾಗಿದ್ರು ..ಅಕ್ಕ ತಂಗಿ ಒಂದೇ ಮನೆಯಲ್ಲಿದ್ರೆ ಯಾವುದೇ ಜಗಳ,ಗಲಾಟೆ ಆಗಲ್ಲ ಅಂತಾನೆ ಅಂದುಕೊಂಡಿದ್ರು..ಆದ್ರೆ ಮನೆಗೆ ಬರ್ತಿದ್ದ ಗಂಡನ ಸ್ನೇಹಿತನ ಜೊತೆಗೆ ಪತ್ನಿ ಹಾಗೂ ನಾದಿನಿಗೆ ಸಲುಗೆ ಹೆಚ್ಚಾಗಿಬಿಟ್ಟಿತ್ತು..ಅದೇ ಸಲುಗೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ..ಇದರ ಕಂಪ್ಲೀಟ್ ಡೀಟೇಲ್ಸ್ ತೋರಿಸ್ತೀವಿ ನೋಡಿ..

ಅಭಿಷೇಕ್ ,ಅವಿನಾಶ್ ಕುಟುಂಬದ ಮಧ್ಯೆ ಕಾರ್ತಿಕ್ ಎಂಬಾತ ಎಂಟ್ರಿ ಕೊಟ್ಟಿದ್ದ. ಅಕ್ಕ ತಂಗಿಯಾದ ನಿಖಿತಾ ಮತ್ತು ನಿಶ್ಚಿತ ಜೊತೆಗೆ ಸ್ನೇಹ ಬೆಳೆಸಿ ಸಂಬಂಧ ಮಾಡಿದ್ನಂತೆ.ಇದೇ ವಿಚಾರಕ್ಕೆ ಅಭಿಷೇಕ್ ಹಾಗೂ ನಿಖಿತಾ ನಡುವೆ ಗಲಾಟೆ ನಡೆದು ದೂರವಾಗಿದ್ರು.‌ಇತ್ತ ಅವಿನಾಶ್ ಕೂಡ ತನ್ನ ಪತ್ನಿ ಜೊತೆಗೆ ಕಾರ್ತಿಕ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಇಷ್ಟೆ ಅಲ್ಲದೆ ಕಾರ್ತಿಕ್ ಮತ್ತು ಅವಿನಾಶ್ ನಡುವೆ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತಂತೆ. ಕಾರ್ತಿಕ್ ಅವಿನಾಶ್ ಗೆ 50 ಸಾವಿರ ಹಣ ನೀಡಿದ್ದ..

ಈ ಮಧ್ಯೆ ನವಂಬರ್ 27 ರಂದು ಅಭಿಶೇಕ್ ಹಣ ಕೊಡ್ತೀನಿ ಅಂತಾ ಕಾರ್ತಿಕ್ ನನ್ನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಅಂಧ್ರಳ್ಳಿ ಅನುಪಮ ಶಾಲೆ ಬಳಿ ಕರೆಸಿಕೊಂಡಿದ್ದ…ಈ ವೇಳೆ ಮಾತಿಗೆ ಮಾತು ಬೆಳೆದು..ಅಭಿಶೇಕ್ ಮೇಲೆ ಕಾರ್ತಿಕ್ ಹಲ್ಲೆ ನಡೆಸಿದ್ದ. ಕಾರ್ತಿಕ್, ಚೇತನ್ ಕೈಯಲ್ಲಿದ್ದ ಕಡಗದಿಂದ ಅಭಿಶೇಕ್ ಗೆ ಹಲವು ಬಾರಿ ತಲೆಗೆ ಗುದ್ದಿದ್ದಾರೆ. ಈ ವೇಳೆ ಅಭಿಶೇಕ್ ಪತ್ನಿ ನಿಖಿತಾ, ಅವಿನಾಶ್ ಪತ್ನಿ ನಿಶ್ಚಿತ ಹಾಗೂ ಅವ್ರ ತಾಯಿ ಮಂಜುಳಾ ಕೂಡ ಸ್ಥಳದಲ್ಲೆ ಇದ್ದು ಅಭಿಶೇಕ್ ಗೆ ಹಲ್ಲೆ ನಡೆಸುವಂತೆ ಪ್ರೇರಪಣೆ ನೀಡಿದ್ರಂತೆ. ಇನ್ನು ಗಾಯಾಳು ಅಭಿಶೇಕ್ ತಲೆಗೆ ತೀವ್ರ ಪೆಟ್ಟಾಗಿ ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಇನ್ನ ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಬ್ಯಾಡರಹಳ್ಳಿ ಪೊಲೀಸ್ರು ಆರೋಪಿಗಳಾದ ಕಾರ್ತಿಕ್, ಚೇತನ್, ನಿಖಿತಾ,ನಿಶ್ಚಿತಾಳನ್ನ ಬಂಧಿಸಿದ್ದಾರೆ. ಇನ್ನು ಅಭಿಷೇಕ್ ತನ್ನ ಪತ್ನಿಯನ್ನ ಎಷ್ಟು ಪ್ರೀತಿಸ್ತಿದ್ದ ಅಂದ್ರೆ ತನ್ನ ದೇಹದ ಮೇಲೆ ಆಕೆಯ ಫೋಟೊ ಟ್ಯಾಟೂ ಹಾಕಿಸಿಕೊಂಡು ನಿಕ್ಕಿ ಎಂದು ಬರೆಸಿಕೊಂಡಿದ್ದ…ಆದ್ರೆ ಆತನ ಪ್ರೀತಿಯನ್ನು ಅರಿತುಕೊಳ್ಳದ ಈ ನೌಟಂಕಿ ನಿಖಿತಾ ಪರ ಪುರುಷನ ಸಹವಾಸ ಮಾಡಿ ಗಂಡನನ್ನೇ ಬಲಿ ಪಡೆದುಕೊಂಡಿರೋದು ಮಾತ್ರ ನಿಜಕ್ಕೂ ದುರಂತ.

Published by

Leave a Reply

Your email address will not be published. Required fields are marked *