
ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ 2025ರ ಮೆಗಾ ಹರಾಜಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭಾನುವಾರದಿಂದ ಪ್ರಾರಂಭವಾಗಲಿರುವ ಮೆಗಾ ಹಾರಜು ಎರಡು ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ, 574 ಆಟಗಾರರು ಶಾರ್ಟ್ ಲಿಸ್ಟ್ ಆಗಿದ್ದು, ಕೇವಲ 204 ಖಾಲಿ ಸ್ಲಾಟ್‌ಗಳಿಗೆ ಬಿಡ್ಡಿಂಗ್ ನಡೆಯಲಿದೆ.
ಇದರಲ್ಲಿ ವಿದೇಶಿ ಆಟಗಾರರಿಗೆ 70 ಸ್ಲಾಟ್‌ಗಳು ಲಭ್ಯವಿವೆ. ಈ ಬಾರಿಯ ಶಾರ್ಟ್ ಲಿಸ್ಟ್‌ನಲ್ಲಿ 366 ಭಾರತೀಯ ಹಾಗೂ 208 ವಿದೇಶಿ ಆಟಗಾರರಿದ್ದಾರೆ. ಜೊತೆಗೆ ಅಸೋಸಿಯೇಟ್ ರಾಷ್ಟ್ರಗಳ 3 ಆಟಗಾರರೂ ಇದ್ದಾರೆ. ಹಾಗಿದ್ದರೆ ಈ ಮೆಗಾ ಹಾಋಜು ಎಷ್ಟು ಗಂಟೆಗೆ ಆರಂಭ? ಲೈವ್ ಸ್ಟ್ರೀಮಿಂಗ್? ಸೇರಿದಂತೆ ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ.

ಐಪಿಎಲ್ ಮೆಗಾ ಹರಾಜಿನ ವಿವರ:IPL 2025ರ ಮೆಗಾ ಹರಾಜು ಯಾವಾಗ? ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24-25 (ರವಿವಾರ-ಸೋಮವಾರ) ನಡೆಯಲಿದೆ.IPL 2025ರ ಮೆಗಾ ಹರಾಜು ನಡೆಯುವ ಸ್ಥಳ ಎಲ್ಲಿ?ಐಪಿಎಲ್ 2025ರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.IPL 2025ರ ಮೆಗಾ ಹರಾಜು ಎಷ್ಟು ಗಂಟೆಗೆ ಆರಂಭ?ಐಪಿಎಲ್ 2025ರ ಮೆಗಾ ಹರಾಜು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ.IPL 2025ರ ಮೆಗಾ ಹರಾಜನ್ನು ನೇರಪ್ರಸಾರ ಎಲ್ಲಿ?

ಐಪಿಎಲ್ 2025ರ ಮೆಗಾ ಹರಾಜು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.IPL 2025ರ ಮೆಗಾ ಹರಾಜಿನ ಲೈವ್ ಸ್ಟ್ರೀಮಿಂಗ್ ಎಲ್ಲಿ? ಐಪಿಎಲ್ 2025ರ ಮೆಗಾ ಹರಾಜಿನ ಲೈವ್ ಸ್ಟ್ರೀಮಿಂಗ್ JIO ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

ಪ್ರತಿ ತಂಡದ ಪರ್ಸ್ ಹಣ:ಮುಂಬೈ ಇಂಡಿಯನ್ಸ್: 55 ಕೋಟಿ ಪಂಜಾಬ್ ಕಿಂಗ್ಸ್: 110.5 ಕೋಟಿದೆಹಲಿ ಕ್ಯಾಪಿಟಲ್ಸ್: 73 ಕೋಟಿಸನ್ ರೈಸರ್ಸ್ ಹೈದರಾಬಾದ್: 45 ಕೋಟಿರಾಜಸ್ಥಾನ್ ರಾಯಲ್ಸ್: 41 ಕೋಟಿ ಚೆನ್ನೈ ಸೂಪರ್ ಕಿಂಗ್ಸ್: 55 ಕೋಟಿಲಕ್ನೋ ಸೂಪರ್ ಜೈಂಟ್ಸ್: 69 ಕೋಟಿರಾಯಲ್ ಚಾಲೆಂಜರ್ಸ್ ಬೆಂಗಳೂರು: 83 ಕೋಟಿಗುಜರಾತ್ ಟೈಟಾನ್ಸ್: 69 ಕೋಟಿಕೋಲ್ಕತ್ತಾ ನೈಟ್ ರೈಡರ್ಸ್: 51 ಕೋಟಿ
ಹರಾಜಿನಲ್ಲಿ 81 ಆಟಗಾರರ ಮೂಲ ಬೆಲೆ 2 ಕೋಟಿ ಆದರೆ 27 ಆಟಗಾರರ ಮೂಲ ಬೆಲೆ 1.50 ಕೋಟಿ, 18 ಆಟಗಾರರ ಮೂಲ ಬೆಲೆ 1.25 ಕೋಟಿ, 23 ಆಟಗಾರರ ಮೂಲ ಬೆಲೆ 1 ಕೋಟಿ ಆಗಿದೆ. ಅದೇ ರೀತಿ 92 ಆಟಗಾರರ ಮೂಲ ಬೆಲೆ 75 ಲಕ್ಷ, 8 ಆಟಗಾರರ ಮೂಲ ಬೆಲೆ 50 ಲಕ್ಷ, 5 ಆಟಗಾರರ ಮೂಲ ಬೆಲೆ 40 ಲಕ್ಷ ಹಾಗೂ 320 ಆಟಗಾರರ ಮೂಲ ಬೆಲೆ 30 ಕೋಟಿ ಆಗಿದೆ.ಯಾವ ಫ್ರಾಂಚೈಸಿ ಎಷ್ಟು ಪ್ಲೇಯರ್ಸ್ ಖರೀದಿಸಬಹುದು?
RCB – 22 ಆಟಗಾರರು – 8 ವಿದೇಶಿ ಪ್ಲೇಯರ್ಸ್CSK – 20 ಆಟಗಾರರು – 7 ವಿದೇಶಿ ಪ್ಲೇಯರ್ಸ್MI – 20 ಆಟಗಾರರು – 8 ವಿದೇಶಿ ಪ್ಲೇಯರ್ಸ್GT – 20 ಆಟಗಾರರು – 7 ವಿದೇಶಿ ಪ್ಲೇಯರ್ಸ್DC – 21 ಆಟಗಾರರು – 7 ವಿದೇಶಿ ಪ್ಲೇಯರ್ಸ್SRH – 20 ಆಟಗಾರರು – 5 ವಿದೇಶಿ ಪ್ಲೇಯರ್ಸ್RR – 19 ಆಟಗಾರರು – 7 ವಿದೇಶಿ ಪ್ಲೇಯರ್ಸ್PBKS – 23 ಆಟಗಾರರು – 8 ವಿದೇಶಿ ಪ್ಲೇಯರ್ಸ್KKR – 19 ಆಟಗಾರರು – 6 ವಿದೇಶಿ ಪ್ಲೇಯರ್ಸ್LSG – 20 ಆಟಗಾರರು- 7 ವಿದೇಶಿ ಪ್ಲೇಯರ್ಸ್