ಮಂಡ್ಯ: ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರುಣ ಅವಕೃಪೆ ತೋರಿದ್ದಾನೆ.ಮಂಡ್ಯದಲ್ಲಿ ಸಂಜೆ ನಂತರ ಭಾರೀ ಮಳೆಯಾಗಿದ್ದು ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಇಂದು ಸಂಜೆ 6 ಗಂಟೆ ನಂತರದಲ್ಲಿ ಮಳೆ ಆರಂಭವಾಗಿದ್ದು ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಬಿಟ್ಟೂ ಬಿಡದೆ ಸುರಿದಿದೆ.
ಇದರಿಂದಾಗಿ ವೇದಿಕೆಯ ಅಕ್ಕಪಕ್ಕದ ಜಾಗ ಸಂಪೂರ್ಣ ಕೆಸರು ಗದ್ದೆಯಂತಾಗಿದೆ.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ನೂರಾರು ಜನ ಮಳೆಯಲ್ಲಿ ನನೆದು ಒದ್ದೆಯಾಗಿ ಮಳೆರಾಯನನ್ನು ಶಪಿಸಿದ್ದಾರೆ. ಈ ಧಿಡೀರ್ ಅವ್ಯವಸ್ಥೆಯಿಂದಾಗಿ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದ ಜನ ಕಿರಿಕಿರಿ ಅನುಭವಿಸುವಂತಾಗಿದೆ.
Published by
✍️ಪ್ರಶಾಂತ್ ಎಚ್ ವಿ
