ಐಪಿಎಲ್ ಮಾಜಿ ಅಧ್ಯಕ್ಷ (Former IPL Chairman) ಲಲಿತ್ ಮೋದಿ (Lalit Modi) ಅವರು ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಬಿಸಿಸಿಐನ ಮಾಜಿ ಕಾರ್ಯದರ್ಶಿ ಎನ್ ಶ್ರೀನಿವಾಸನ್ (N Srinivasan) ಅವರ ಮೇಲೆ ಅಂಪೈರ್ ಫಿಕ್ಸಿಂಗ್ (Umpire Fixing) ಮತ್ತು ಹರಾಜು ನಿಯಂತ್ರಣ (Auction Rigging) ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

2008 ಮತ್ತು 2010ರ ನಡುವೆ ಫ್ರಾಂಚೈಸ್ ಲೀಗ್ ಟೇಕ್ ಆಫ್ ಆಗುತ್ತದೆ ಎಂದು ಶ್ರೀನಿವಾಸನ್ ಭಾವಿಸಿರಲಿಲ್ಲ, ಆದರೆ T20 ಸ್ಪರ್ಧೆಯು ಬ್ಲಾಕ್ಬಸ್ಟರ್ ಆಗಿ ಮಾರ್ಪಟ್ಟಾಗ ದಿಢೀರ್ ದುಡ್ಡು ಮಾಡುವತ್ತ ಕಣ್ಣಿಟ್ಟರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಹಿತಾಸಕ್ತಿಗಳ ಘರ್ಷಣೆ ರೂಪಿಸುವ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳಿಗೆ ಶ್ರೀನಿವಾಸನ್ ಚೆನ್ನೈ ಮೂಲದ ಅಂಪೈರ್‌ಗಳನ್ನು ನೇಮಿಸುತ್ತಾರೆ ಎಂದು ಲಲಿತ್ ಮೋದಿ ಹೇಳಿಕೊಂಡಿದ್ದು, ಈ ವಿಚಾರದ ಬಗ್ಗೆ ಅವರೊಂದಿಗೆ ತಕರಾರು ತೆಗೆದರು.

ಶ್ರೀನಿವಾಸನ್ ಐಪಿಎಲ್ ಇಷ್ಟಪಡಲಿಲ್ಲ

ಎನ್ ಶ್ರೀನಿವಾಸನ್ ಐಪಿಎಲ್ ಅನ್ನು ಇಷ್ಟಪಡಲಿಲ್ಲ, ಐಪಿಎಲ್ ಕೆಲಸ ಮಾಡುತ್ತದೆ ಎಂದು ಅವರು ಭಾವಿಸಿರಲಿಲ್ಲ ಆದರೆ ಅದು ಕೆಲಸ ಮಾಡಲು ಪ್ರಾರಂಭಿಸಿದಾಗ ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯಲು ಮುಂದಾದರು’ ಎಂದು 60 ವರ್ಷ ವಯಸ್ಸಿನ ಲಲಿತ್ ಮೋದಿ ಹೇಳಿದರು. ‘ಅವರು ಮಂಡಳಿಯ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದರು, ಆದ್ದರಿಂದ ಅವರು ನನ್ನ ದೊಡ್ಡ ವಿರೋಧಿಯಾಗಿದ್ದರು. ನಾನು ಅವರ ವಿರುದ್ಧ ಹರಿಹಾಯ್ದಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

https://twitter.com/Indian_Analyzer/status/1861583129519276263?ref_src=twsrc%5Etfw%7Ctwcamp%5Etweetembed%7Ctwterm%5E1861583129519276263%7Ctwgr%5E564c2f4358eb91cb656ee255a8bef78ce2d93b35%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಅಂಪೈರ್ ಫಿಕ್ಸಿಂಗ್‌ ಆರೋಪ

ಅವರು ಅಂಪೈರ್ ಫಿಕ್ಸಿಂಗ್‌ನಂತಹ ಅನೇಕ ಕೆಲಸಗಳನ್ನು ಮಾಡಿದಾಗ ನಾನು ಅವರ ಮೇಲೆ ಆರೋಪ ಮಾಡಿದೆ. ಅವರು ಅಂಪೈರ್ ಅನ್ನು ಬದಲಾಯಿಸುತ್ತಾರೆ ಎಂಬ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವರು ಚೆನ್ನೈ ಪಂದ್ಯಗಳಲ್ಲಿ ಚೆನ್ನೈ ಅಂಪೈರ್ ಅನ್ನು ಹಾಕುತ್ತಿದ್ದಾರೆಂದು ನಾನು ಅರಿತುಕೊಂಡೆ. ಇದು ನನಗೆ ಸಮಸ್ಯೆಯಾಗಿತ್ತು, ಅದು ಫಿಕ್ಸಿಂಗ್ ಆಗಿದೆ, ಹಾಗಾಗಿ ನಾನು ಅವುಗಳನ್ನು ಬಹಿರಂಗಪಡಿಸಲು ಪ್ರಯತ್ನಿಸಿದಾಗ, ಅವರು ಸಂಪೂರ್ಣವಾಗಿ ನನ್ನ ವಿರುದ್ಧ ಹೋದರು’, ಎಂದು ಲಲಿತ್ ಮೋದಿ ಹೇಳಿಕೊಂಡಿದ್ದಾರೆ.

ಫ್ಲಿಂಟಾಫ್ ಬೇಕೆಂದ್ರಿದ್ದ ಶ್ರೀನಿವಾಸನ್

ಸಿಎಸ್‌ಕೆ ಇಂಗ್ಲಿಷ್ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಖರೀದಿಸಿದ ಉದಾಹರಣೆಯನ್ನು ಉಲ್ಲೇಖಿಸಿ ಶ್ರೀನಿವಾಸನ್ ಹರಾಜುಗಳನ್ನೂ ಫಿಕ್ಸಿಂಗ್ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದರು. ಮಾಜಿ ಐಸಿಸಿ ಅಧ್ಯಕ್ಷ ಶ್ರೀನಿವಾಸನ್ ಆಲ್‌ರೌಂಡರ್‌ನ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಅನ್ನೋದು ಬಹಿರಂಗ ರಹಸ್ಯವಾಗಿದೆ ಎಂದು ಅವರು ಹೇಳಿದರು. ‘ಹರಾಜು ನಿಯಂತ್ರಣದಿಂದ ನಾನು ಫ್ಲಿಂಟಾಫ್ ಅನ್ನು ಶ್ರೀನಿವಾಸನ್‌ಗೆ ನೀಡಿದ್ದೇನೆ. ಹೌದು, ನಾವು ಇದನ್ನ ಮಾಡಿದೆವು. ಇದರಲ್ಲಿ ಯಾವುದೇ ಸಂದೇಹವಿಲ್ಲ, ಪ್ರತಿ ತಂಡಕ್ಕೂ ಅದರ ಬಗ್ಗೆ ತಿಳಿದಿದೆ’ ಎಂದು ಅವರು ಹೇಳಿದರು.

ಐಪಿಎಲ್ ನಡೆಯಲು ಬಿಡುತ್ತಿರಲಿಲ್ಲ’

ಶ್ರೀನಿವಾಸನ್ ಐಪಿಎಲ್ ನಡೆಯಲು ಬಿಡುತ್ತಿರಲಿಲ್ಲ. ಅವನು ನಮ್ಮ ಪೊದೆಗೆ ಮುಳ್ಳಾಗಿದ್ದನು. ಹೌದು, ಫ್ಲಿಂಟಾಫ್‌ಗಾಗಿ ಬಿಡ್ ಮಾಡಬೇಡಿ ಎಂದು ನಾವು ಎಲ್ಲರಿಗೂ ಹೇಳಿದ್ದೇವೆ’ ಎಂದು ಮೋದಿ ಮುಂದುವರಿಸಿದರು. ‘ಹೌದು, ನನಗೆ ಫ್ಲಿಂಟಾಫ್ ಬೇಕು ಎಂದು ಶ್ರೀನಿವಾಸನ್ ಹೇಳಿದ್ದರಿಂದ ನಾನು ಹಾಗೆ ಮಾಡಿದೆ’ ಎಂದು ಅವರು ಬಹಿರಂಗಪಡಿಸಿದರು.

ನೀವು ಐಪಿಎಲ್‌ನಂತಹ ಕಾರ್ಯಕ್ರಮವನ್ನು ಮಾಡಲು ಪ್ರಯತ್ನಿಸುತ್ತಿರುವಾಗ ಮತ್ತು ನಾನು ಅದನ್ನು ಏಕಾಂಗಿಯಾಗಿ ಮಾಡಿದ್ದೇನೆ, ನೀವು ಪ್ರತಿ ಕಂಟಕವನ್ನು ತೆಗೆದುಹಾಕಬೇಕು ಮತ್ತು ಆಟ ನಡೆಯಲು ಏನು ಬೇಕೋ ಅದನ್ನು ಮಾಡಬೇಕು’ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *