ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಹೆಬ್ಬಾಳಕರ್ (Hebbalkar) ಅವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು.
ಬಳಿಕ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಅವರನ್ನು ಕೂಡಲೆ ಬಂಧನಮುಕ್ತ Release) ಮಾಡುವಂತೆ ಆದೇಶಿಸಿತ್ತು. ಬಿಡುಗಡೆಯ ಬಳಿಕ ಇಂದು (ಡಿಸೆಂಬರ್ 21) ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು ಸರ್ ಒತ್ತಡ ಇದೆ ತಿಂಡಿ ತಿನ್ನಿ ಎಂದು ಮನವಿ ಮಾಡಿಕೊಂಡರು ಎಂದಿದ್ದಾರೆ.
ಫೋನ್ ಕಸಿದುಕೊಳ್ಳಲು ನೋಡಿದ್ರು
ಸಿಟಿ ರವಿ ಅವರು ಬಂಧನದ ರಾತ್ರಿ 12 ಗಂಟೆಯಿಂದ ಏನೇನು ಆಯ್ತು ಎಂಬುದನ್ನು ಮಾಧ್ಯಮದ ಮೂಲಕ ವಿವರಣೆ ನೀಡಿದ್ದಾರೆ. ಯಾವುದೋ ಒಂದು ನಿಗೂಢವಾದ ಜಾಗಕ್ಕೆ ಕರೆದುಕೊಂಡು ಹೋದ್ರು. ಮತ್ತೆ ಮತ್ತೆ ಅವರಿಗೆ ಫೋನ್ ಕಿತ್ತು ಕೊಳ್ಳೋಕೆ ಫೋನ್ ಬರುತ್ತಿತ್ತು, ಆ ನಂತರ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದ್ರು. ರಾತ್ರಿಯಿಂದ ಊಟ ಮಾಡಿರಲಿಲ್ಲ, ಹೊಟ್ಟೆ ನೋವು ಇತ್ತು, ಬೆಳಿಗ್ಗೆ ಬಂದು ಪೊಲೀಸರು, ತಿಂಡಿ ಮಾಡಿ ಅಂತಾ ಮನವಿ ಮಾಡ್ಕೊಂಡ್ರು. ನಮ್ಮ ಹಣೆಬರಹ ಸರ್, ನಮ್ಮ ಕೆಲಸ ಸರ್, ಒತ್ತಡ ಇದೆ ದಯಮಾಡಿ ತಿಂಡಿ ಮಾಡಿ ಅಂತೆಲ್ಲ ಕೇಳಿದ್ರು ಕೊನೆಗೆ ಒಂದು ಸೀಬೆ ಹಣ್ಣು ತರಿಸಿಕೊಡಿ ಅಂದೆ, ತರಿಸಿಕೊಟ್ರು ಎಂದರು.
ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಮುಗಿಸುವ ಸಂಚು
ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ರು ಎನ್ನುವ ಅನುಮಾನ ಇದೆ. ಯಾಕೆಂದರೆ ವಿಧಾನ ಪರಿಷತ್‌ನಲ್ಲೇ ನಿನ್ನ ಮುಗಿಸೋದಾಗಿ ಹೇಳಿದ್ರು. ನನ್ನನ್ನು ಕೋರ್ಟ್ ಗೆ ಕರೆದುಕೊಂಡು ಬಂದಾಗ, ನಾನು ಅಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಒಬ್ಬ ಜನಪ್ರತಿನಿಧಿಗೆ ಈ ರೀತಿ ನಡೆಸಿಕೊಂಡ್ರೆ ಹೇಗೆ ಎಂದು ಪ್ರಶ್ನಿಸಿದರು. ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ದೂರನ್ನು ತಗೊಂಡಿದ್ದೀರಿ, ಆದರೆ ನನ್ನ ದೂರು ತಗೊಂಡಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ವಿಶೇಷ ಹಕ್ಕು ಕೊಟ್ಟರಿ, ನನಗೆ ಕೊಟ್ಟಿಲ್ಲ, ನನ್ನನ್ನು ಯಾಕೇ ಕಸ್ಟಡಿಗೆ ತಗೊಂಡ್ರಿ..? ನನಗೆ ಯಾಕೆ ಮೊದಲೇ ನೋಟಿಸ್ ಕೊಟ್ಟಿಲ್ಲ? ಸಭಾಪತಿಯವರಿಂದ ಅರೆಸ್ಟ್ ಅನುಮತಿ ಪಡೆದಿದ್ರಾ..? ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ಸಂಚು!
ಇದೆಲ್ಲವನ್ನೂ ನೋಡ್ದಾಗ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಏನೋ ಸಂಚು ಮಾಡಿದ್ದಾರೆ ಅಂತಾ ಹೇಳಿದ್ದೇನೆ. ಇವಾಗ್ಲೂ ನನಗೂ ಜೀವ ಬೆದರಿಕೆ ಇದೆ. ನನಗೆ ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದರು.
