
ಲಕ್ನೌ : 20 ವರ್ಷಗಳಿಂದ ಕೆಮಿಕಲ್ ಹಾಲು ಮತ್ತು ಪನೀರ್ ಮಾರಾಟ ಮಾಡುತ್ತಿದ್ದ ಡೈರಿ ವ್ಯಾಪಾರಿಯೊಬ್ಬನನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಅಗರ್ವಾಲ್ ವ್ಯಾಪಾರಿಗಳ ಮಾಲೀಕ ಅಜಯ್ ಅಗರ್ವಾಲ್ ಬಂಧಿತ ವ್ಯಕ್ತಿ. ಖಚಿತ ಮಾಹಿತಿಯ ಮೇರೆಗೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಅಗರ್ವಾಲ್ ಡೈರಿ ಹಾಗೂ ಗೋಡೌನ್‌ನ ಮೇಲೆ ದಾಳಿ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ಈ ಹಾಲು ನಿಜವಾದ ಹಾಲಿನಂತೆ ಕಾಣಲು ರಾಸಾಯನಿಕಗಳಲ್ಲಿ ಕೃತಕ ಸಿಹಿಕಾರಕಗಳು ಮತ್ತು ಸುವಾಸನೆಗಳನ್ನು ಬೆರೆಸುವುದು ಪತ್ತೆ ಆಗಿದೆ. ಅಜಯ್ ಅರ್ಗವಾಲ್ 20 ವರ್ಷಗಳಿಂದ ಸಿಂಥೆಟಿಕ್ ಹಾಲು ಮತ್ತು ಪನೀರ್ ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಅಗರ್ವಾಲ್ ನಕಲಿ ಹಾಲನ್ನು ತಯಾರಿಸಲು ಬಳಸಿದ ರಾಸಾಯನಿಕಗಳನ್ನು ಇನ್ನೂ ಅಧಿಕಾರಿಗಳು ತಿಳಿಸಿಲ್ಲ.
Published by
