ಬೆಂಗಳೂರು : ರೈತರಿಗೆ ಸಂತಸದ ಸುದ್ದಿಯಿದೆ. ವಿಶೇಷವಾಗಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ. ಅಂತಹ ರೈತರಿಗೆ ವಿಶೇಷ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಹೌದು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದೆ.

ಅದೇ ರೀತಿ ಕೃಷಿ ಆಶೀರ್ವಾದ ಯೋಜನೆಯನ್ನು ಜಾರ್ಖಂಡ್ ಸರ್ಕಾರ ನಡೆಸುತ್ತಿದೆ. ಇದರಡಿ ರೈತರಿಗೆ ವಾರ್ಷಿಕ 5000 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೃಷಿ ಆಶೀರ್ವಾದ ಯೋಜನೆಯು ಜಾರ್ಖಂಡ್ ಸರ್ಕಾರವು ನಡೆಸುತ್ತಿರುವ ಯೋಜನೆಯಾಗಿದೆ.

ಈ ಯೋಜನೆಯಡಿಯಲ್ಲಿ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ರೂಪಾಯಿಯನ್ನು ಜಾರ್ಖಂಡ್ ಸರ್ಕಾರ ಕೊಡುತ್ತಿದೆ. ಖಾರಿಫ್ ಹಂಗಾಮಿನ ಕೃಷಿಗೆ ಮುನ್ನ ಈ ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. 5 ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ 25,000 ರೂಪಾಯಿ ಪಡೆಯುತ್ತಾರೆ.

ರಾಜ್ಯದಲ್ಲಿ ಪಿಎಂ ಕಿಸಾನ್ ನಿಧಿಯ ಲಾಭ ಪಡೆಯುವ ರೈತರಿಗೆ ಕನಿಷ್ಠ 11,000 ರೂ. ಮತ್ತು ಗರಿಷ್ಠ 31,000 ರೂ. ಸಿಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಕೃಷಿ ಆಶೀರ್ವಾದ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು. ಅದೇ ರೀತಿ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತನ ಖಾತೆಗೆ 25 ಸಾವಿರ ರೂ. ರಾಜ್ಯ ಸರ್ಕಾರದಿಂದ ಮತ್ತು ಆರು ಸಾವಿರ ಕೇಂದ್ರ ಸರ್ಕಾರದಿಂದ ಹೀಗೆ ಒಟ್ಟು 31 ಸಾವಿರ ರೂ. ಬಂದು ಸೇರುತ್ತದೆ.

Published by

Leave a Reply

Your email address will not be published. Required fields are marked *