
ಸುವರ್ಣ ನ್ಯೂಸ್ ಜೊತೆ ನೆನ್ನೆ ನ್ಯೂಸ್ ಹೌರ್ ನಲ್ಲಿ ಕರ್ನಾಟಕದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಮಾತನಾಡಿದರು.
ಅಜಿತ್ ಅನುಮಕ್ಕನವರ್ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿದ್ದಾರೆ
ಸಿ. ಪಿ ಯೋಗೇಶ್ವರ್ ಯಾವುದರೆಲ್ಲದರ ಬಗ್ಗೆ ಮಾತನಾಡಿದ್ದಾರೆ ಬನ್ನಿ ನೋಡೋಣ.
ಟೈಟ್ ಫೈಟ್ ಆಗುತ್ತೆ ಜಮೀರ್ ಅಹ್ಮದ್ ಖಾನ್ ಹೇಳಿಕೆ ಸ್ವಲ್ಪ ಡ್ಯಾಮೇಜ್ ಮಾಡಿದೆ?
ಚುನಾವಣಾ ನಡೆದಂತ್ತ ರೀತಿ ಚುನಾವಣಾ ನಂತರದ ವಿರೋಧ ಪಕ್ಷ ಹೇಳಿಕೆಗಳು ನನ್ನನು ಕುಗ್ಗಿಸಿತ್ತು. ಎಚ್ ಡಿ ದೇವಗೌಡರ ಹೇಳಿಕೆ ಆಘಾತ ಕಾರಿ ಆಗಿತ್ತು ದೇವೇಗೌಡ್ರು ನಾನು ಈ ಚುನಾವಣೆಯಲ್ಲಿ ನನ್ನ ಮೊಮ್ಮಗನ್ನನು ಗೆಲ್ಲಿಸ್ಕೊಂಡು ಬರ್ತೀನಿ ಗೆದ್ದ ನಂತರ ಈ ಭ್ರಷ್ಟ ಸರ್ಕಾರವನ್ನ ತೆಗಿತೀನಿ ಅಲ್ಲಿವರೆಗೆ ನಾನು ನಿದ್ರಿಸೋದಿಲ್ಲ ಇದು ನನ್ನ ಸಪಥ. ಈ ಇಳಿ ವಯಸ್ಸಿನಲ್ಲೂ ಹುಮ್ಮಸ್ಸಿನಿಂದ ಕೂಡಿದ ದೇವೇಗೌಡರ ಮಾತು ನನಗೆ ಭಯ ತರಿಸಿತ್ತು.
ಆದರೆ ನನಗೆ 10 ದಿನ ಸಮಯವಿತ್ತು ಬೂತ್ ವಾರು ಕಾರ್ಯಕರ್ತರ ವಾರು ಚುನಾವಣಾ ಬಗ್ಗೆ ಚರ್ಚಿಸಿದಾಗ ಸುಮಾರು 30000 ಸಾವಿರ ಮತಗಳ ಅಂತರದಿಂದ ಗೆಲುತ್ತೇನೆ ಎಂದು ಗೊತ್ತಾಯಿಯ್ತು ಆನಂತರ ನಾನು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿ ಗಳಿಗೆ ತಿಳಿಸಿದೆ.
ಮಾತು ತಪ್ಪಿದ ಮಗ ಆದ್ರ ಯೋಗೇಶ್ವರ್?
ಜೆಡಿಎಸ್ ಟಿಕೆಟ್ ಕೊಟ್ರು ನಿಲ್ತಿನಿ ಅಂತ ಹೇಳುದ್ರಿ ನಂತರ ಇಲ್ಲ ನನಗೆ ಬಿಜೆಪಿ ಟಿಕೆಟ್ ಬೇಕು ಅಂದ್ರಿ ನಂತರ ಕಾಂಗ್ರೆಸ್ ಗೆ ಹೋದ್ರಿ?
