ಬಹಳ ಕುತೂಹಲ ಸೃಷ್ಟಿಸಿರುವ ಬಾರ್ಡರ್ ಗವಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಮೊದಲ ದಿನಡಾಟ ನಡೆಯುತ್ತಿದೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಸ್ಟ್ಪ್ರೀತ್ ಬುಮ್ರಾಹ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ ಗೆ ಆಲೌಟ್ ಆಯಿತು ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ 41 ರನ್ ಮತ್ತು ರಿಷಬ್ ಪಂತ್ 37 ರನ್ ಹೊರತು ಪಡಿಸಿ ಬೇರೆ ಯಾವುದೇ ಭಾರತದ ಆಟಗಾರ ಲಯ ಕಂಡುಕೊಳ್ಳುವಲ್ಲಿ ವಿಫಲರಾದರೂ.

ಆಸ್ಟ್ರೇಲಿಯಗೆ ಆಘಾತ ನೀಡಿದ ಭಾರತದ ಬಿಗಿ ಬೌಲಿಂಗ್ ದಾಳಿ

ಇನ್ನು ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿ ಕೊಂಚ ನಿಟ್ಟುಸಿರು ಬಿಡಲು ಆರಂಭಿಸಿದರು. ಆದರೆ ದಾಳಿಗೆ ಇಳಿದ ಜಸ್ಟ್ಪ್ರೀತ್ ಬುಮ್ರ ಮೊದಲ ಮೂರು ವಿಕೆಟ್ಗಳನ್ನು ಕಬಳಿಸಿದರು ಇವರ ಜೊತೆಗೆ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿ ಆಸ್ಟ್ರೇಲಿಯವನ್ನು 38-5 ವಿಕೆಟ್ ಪಡೆದು ಸಂಕಷ್ಟಕ್ಕೆ ದೂಡಿದ್ದಾರೆ.

ಇನ್ನು ಆಸ್ಟ್ರೇಲಿಯ ಪರ ಉಸ್ಮಾನ್ ಕವಾಜ 8(19). ನಾಥಾನ್ ಸ್ವೀನಿ 10(13). ಸ್ಟೀವ್ ಸ್ಮಿತ್ 0(1). ಟ್ರಾವಿಶ್ ಹೆಡ್ 11(13) ಮತ್ತು ಮಿಚೆಲ್ ಮಾರ್ಷ 6(19) ಗಳಿಸಿ ಪವಿಲಿಯನ್ ಸೇರಿದ್ದಾರೆ

Leave a Reply

Your email address will not be published. Required fields are marked *