ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಸ್ಥಳದ ವಿಳಾಸ ತಪ್ಪಿದೆಯೇ? ಡೋಂಟ್‌ವರಿ ಖರ್ಚೇ ಇಲ್ಲದೇ ಈ ತಪ್ಪನ್ನು ನಿಮ್ಮ ಆಧಾರ್‌ನಲ್ಲಿ ಅಪ್‌ಡೇಟ್‌ ಮಾಡೋ ಅವಕಾಶವನ್ನು ಯುಐಡಿಎಐ ಒದಗಿಸಿಕೊಟ್ಟಿದೆ. ಈಆಧಾರ್ ಕಾರ್ಡ್ ಉಚಿತ ಅಪ್‌ಡೇಟ್ ಮಾಡಲು ಡಿಸೆಂಬರ್ 14ಕ್ಕೆ ಡೆಡ್‌ಲೈನ್‌ ಮುಗಿಯಲಿದ್ದು, ನಾಳೆ ಒಂದೇ ದಿನ ನಿಮಗೆ ಫ್ರೀ ಅಪ್‌ಡೇಟ್‌ ಸೇವೆ ಲಭ್ಯವಿದೆ.

ಆಧಾರ್ ಕಾರ್ಡ್‌ದಾರರು ತಮ್ಮ ಮಾಹಿತಿಯನ್ನು ಯಾವುದೇ ಶುಲ್ಕವಿಲ್ಲದೆ myAadhaar ಪೋರ್ಟಲ್ ಮೂಲಕ ನವೀಕರಿಸಬಹುದಾಗಿದೆ.

ಆಧಾರ್‌ ಫ್ರೀ ಅಪ್‌ಡೇಟ್‌ಗೆ ನಾಳೇನೆ ಲಾಸ್ಟ್‌ ಡೇಟ್

ನಿಖರತೆಯನ್ನು ಕಾಪಾಡಿಕೊಳ್ಳಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ನಿಮ್ಮ ವಿವರಗಳನ್ನು ನವೀಕರಿಸಲು ಪ್ರಾಧಿಕಾರವು ಶಿಫಾರಸು ಮಾಡುತ್ತದೆ. ಅದರಂತೆ ಸ್ಥಳದ ವಿಳಾಸದ ನವೀಕರಣಕ್ಕೆ ಈಗ ಅವಕಾಶ ಮಾಡಿಕೊಟ್ಟಿದೆ.

myAadhaar ಪೋರ್ಟಲ್ ಮೂಲಕ ಉಚಿತ ಆನ್‌ಲೈನ್ ಅಪ್‌ಡೇಟ್ ಸೇವೆಯು ಡಿಸೆಂಬರ್ 14, 2024ರವರೆಗೆ ಇರಲಿದ್ದು, ನಂತರ ಈ ಸೇವೆ ಮುಕ್ತಾಯಗಳ್ಳಲಿದೆ. ಈ ದಿನಾಂಕದ ನಂತರ, ಆಧಾರ್ ಕೇಂದ್ರಗಳಲ್ಲಿ ನೀವು ಶುಲ್ಕ ಕೊಟ್ಟು ಅಪ್‌ಡೇಟ್‌ ಮಾಡಬೇಕಾಗುತ್ತದೆ. ಹೀಗಾಗಿ ಫ್ರೀಯಾಗಿ ಸಿಗುವ ಈ ಸೇವೆಯನ್ನು ಮಿಸ್‌ ಮಾಡಿಕೊಳ್ಳದೇ ಪ್ರಯೋಜನ ಪಡೆಯಿರಿ.

ದಾಖಲೆ ಸಆಧಾರ್ ನೋಂದಣಿ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸುವುದು ಹೇಗೆ?

ನಿವಾಸಿಗಳು ಭುವನ್ ಆಧಾರ್ ಪೋರ್ಟಲ್ ಅನ್ನು ಪ್ರವೇಶಿಸಬಹುದು. ಹತ್ತಿರದ ಕೇಂದ್ರಗಳನ್ನು ಪತ್ತೆಹಚ್ಚಲು ಪೋರ್ಟಲ್ ಎರಡು ಅನುಕೂಲಕರ ಮಾರ್ಗಗಳನ್ನು ನೀಡಿದೆ.

ಒಂದು ಬಳಕೆದಾರರು “ನಿಯರ್‌ಬೈ ಸೆಂಟರ್‌” ಆಯ್ಕೆಯನ್ನು ಬಳಸಬಹುದು ಮತ್ತು ಅವರ ಸ್ಥಳ ಮಾಹಿತಿಯನ್ನು ಇನ್‌ಪುಟ್ ಮಾಡಬಹುದು ಅಥವಾ ಅವರು ತಮ್ಮ ಸುತ್ತಮುತ್ತಲಿನ ಆಧಾರ್ ಕೇಂದ್ರಗಳನ್ನು ಹುಡುಕಲು ಗೊತ್ತುಪಡಿಸಿದ ಹುಡುಕಾಟ ಕ್ಷೇತ್ರದಲ್ಲಿ ತಮ್ಮ ಪಿನ್ ಕೋಡ್ ಅನ್ನು ನಮೂದಿಸುವ ಆಯ್ಕೆಯನ್ನು ಪಡೆದುಕೊಳ್ಳಬಹುದು.

ಹೆಸರು, ಹುಟ್ಟಿದ ದಿನಾಂಕ ಇದನ್ನು ಅಪ್‌ಡೇಟ್‌ ಮಾಡಬಹುದೇ?

mAadhaar ಅಪ್ಲಿಕೇಶನ್ ಪ್ರಸ್ತುತ ವಿಳಾಸ ನವೀಕರಣದ ಆಯ್ಕೆಯನ್ನು ಮಾತ್ರವೇ ನೀಡಿದೆ. UIDAI ಅಧಿಕೃತ ಹೇಳಿಕೆಯ ಪ್ರಕಾರ: “ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆಯಂತಹ ಜನಸಂಖ್ಯಾ ವಿವರಗಳನ್ನು ನವೀಕರಿಸುವ ಸೌಲಭ್ಯವು mAadhaar ಅಪ್ಲಿಕೇಶನ್‌ನಲ್ಲಿ ಲಭ್ಯವಿರುವುದಿಲ್ಲ. ಡಾಕ್ಯುಮೆಂಟ್ ಸೌಲಭ್ಯದ ಮೂಲಕ ವಿಳಾಸ ನವೀಕರಣ ಮಾತ್ರ ಪ್ರಸ್ತುತ ಲಭ್ಯವಿದೆ.

ಆಧಾರ್ ಕಾರ್ಡ್ ನವೀಕರಣ ಶುಲ್ಕಗಳು

(1) ಬಯೋಮೆಟ್ರಿಕ್ ಅಪ್‌ಡೇಟ್: ದಾಖಲಾದ ಬಯೋಮೆಟ್ರಿಕ್‌ಗಳ ನವೀಕರಣ (ಬೆರಳಚ್ಚು, ಐರಿಸ್ ಮತ್ತು ಫೋಟೋ)

-5 ರಿಂದ 7 ವರ್ಷಗಳ ನಡುವೆ ಒಮ್ಮೆ ಮಾಡಿದಲ್ಲಿ ಸೇವೆ ಉಚಿತವಾಗಿರುತ್ತದೆ.

-15 ರಿಂದ 17 ವರ್ಷ ವಯಸ್ಸಿನವರೆಗೆ ಒಮ್ಮೆ ಮಾಡಿದಲ್ಲಿ ಸೇವೆ ಉಚಿತವಾಗಿರುತ್ತದೆ. ಇದು ಇಲ್ಲದಿದ್ದರೆ ₹100 ಪಾವತಿಸಬೇಕು.