ಕುಮಾರಸ್ವಾಮಿಗೆ ರಾಜಕೀಯವಾಗಿ ಮಗನನ್ನ ಪ್ರತಿಷ್ಟಾಪನೆ ಮಾಡಲೇ ಬೇಕು ಅಂತ ಇತ್ತು ಮತ್ತು ಅನಿವಾರ್ಯತೆಯು ಇತ್ತು ಆದರೆ ಇವಾಗ ಜೆಡಿಎಸ್ ಯಿಂದ ಯಾರು ಇಲ್ಲ. ಜೆಡಿಎಸ್ ರಥವನ್ನ ಹೇಳೆಯೋಕೆ ಇವಾಗ ಯಾರು ಇಲ್ಲ ಕುಟುಂಬಸ್ಥರ ಬಿಟ್ಟು ಬೇರೆ ಯಾರಿಗೂ ಅವರು ಅಧಿಕಾರ ಕೊಡಲ್ಲ ಅದು ಕುಟುಂಬದ ಪಕ್ಷ ಆಗಿರೋದ್ರಿಂದ ನನಗೆ ಕೊಡಲು ಸಮಯವನ್ನು ಹಾಳುಮಾಡುತ್ತೀದ್ದರು. ಬಿಜೆಪಿಯ ಬಳಿ ನಾನು ಅಂಗಲಾಚಿ ಬೇಡಿದರು ಕುಮಾರಸ್ವಾಮಿ ಒಪ್ಪಲಿಲ್ಲ.
ಕುಮಾರಸ್ವಾಮಿ ಗೆ ನನ್ನನು ನಡೆಸಲು ಇಷ್ಟ ಇರ್ಲಿಲ್ಲ ಅವರ ಸರ್ಕಾರ ಬೀಳೋದ್ರದಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು ಆದ್ದರಿಂದ ಅವರು ನನ್ನ ಟಿಕೆಟ್ ಕೈ ತಪ್ಪಿಸೋಕೆ ಸಮಯದ ಅಭಾವ ಸೃಷ್ಟಿ ಮಾಡ್ತಿದ್ರು. ನಾನು ಬಲವಂತವಾಗಿ ಬಿಜೆಪಿ ಯಿಂದ ತಾಲೇಲ್ಪಟ್ಟವನು ಎಂದು ಯೋಗೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನಿಮ್ಮನ್ನು ಕರೆದವರು ಯಾರು?
ಎರಡು ಮೈತ್ರಿ ಪಕ್ಷಗಳಲ್ಲಿ ಟಿಕೆಟ್ ಸಿಗಲ್ಲ ಅಂತ ಗೊತ್ತಾದಾಗ ನಾನೇ ಕುದ್ದು ಡಿ ಕೆ ಸುರೇಶ್ ಗೆ ಕೇಳಿಕೊಂಡೆ. ನಿಮ್ಮ ಮನೆಗೆ ಬರ್ತೀನಿ ನಿಮ್ಮ ಅಣ್ಣ ಎಲ್ಲಿದ್ದಾರೆ ಕೇಳಿ ಅಂದೇ ಅದಕ್ಕೆ ಆಯಿತು ಬನ್ನಿ ಅಂತ ಡಿ ಕೆ ಸುರೇಶ್ ಹೇಳಿದರು ಸಂಜೆ ಸುಮಾರು 7 ಗಂಟೆ ಗೆ ಅವರ ಮನೆಗೆ ಹೋದೆ ಅಲ್ಲೂ ಕೂಡ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೆ ಕೇಳಿದೆ ಅವರು ಕುಮಾರಸ್ವಾಮಿ ಒಪ್ಪುತ್ತಿಲ್ಲ ನಿನ್ನ ಮುಂದಿನ ದಾರಿ ನೋಡ್ಕೋ ಅಂತ ಹೇಳುದ್ರು ನಂತರ ನಾನು ಕಾಂಗ್ರೆಸ್ ಸೇರ್ಪಡೆ ಆದೆ.
ಜೆಡಿಎಸ್ ಆಸ್ತಿತ್ವ ಅಲುಗಾಡುತ್ತಿದೆ!
ಒಬ್ಬ ಮಾಜಿ ಪ್ರಧಾನಿ ಒಬ್ಬ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಮಂತ್ರಿ ಆಗಿ ತಮ್ಮ ಮೊಮ್ಮಗ ಮಗನನ್ನ ಗೆಲ್ಲಿಸ್ಕೊಳೋಕೆ ಆಗ್ಲಿಲ್ಲ ಅವರನ್ನ ಜನ ಒಪ್ಪುತಿಲ್ಲ. ದೇವೇಗೌಡ್ರು ತಮ್ಮ ನಿವೃತಿ ಜೀವನವನ್ನ ಅನುಭವಿಸಬೇಕು ಕುಟುಂಬ ರಾಜಕಾರಣ ಬಿಟ್ಟು ಬೇರೆ ಅವರಿಗೆ ಅಧಿಕಾರ ಕೊಡ್ಬೇಕು ಇಲ್ಲಾಂದ್ರೆ ಜೆಡಿಎಸ್ ಮುಂಬರುವ ದಿನಗಳಲ್ಲಿ ಮರೆಯಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಶಕ್ತಿಯಿನನಾಗಿದ್ದೆ!
ಯಡಿಯೂರಪ್ಪನವರು ನನಗೆ ಮಾತು ಕೊಟ್ಟಿದ್ದರು.
ನನ್ನನ ಮುಖ್ಯಮಂತ್ರಿ ಮಾಡಿದ್ರೆ
ನಿನಗೆ ಮಂತ್ರಿ ಸ್ಥಾನ ಕೊಡ್ತೀನಿ ನನ್ನ ಜೊತೆಗೆ ಇಟ್ಕೋತೀನಿ ಅವರ ಮನೆಯ ದೇವರ ಮನೆಯಲ್ಲಿ ಕೈ ಇಟ್ಟು ಪ್ರಮಾಣ ಮಾಡಿದ್ರು ಆದರೆ ಅವ್ರು ಮಾತಿಗೆ ತಪ್ಪಿದ್ರು.
ಕುಟುಂಬ ರಾಜಕಾರಣಕ್ಕೆ ಪಕ್ಷಗಳ ಬಲಿ?
ಯಡಿಯೂರಪ್ಪ ನವರು ಪುತ್ರ ವ್ಯಾಮೋಹಕ್ಕೆ ಬಿಜೆಪಿ ಬಲಿ ಕೊಡ್ತಿದ್ದಾರೆ.
ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಜೆಡಿಎಸ್ ನಾ ಬಲಿ ಕೊಡ್ತಿದ್ದಾರೆ.
ಹಳೆ ಮೈಸೂರ್ ಭಾಗದಲ್ಲಿ ಸಿ ಪಿ ಯೋಗೇಶ್ವರ್ ಬೆಳೆಯೋದು ಬಿ ವೈ ವಿಜಯೇಂದ್ರಗೆ ಇಷ್ಟ ಇಲ್ಲ.
ಅವರು ಮುಂಬರುವ ಚುನಾವಣೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಲ್ಲೂ ರೆಡಿ ಆಗ್ತಿದ್ದಾರೆ. ವಿಜಯೇಂದ್ರ ಅವರಿಗೆ ಹಳೆ ಮೈಸೂರ್ ಭಾಗದಲ್ಲಿ ಗುರುತಿಸಿ ಕೊಳ್ಳುವ ಹಂಬಲ ಇದೆ ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಬಗ್ಗೆ
ನಿಖಿಲ್ ಕುಮಾರಸ್ವಾಮಿ ಎಲ್ಲಿ ಸೋತಿದ್ರೋ ಅಲ್ಲಿ ಕೆಲಸ ಮಾಡ್ಬೇಕಿತ್ತು ಅವರು ಕ್ಷೇತ್ರ ಬದಲಾವಣೆ ಅವರ ಸೋಲಿಗೆ ನೇರ ಕಾರಣ. ಮುಂಬರುವ ದಿನ ಚನ್ನಪಟ್ಟಣದಲ್ಲೇ ಕೆಲಸ ಮಾಡಿ ಗೆದ್ದರೆ ನಾನು ಸ್ವಾಗತಹಿಸುತ್ತೇನೆ ಎಂದು ಹೇಳಿದ್ದಾರೆ.
ಒಕ್ಕಲಿಗರ ವಿರುದ್ಧವೇ ನನ್ನ ಹೋರಾಟ?
ಒಕ್ಕಲಿಗರನ್ನ ನಂಬಿ ನಾನು ರಾಜಕಾರಣ ಮಾಡಿಲ್ಲ ನಾನು ಮೊದಲಿಂದಲೂ ಸಣ್ಣ ಸಮೂದಯಗಳ ಬೆಂಬಲದಿಂದ ನಾನು ಗೆದ್ದು ಬಂದಿದ್ದೇನೆ. ಆದರೆ ಈ ಭಾರಿ ಅರ್ಧದಷ್ಟು ಒಕ್ಕಲಿಗರು ನನಗೆ ಮತ ನೀಡಿದ್ದಾರೆ. ಒಕ್ಕಲಿಗರಿಗೆ ಹೊಸ ನಾಯಕನಾ ಅವಶ್ಯಕತೆ ಇದೆ ಅವರು ದೇವೇಗೌಡ್ರು ಮತ್ತು ಕುಮಾರಸ್ವಾಮಿಯ ನಾಯಕತ್ವವನ್ನ ಒಪ್ಪುತಿಲ್ಲ ಜನಗಳು ಎಂದು ಹೇಳಿದರು.
published by
twelvenewz.com
✍️ಪ್ರಶಾಂತ್ ಎಚ್ ವಿ