ಡಿಸೆಂಬರ್ 15: ಕಳೆದ ಎರಡು ವಾರಗಳಲ್ಲಿ ನಿರಂತರವಾಗಿ ಹವಾಮಾನ ವೈಪರಿತ್ಯಗಳು ಕಂಡು ಬರುತ್ತಿವೆ. ಫೆಂಗಲ್ ಚಂಡಮಾರುತ ಬೆನ್ನಲ್ಲೆ ಹಿಂದು ಮಹಾಸಾಗರ, ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಕೊನೆಗೊಂಡಿವೆ. ಇದೀಗ ಮತ್ತು ಲಕ್ಷದ್ವೀಪ ಹಾಗೂ ಮಾಲ್ಡೀವ್ಸ್ ಭಾಗದ ಸಮುದ್ರ ಮೇಲ್ಮೈನಲ್ಲಿ ಮತ್ತೆ ವಾಯುಭಾರ ಕುಸಿತ ನಿರ್ಮಾಣಗೊಂಡಿದೆ.
ಇದರಿಂದ ವಿವಿಧ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಲಕ್ಷದ್ವೀಪ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್‌ವರೆಗೆ ವಿಸ್ತರಣೆಗೊಂಡಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರವು ಮುನ್ಸೂಚನೆ ನೀಡಿದೆ.
ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಗಾಳಿಯ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್ ಎತ್ತರದವರೆಗೆ ನಿರ್ಮಾಣಗೊಂಡಿದೆ. ಇಂದು 15 ಡಿಸೆಂಬರ್ 2024ರಂದು ಬೆಳಗ್ಗೆ 08.30ಕ್ಕೆ ನಿರ್ಮಾಣಗೊಂಡಿರುವ ಹವಾಮಾನ ಪ್ರದೇಶಗಳಲ್ಲಿಯೇ ಸಮುದ್ರ ಮಟ್ಟವು ಮುಂದುವರಿಯುತ್ತದೆ.
ಮುಂದಿನ ಹಲವು ಗಂಟೆಗಳಲ್ಲಿ ಈ ಹವಾಮಾನ ಬದಲಾವಣೆಗಳು ಮತ್ತಷ್ಟು ಕಡಿಮೆ ಒತ್ತಡದ ಪ್ರದೇಶವಾಗಿ ಪರಿವರ್ತನೆಗೊಳ್ಳಲಿದೆ. ಆಗ್ನೇಯ ಬಂಗಾಳ ಕೊಲ್ಲಿಯಿಂದ ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ ಕರಾವಳಿಯತ್ತ ಜೋರು ಗಾಳಿ ಬೀಸುವ ನಿರೀಕ್ಷೆ ಇದೆ.
ತಮಿಳುನಾಡಿನ ಕರಾವಳಿಯತ್ತ ಬಿರುಗಾಳಿ
ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಅಂದರೆ ತಮಿಳುನಾಡು ಕರಾವಳಿಯ ಕಡೆಗೆ ಈ ಚಂಡಮಾರುತಗಳ ಬಿರುಗಾಳಿ ಚಲಿಸುವ ಸಾಧ್ಯತೆ ಇದೆ. ಇದರಿಂದ ಚೆನ್ನೈ ಮಹಾನಗರ ಸೇರಿದಂತೆ ತಮಿಳುನಾಡಿನ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದರಿ ಹಿಂಗಾರು ಮಳೆ ಆರಂಭದಿಂದಲೂ ತಮಿಳುನಾಡು ರಾಜ್ಯದ ವಿವಿಧ ಜಿಲ್ಲೆಗಳು ಭಾರೀ ಮಳೆಗೆ ಮೇಲಿಂದ ಮೇಲೆ ಸಿಲುಕುತ್ತಿವೆ. ಈ ಮಹಾಮಳೆ ಈ ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಮುಂದುವರಿಯಲಿದೆ.
ತಮಿಳುನಾಡು ಮಾತ್ರವಲ್ಲದೇ ಬಂಗಾಳಕೊಲ್ಲಿಯ ಚಂಡಮಾರುತ ಪರಿಚಲನೆ ಪ್ರಭಾವ ಕರ್ನಾಟಕ, ನೆರೆಯ ಒಡಿಶಾ, ಆಂದ್ರ ಪ್ರದೇಶ ಕರಾವಳಿ ಭಾಗದಲ್ಲೂ ಕೊಂಚ ಪ್ರಭಾವ ಭೀರುವ ನಿರೀಕ್ಷೆ ಇದೆ. ಇದರಿಂದ ಮುಂದಿನ ಕೆಲವು ದಿನಗಳ ಬಿಸಿಲಿನ ದರ್ಶನವಾದರೂ ಶೀತ ವಾತಾವರಣ, ಕೆಲವೆಡೆ ಭಾರೀ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಡಿಸೆಂಬರ್ 20ರ ಹೊತ್ತಿಗೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಬಹುದು. ಇನ್ನೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮಬ್ಬು ವಾತಾವರಣ, ಕೆಲವೆಡೆ ಹಗುರ ಮಳೆ ಕಂಡು ಬರಲಿದೆ.
Published by
