ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್‌ ಕೊರೆಸಲು ಸಹಾಯಧನ ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಕರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ.

ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.

ಸಣ್ಣ – ಅತಿ ಸಣ್ಣ ರೈತರಿಗೆ ಅನುಕೂಲ

ಗಂಗಾ ಕಲ್ಯಾಣ ಯೋಜನೆಯಡಿ ಈಗ ಅರ್ಹ ಸಣ್ಣ ಹಾಗೂ ಅತಿ ಸಣ್ಣ ರೈತರು (ಅಂದರೆ 1.20 ಎಕರೆಯಿಂದ 5 ಎಕರೆ ವರೆಗೆ ಜಮೀನು ಹೊಂದಿರುವವರು) ಬೋರ್‌ವೆಲ್‌ ಕೊರೆಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ಅಷ್ಟಾಗಿ ಭಾದಿಸದು. ಇದರಿಂದ ಉತ್ತಮ ಬೆಳೆ ಪಡೆಯಬಹುದಾಗಿದ್ದು, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹರು ಯಾರು? ದಾಖಲೆ ಏನು ಬೇಕು?

ಮಾಹಿತಿ ಬೇಕಿದ್ದರೆ ಸಹಾಯವಾಣಿಗೆ ಕರೆ ಮಾಡಿ

ಈ ಯೋಜನೆ ಬಗ್ಗೆ ಗೊಂದಲಗಳಿದ್ದರೆ, ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅಥವಾ ಸೋಷಿಯಲ್‌ ಮೀಡಿಯಾ X ಖಾತೆ @SWDGok ಗೆ ಸಂಪರ್ಕ ಮಾಡಬಹುದು.

Published by

Leave a Reply

Your email address will not be published. Required fields are marked *