ಸಿಎಂ ಅವರಿಂದ ಆ ಹೇಳಿಕೆ ನಿರೀಕ್ಷಿಸಿರಲಿಲ್ಲ
ಅವರ ರಕ್ಷಣೆಗಾಗಿಯೇ ಅವರನ್ನು ರಾತ್ರಿ ಹಿಡಿದು ಸುತ್ತಾಡಿಸಿದ್ರು ಪೊಲೀಸರು ಅಂತಾ ಮುಖ್ಯಮಂತ್ರಿ ಗಳು ಹೇಳಿದ್ದಾರೆ. ನಿಮ್ಮಿಂದ ಈ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಹಾಗಿದ್ರೆ ನನ್ನ ಒಂದು ಜಾಗದಲ್ಲಿ ಇಟ್ಟು ರಕ್ಷಣೆ ಕೊಡಬಹುದಿತ್ತಲ್ವಾ? ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಎಫ್‌ಎಸ್‌ಎಲ್ ರಿಪೋರ್ಟ್ ಬರಲಿ ಅಂದ್ರಿ, ನಿಮ್ಮ ಮಾತು ದುರದೃಷ್ಟಕರ ಎಂದು ಕಿಡಿಕಾರಿದ್ರು.
ಕಮಿಷನರ್ ಭೀಮಾ ಶಂಕರ್ ನಡೆ ನಿಗೂಢವಾಗಿತ್ತು!
ಬೆಳಗಾವಿ ಕಮಿಷನರ್ ಭೀಮಾ ಶಂಕರ್ ನಡೆ ನಿಗೂಢ ವಾಗಿತ್ತು. ನಿಮಗೆಲ್ಲ, ಸಿಎಂ, ಸಚಿವರು, ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶನ ಕೊಡ್ತಿದ್ರೋ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ಮಾಡ್ತಿದ್ರೋ? ಇವರೆಲ್ಲರ ಖಾಸಗಿ ಫೋನ್ ಗಳು ಕೂಡ ತನಿಖೆ ಆಗಬೇಕು, ಇದೆಲ್ಲವೂ ನ್ಯಾಯಾಂಗ ತನಿಖೆ ಯಾಗಬೇಕು, ಇವಾಗ ನನ್ನ ಫೋನ್ ಟ್ಯಾಪಿಂಗ್ ಆಗ್ತಿದೆ, ಡಿಕೆ ಶಿವಕುಮಾರ್ ಹೇಳಿದ್ರು, ಲಕ್ಷ್ಮಿ ಹೆಬ್ಬಾಳ್ಕರ್ ಏರಿಯಾದಲ್ಲಿ ಬಿಟ್ಡಿದ್ದೆ ಹೆಚ್ಚುಂಟು ಅಂತಾ, ಅಂದರೆ ನಾವು ಇರೋದು ಬೆಳಗಾವಿಯ ಬನಾನ ರಿಪಬ್ಲಿಕಲ್ಲಾ..? ಕನಕಪುರದ ಬನಾನಾ ರಿಪಬ್ಲಿಕನಲ್ಲಾ…? ಎಂದು ಕಿಡಿ ಕಾರಿದರು.
ಪರಂ ವಿರುದ್ಧ ಬೇಸರ
ಇನ್ನೂ ಪರಮೇಶ್ವರ್, ನೀವು ಅಸಹಾಯಕರಾಗರಾಗಬಾರದು ಯಾರು ತಪ್ಪಿತಸ್ಥರು ಇದ್ದಾರೋ ಅವರನ್ನು ಸಸ್ಪೆಂಡ್ ಮಾಡಿ, ನಾನು ಏನು ಮಾತಾಡಿದ್ದೇನೆ, ಎಫ್‌ಎಸ್‌ಎಲ್ ಗೆ ಕಳುಹಿಸಿ, ತನಿಖೆ ಆಗಲಿ, ತಪ್ಪಿದ್ದರೆ ಶಿಕ್ಷೆ ಆಗಲಿ. ಹೆಚ್ ಡಿ ರೇವಣ್ಣ, ಶಾಸಕ ಮುನಿರತ್ನ, ನಂದು ಎಲ್ಲದ್ದು ನೋಡಿದ್ರೆ ಇದು ಒಂದು ಷಡ್ಯಂತ್ರದ ಭಾಗ ಎನಿಸುತ್ತದೆ. ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತದೆ. ಪೊಲೀಸರ ವಾಕೀಯ ಡೈರೆಕ್ಸನ್ ಕಡಿಮೆ ಇರುತ್ತಿತ್ತು, ಉಳಿದಿದ್ದೆಲ್ಲ ಫೋನ್ ನಿಂದಲೇ ಡೈರೆಕ್ಷನ್ ಬರುತ್ತಿತ್ತು. ಡೈರೆಕ್ಷನ್ ಕೊಡುತ್ತಿದ್ದವರಿಂದ ಪೊಲೀಸರು ಹೆದರಿತ್ತಿದ್ರು. ಅಂದರೆ, ಮಂತ್ರಿ ಇರಬಹುದು, ಅಥವಾ ಸೀನಿಯರ್ ಆಫೀಸರ್ಸ್ ರಿಂದ ಅವರಿಗೆ ಫೋನ್ ಬರುತ್ತಿತ್ತು ಎಂದರು ಆರೋಪಿಸಿದರು.
Published by
