ಸುವರ್ಣ ಸೌಧ: ವಿಧಾನಸಭೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು (ಗುರುವಾರ) ಮಧ್ಯಾಹ್ನ ಪರಿಷತ್‌ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅಸಂವಿಧಾನಿಕ (Unparliamentary) ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಟಿ ರವಿ ಅವರನ್ನು ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಠಾಣೆ ಬದಲಾಯಿಸಿದ ಪೊಲೀಸರು
ಹೌದು, ಸೆಕ್ಯುರಿಟಿ ಸಮಸ್ಯೆ ಉಂಟಾಗಬುದು ಎಂಬ ಕಾರಣಕ್ಕೆ ಪೊಲೀಸರು ಠಾಣೆ ಬದಲಿಸಿದ್ದಾರೆ. ಸಿಟಿ ರವಿ ಅವರ ವಿರುದ್ಧ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಬಾಗೇವಾಡಿ ಠಾಣೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರ ವಾಪ್ತಿಯಲ್ಲಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳು ಸಿಟಿ ರವಿ ವಿರುದ್ಧ ಠಾಣೆ ಮುಂದೆ ಪ್ರತಿಭಟನೆ ಮಾಡ್ಬಹುದು ಇದರಿಂದ ತನಿಖೆಗೆ ಪೊಲೀಸರಿಗೆ ಕಿರಿಕಿರಿ ಉಂಟಾಗಬಹುದು ಎಂದು ಪೊಲೀಸರು ಠಾಣೆ ಬದಲಿಸಿದ್ದಾರೆ.
ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರ ಆಗಮನ
ಪೊಲೀಸ್ ಠಾಣೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಸಿಟಿ ರವಿ ಬಂಧನ ಖಂಡಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಸಿಟಿ ರವಿ ಭೇಟಿಗೆ ಅವಕಾಶ ಕೊಡುವಂತೆ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಅವರನ್ನು ಕೂಡ ಠಾಣೆಯ ಒಳಗೆ ಬಿಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸ್ ಠಾಣೆ ಮುಂದಿನ ಗೇಟ್ ತೆಗೆಯುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೇನು ಕಾಂಗ್ರೆಸ್ ಏಜೆಂಟರಾ ಎಂದು ಕಿಡಿಕಾರಿದರು.
ವಕೀಲರನ್ನೂ ಒಳಗೆ ಬಿಡದ ಪೊಲೀಸರು
ಕೂಡಲೆ ಸ್ಥಳಕ್ಕೆ ಸಿಟಿ ರವಿ ಪರ ವಕೀಲ ಚೇತನ್ ಮನೇರಿಕರ್ ಆಗಮಿಸಿದ್ದಾರೆ. ಆದ್ರೆ ಪೊಲೀಸರು ಲಾಯರ್‌ಗೂ ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದಾರೆ. ಲಾಯರ್ ಅನ್ನು ಗೇಟ್ ಹೊರಗೆ ನಿಲ್ಲಿಸಿದ್ದಾರೆ. ಈ ವೇಳೆ ಕೋಪಗೊಂಡ ವಕೀಲರು, ಸುಪ್ರೀಂಕೋರ್ಟ್ ಗೈಡ್‌ಲೈನ್ಸ್ ಇದೆ, ಆರೋಪಿಯನ್ನು ಲಾಯರ್ ಭೇಟಿ ಮಾಡಬಹುದು, ಕಾನೂನು ಉಲ್ಲಂಘನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
Published by