(2) ಜನಸಂಖ್ಯಾ ಅಪ್‌ಡೇಟ್: ದಾಖಲಾದ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸ, ಅಥವಾ ಅದೇ ಸಂಯೋಜನೆಯ ನವೀಕರಣ

-ಬಯೋಮೆಟ್ರಿಕ್ ಅಪ್ಡೇಟ್ ಸಮಯದಲ್ಲಿ ಸೇವೆ ಉಚಿತವಾಗಿರುತ್ತದೆ.

-ಪ್ರತ್ಯೇಕವಾಗಿ ಮಾಡಿದರೆ: ₹50ಗಳನ್ನು ಪಾವತಿಸಬೇಕು.

(3) ಡಾಕ್ಯುಮೆಂಟ್ ಅಪ್‌ಡೇಟ್: ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ಬೆಂಬಲಿಸುವ ಮೂಲಕ ಗುರುತು ಮತ್ತು ವಿಳಾಸದ ಪುರಾವೆಗಳಾಗಿ ದಾಖಲೆಗಳನ್ನು ಸಲ್ಲಿಸುವುದು

-ಮೈಆಧಾರ್ ಪೋರ್ಟಲ್

https://myaadhaar.uidai.gov.in/du

ಬಳಕೆಯ ಮೂಲಕ 14.12.2024 ರವರೆಗೆ ಸೇವೆ ಫ್ರೀ ಇರುತ್ತದೆ.

-ಆಧಾರ್ ಕೇಂದ್ರದಲ್ಲಿ: ₹50ಗಳನ್ನು ಪಾವತಿಸಬೇಕು.

ಆನ್‌ಲೈನ್ ಪೋರ್ಟಲ್ ಮೂಲಕ ಆಧಾರ್ ವಿವರಗಳನ್ನು ನವೀಕರಿಸುವುದು ಹೇಗೆ?

myaadhaar.uidai.gov.inಗೆ ಹೋಗಿ.

‘ಲಾಗಿನ್’ ಆಯ್ಕೆಮಾಡಿ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಂತರ OTP ಗೆ ವಿನಂತಿಸಿ. ಒಟಿಪಿ ಬಂದಮೇಲೆ ಅದನ್ನು ಹಾಕಿ ಲಾಗಿನ್‌ನೊಂದಿಗೆ ಮುಂದುವರಿಯಿರಿ.

‘ಡಾಕ್ಯುಮೆಂಟ್ ಅಪ್‌ಡೇಟ್’ ಆಯ್ಕೆಮಾಡಿ.

ಒದಗಿಸಿದ ಮಾರ್ಗಸೂಚಿಗಳನ್ನು ಪರಿಶೀಲಿಸಿ ಮತ್ತು ಮುಂದುವರಿಯಿರಿ.

ಪರಿಶೀಲನೆ ಬಾಕ್ಸ್ ಅನ್ನು ಟಿಕ್ ಮಾಡುವ ಮೂಲಕ ವಿವರಗಳ ನಿಖರತೆಯನ್ನು ದೃಢೀಕರಿಸಿ.ನಿಮ್ಮ ಗುರುತು ಮತ್ತು ವಿಳಾಸ ಪುರಾವೆ ದಾಖಲೆಗಳನ್ನು ಸಲ್ಲಿಸಿ.

ಪೂರ್ಣಗೊಂಡ ನಂತರ, ನೀವು ಇಮೇಲ್ ಮೂಲಕ ಸೇವಾ ವಿನಂತಿ ಸಂಖ್ಯೆ (SRN) ಅನ್ನು ‌ಪಡೆಯುತ್ತೀರಿ. ಅಪ್‌ಡೇಟ್‌ ಸ್ಟೇಟಸ್‌ ಟ್ರ್ಯಾಕ್ ಮಾಡಲು ನೀವಿದನ್ನು ಬಳಸಬಹುದು.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *