
ಚಂಡಮಾರುತ ಪರಿಣಾಮ ಮಳೆ ಆರ್ಭಟ ಮತ್ತೆ ಶುರುವಾಗಿದೆ, ಹೀಗೆ ಸೈಕ್ಲೋನ್ ಹಿನ್ನೆಲೆ ಮಳೆ ಆರ್ಭಟ ಹೆಚ್ಚಾದ ಕಾರಣ ಜನ ಜೀವನ ಅಸ್ತವ್ಯಸ್ಥ ಆಗಿದೆ. ಮತ್ತೊಂದು ಕಡೆ ಚಳಿ ಪ್ರಮಾಣ ಕೂಡ ಹೆಚ್ಚಾಗಿದ್ದು, ಜನರು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ದಕ್ಷಿಣ ಭಾರತದಲ್ಲಿ ಮಳೆ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಂಗಾಳ ಕೊಲ್ಲಿಯ ಭಾಗದಲ್ಲಿ ಇದೀಗ ವಾತಾವರಣ ಚಂಡಮಾರುತದ ರೂಪ ಪಡೆದಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತಕ್ಕೆ ಮತ್ತೆ ಭಾರಿ ಭರ್ಜರಿ ಮಳೆಯ ಆಗಮನ ಆಗುತ್ತಿದೆ. ಡಿಸೆಂಬರ್ 12 ಅಂದ್ರೆ ಇಂದಿನಿಂದ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ ಅಬ್ಬರಿಸುವ ಎಚ್ಚರಿಕೆ ನೀಡಲಾಗಿದೆ. ಹೊಸ ಚಂಡಮಾರುತದ ಆರ್ಭಟ ಶುರುವಾಗಿದ್ದು, ಬಂಗಾಳ ಕೊಲ್ಲಿ ಪ್ರದೇಶ ಅಲ್ಲಾಡಿ ಹೋಗಿದೆ. ಹೀಗಾಗಿ ಈಗಾಗಲೇ ತಮಿಳುನಾಡು ಸೇರಿದಂತೆ ಕೇರಳ ಹಾಗೂ ಶ್ರೀಲಂಕಾ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಹೌದು, ಭಾರಿ ಮಳೆ ಅಪ್ಪಳಿಸುವ ಕಾರಣ ಇದೀಗ ತಮಿಳುನಾಡು & ಕೇರಳ ರಾಜ್ಯದ ಜನ ನಡುಗಿ ಹೋಗಿದ್ದಾರೆ. ಅದರಲ್ಲೂ ತಮಿಳುನಾಡು ರಾಜಧಾನಿ ಚೆನ್ನೈ ಭಾಗದಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿಯೇ ಇದೀಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಅಲರ್ಟ್ ನೀಡಲಾಗಿದೆ, ಇದರ ಜೊತೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಕೂಡ ಮಳೆರಾಯ ಆರ್ಭಟಿಸುತ್ತಿದ್ದಾನೆ.
ಚೆನ್ನೈ & ಸುತ್ತಮುತ್ತ ಭಾರಿ ಪ್ರವಾಹ?
ಮಳೆ ಆರ್ಭಟ ಹೇಗಿದೆ ಅಂದ್ರೆ, ಇದೀಗ ತಮಿಳುನಾಡು ರಾಜಧಾನಿ ಚೆನ್ನೈ ಸುತ್ತಮುತ್ತಲೂ ಇರುವ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಭೀತಿ ಶುರುವಾಗಿದೆ. ಯಾಕಂದ್ರೆ, ಈಗಾಗಲೇ ಒಂದು ತಿಂಗಳ ಅಂತರದಲ್ಲಿ ಹಲವು ಬಾರಿ ಪ್ರವಾಹ ಕಂಡಿರುವ ಚೆನ್ನೈಗೆ ಇದೀಗ ಮತ್ತೆ ಅದೇ ರೀತಿ ಆತಂಕ ಕಾಡುತ್ತಿದೆ. ತಮಿಳುನಾಡು ರಾಜಧಾನಿ ಚೆನ್ನೈ ಮಾತ್ರವಲ್ಲ, ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಇದೀಗ ಮಳೆಯ ಆತಂಕ ಆವರಿಸಿದೆ.
ಮಳೆ.. ಮಳೆ.. ಭಾರಿ ಮಳೆ..!
ಡಿಸೆಂಬರ್ 12 ಅಂದ್ರೆ ಇಂದಿನಿಂದ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ ಅಬ್ಬರಿಸುವ ಎಚ್ಚರಿಕೆ ನೀಡಲಾಗಿದೆ. ಹೊಸ ಚಂಡಮಾರುತದ ಆರ್ಭಟ ಶುರುವಾಗಿದ್ದು, ಬಂಗಾಳ ಕೊಲ್ಲಿ ಪ್ರದೇಶ ಅಲ್ಲಾಡಿ ಹೋಗಿದೆ. ಹೀಗಾಗಿ ಈಗಾಗಲೇ ತಮಿಳುನಾಡು ಸೇರಿದಂತೆ ಕೇರಳ ಹಾಗೂ ಶ್ರೀಲಂಕಾ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು & ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.
Published by
