
ಬೆಂಗಳೂರು, ಡಿಸೆಂಬರ್ 12: ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧೆಡೆ ಭಾರೀ ಮಳೆಗೆ ಕಾರಣವಾಗಿರುವ ವಾಯುಭಾರ ಕುಸಿತದ ಬಗ್ಗೆ ಮಹತ್ವದ ಅಪ್ಡೇಟ್ ಸಿಕ್ಕಿದೆ. ಫೆಂಗಾಲ್ ಚಂಡಮಾರುತ ಬಳಿಕ ಈ ಸಂಭವನೀಯ ಸೈಕ್ಲೋನ್ ವ್ಯಾಪಕವಾಗಿ ಅಬ್ಬರಿಸಲಿದೆ ಎಂದು ಈ ಮೊದಲು ಹೇಳಲಾಗಿತ್ತು.
ಆದರೆ ಬದಲಾದ ಹವಾಮಾನದಿಂದಾಗಿ ವಾಯುಭಾರತ ಕುಸಿತವು ತಮಿಳುನಾಡು ಕರಾವಳಿ ಭಾಗದಲ್ಲಿ ದುರ್ಬಲಗೊಳ್ಳಲಿದೆ ಎಂದು ಗುರುವಾರದ ಹವಾಮಾನ ಇಲಾಕೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಭಾರೀ ಮಳೆ, ಪ್ರವಾಹದ ಆತಂಕದಲ್ಲಿದ್ದ ನಿವಾಸಿಗಳಿಗೆ ಹವಾಮಾನ ಇಲಾಖೆ ವಾಯುಭಾರ ಕುಸಿತ ದುರ್ಬಲಗೊಳ್ಳಲಿದೆ ಎಂದು ಹೇಳಿ ಸಿಹಿ ಸುದ್ದಿಕೊಟ್ಟಿದೆ.
ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತವಾಗಿತ್ತು. ಅದು ಚಂಡಮಾರುತ ಪರಿಚಲನೆಯಾಗಿ ಬದಲಾಗಿತ್ತು. ಇದೀಗ ಮನ್ನಾರ್ ಗಲ್ಫ್ ಮತ್ತು ನೆರೆಹೊರೆಯ ಸಮುದ್ರ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಸಂಯೋಜಿತ ಮೇಲ್ಭಾಗದ ಗಾಳಿಯ ಚಂಡಮಾರುತದ ಪರಿಚಲನೆಯು ವಿವಿಧ ಹಂತಗಳವರೆ ಮುಂದುವರಿಯುತ್ತದೆ.
ಈ ಸ್ಟ್ರಫ್ ಅಥವಾ ಬಿರುಗಾಳಿಯ ವ್ಯವಸ್ಥೆಯು ತನ್ನ ಮೂಲ ಸ್ಥಾನದಿಂದ ಸಮುದ್ರ ಮೇಲ್ಮಟ್ಟದಲ್ಲಿ ಪಶ್ಚಿಮ ರಿಂದ ವಾಯುವ್ಯದ ಕಡೆಗೆ ಅಂದರೆ ತಮಿಳುನಾಡಿನ ದಕ್ಷಿಣ ಕಡೆಗೆ ಸಾಗುತ್ತಾ ದುರ್ಬಲಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ಹವಾಮಾನ ಇಲಾಖೆ ಲೆಕ್ಕಾಚಾರ ನಿಜವಾದಲ್ಲಿ ಮುಂದಿನ 24 ಗಂಟೆಯಲ್ಲಿ (ಡಿಸೆಂಬರ್ 13ರ ನಂತರ) ವಾಯುಭಾರ ಕುಸಿತವು ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಚೆನ್ನೈನಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಜೊತೆಗೆ ಪ್ರವಾದಹ ಆತಂಕ ಶುರುವಾಗಿದೆ. ಶಾಲೆಗಳಿಗೆ ಇಂದು ರಜೆ ಘೊಷಿಸಲಾಗಿದೆ. ಇತ್ತರ ಕರ್ನಾಟಕದ ಬೆಂಗಳೂರು ಹಾಗು ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಭಾರೀ ಮಳೆ ಅಬ್ಬರಿಸುವ ಮುನ್ಸೂಚನೆ ಈಗಾಗಲೇ ನೀಡಲಾಗಿದೆ.
ವಾಯುಭಾರ ಕುಸಿತ: ಗಾಳಿಯ ವೇಳಗ ಇಳಿಕೆ ನಿರೀಕ್ಷೆ
ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಿಗೆ ಇಂದು ಗುರುವಾರ ಭಾರೀ ಮಳೆ ಬರುವ ಸಂಭವವಿದೆ. ಈ ಮಧ್ಯೆ ಮುಂದಿನ ಹಲವು ಗಂಟೆಗಳಲ್ಲಿ ವಾಯುಭಾರ ಕುಸಿತಗೊಳ್ಳುವ ಲಕ್ಷಣಗಳು ಇವೆ. ಕರಾವಳಿಗೆ ಸಮೀಪಿಸುತ್ತಿದ್ದಂತೆ ಚಂಡಮಾರುತದ ಪ್ರಭಾವ, ತೀವ್ರ, ಗಾಳಿ ವೇಗ ಕಡಿಮೆ ಆಗುವ ಸಂಭವವಿದೆ ಎಂದು ಐಎಂಡಿ ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಭಾರೀ ಮಳೆ: ಯೆಲ್ಲೋ ಅಲರ್ಟ್
ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಶುಕ್ರವಾರ ಒಂದು ದಿನ ಹಳದಿ ಎಚ್ಚರಿಕೆ ನೀಡಲಾಗಿದೆ. ಅಂದು ಈ ಜಿಲ್ಲೆಗಳಿಗೆ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಎಲ್ಲೆಡೆ ಚಳಿ, ತಂಪು ಹಾಗೂ ಮಬ್ಬು ವಾತಾವರಣವೇ ಕಂಡು ಬರುತ್ತಿದೆ.
Published by
