
Bigg Boss Kannada 11 winner : ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ 29 ಸೆಪ್ಟೆಂಬರ್ 2024 ರಂದು ಪ್ರಸಾರವಾಯ್ತು. ಈ ಬಾರಿಯೂ ಕಿಚ್ಚ ಸುದೀಪ್ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲದೆ, ಈಗಾಗಲೇ ಈ ಬಿಗ್ ಶೋ ಪ್ರಾರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ.. ಇದೀಗ ಈ ಬಾರಿ ಈ ಸ್ಪರ್ಧೆಯಲ್ಲಿ ಗೆಲ್ಲೋದು ಯಾರು ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ..
ಹೌದು… ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸುತ್ತಿರುವ ಬಿಗ್ ಬಾಸ್ 11ರ ವಿನ್ನರ್ ಬಗ್ಗೆ ಇಂದು ಮಾತನಾಡಲೇಬೇಕು.. ದಿನಗಳು ಹತ್ತಿರವಾಗುತ್ತಿದ್ದ ವಿಜೇತ ಯಾರಾಗ್ತಾರೆ ಎನ್ನವು ಬಗ್ಗೆ ಕೆಲವರ ತಲೆಯಲ್ಲಿ ಇದೆ.. ಈ ಪೈಕಿ ಹನುಮಂತ ಲಮಾಣಿ ಬಹುತೇಕ ಗೆಲ್ಲೋದು ಫಿಕ್ಸ್ ಎಂದು ಹೇಳಲಾಗುತ್ತಿದೆ..
ಇದಕ್ಕೆ ಕಾರಣವೂ ಇದೆ. ಬಡ ಕುಟುಂಬದಿಂದ ಬಂದ ಹನುಮಂತ ಕಷ್ಟ ಪಟ್ಟು ತನ್ನ ಹಾಡುಗಾರಿಕೆ ಮೂಲಕ ಬಿಗ್ ಬಾಸ್ ಸ್ಪರ್ಧಿಯಾಗುವ ಹಂತಕ್ಕೆ ಬಂದಿದ್ದಾನೆ ಅಂದ್ರೆ ಅಷ್ಟು ಸರಳವಲ್ಲ.. ಅಲ್ಲದೆ, ಇಂದು ದೊಡ್ಮನೆಯಲ್ಲಿ ಬಹುತೇಕ ದೊಡ್ಡ ಕಲಾವಿದರ ಮಧ್ಯ ತಾನೂ ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಆಟವಾಡುತ್ತಿದ್ದಾನೆ..

ಮಂಕಾಗಿದ್ದ ಈ ಶೋಗೆ ಹನುಮಂತ ಎಂಟ್ರಿ ಕೊಟ್ಟಮೇಲೆ ಒಂದು ಕಳೆ ಬಂತು ಎನ್ನುವುದು ನೆಟ್ಟಿಗರ ಮಾತು.. ಇದು ಬಹುತೇಕ ಸತ್ಯ ಅಂದ್ರೆ ತಪ್ಪಾಗಲ್ಲ.. ಅಷ್ಟೇ ಅಲ್ಲದೆ ಛಲ ಬಿಡದೇ ಯಾರಿಗೂ ಮೋಸ ಮಾಡದೇ, ಮನಸ್ಸು ನೋಯಿಸದೇ ಆಟವಾಡುತ್ತಿರುವ ಹನುಮಂತನ ಮೇಲೆ ಪ್ರೇಕ್ಷಕರಿಗೂ ಪ್ರೀತಿ ಹೆಚ್ಚಾಗಿದೆ..
ಇನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಹನುಮಂತ ಟಿವಿಸ್ಟಾರ್ ಅದ್ರೂ ಆರ್ಥಿಕವಾಗಿ ಹಿಂದೆ ಬಿದ್ದಿರುವ ವಿಚಾರವಾಗಿ ವಿಡಿಯೋ ಒಂದು ವೈರಲ್ ಆಗಿತ್ತು.. ಬೇಕರಿಯೊಂದರ ಬಳಿ ಸಾಮಾನ್ಯರಂತೆ ನಿಂತಿದ್ದು, ಅಲ್ಲದೆ, ಅಲ್ಲಿಯವರು ಕೇಳಿದಾಗ ತನ್ನ ಬಡತನ ಸ್ಥಿತಿ ಬಗ್ಗೆ ಹೇಳಿಕೊಂಡು ಎಲ್ಲಿಯಾದ್ರೂ ಕಾರ್ಯಕ್ರಮ ಇದ್ರೆ ಕರೀರಿ ಬರ್ತೀನಿ ಅಂತ ಹೇಳಿದ್ದು ವೈರಲ್ ಆಗಿತ್ತು..
ಹೀಗೆ ಹಲವಾರು ವಿಚಾರಗಳು ಮತ್ತು ಅವರ ಮನೆ ಸ್ಥಿತಿ ಹಾಗೂ ಬಿಗ್ ಬಾಸ್ ಶೋನಲ್ಲಿ ಹನುಮಂತನ ಹಾಸ್ಯದ ಮಾತುಗಳು, ಆಟದ ರೀತಿ ಎಲ್ಲವನ್ನೂ ನೋಡಿದಾಗ ಈ ಬಾರಿ ಬಿಗ್ ಬಾಸ್ ವಿನ್ನರ್ ಈತನೇ ಎನ್ನುವುದು ಬಹುತೇಕ ಖಚಿತವಾದಂತೆ.. ಇಷ್ಟೇ ಅಲ್ಲ.. ಇನ್ನೂ ಹಲವಾರು ವಿಚಾರಗಳಿಗೆ..
ಕಳೆದ ತೆಲುಗು ಬಿಗ್‌ಬಾಸ್ ಶೋ ವಿನ್ನರ್ ರೈತನ ಮಗ ಪ್ರಶಾಂತ್ ಆಗಿದ್ದ.. ಮೊನ್ನೆಯಷ್ಟೇ ಮುಗಿದ ಮರಾಠಿ ಬಿಗ್ ಬಾಸ್ ಶೋನಲ್ಲಿ ರೀಲ್ಸ್ ಮಾಡುತ್ತ ವೈರಲ್ ಆಗಿದ್ದ ಸುರಜ್ ಚವ್ಹಾಣ್ ಕಡು ಬಡವ ಹೀಗೆ ಎಲ್ಲವನ್ನೂ ನೋಡುತ್ತಾ ಹೋದ್ರೆ ಈ ಬಾರಿ ಕನ್ನಡ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಎನ್ನುವುದನ್ನ ಹೇಳಬೇಕಿಲ್ಲ… ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಹನುಮಂತನೇ ಗೆಲ್ಬೇಕು ಅಂತ ಬಹುತೇಕ ಜನರ ಆಶಿಸುತ್ತಿದ್ದಾರೆ.. ಆದ್ರೆ ಬಿಗ್‌ಬಾಸ್ ಮೈಂಡ್‌ನಲ್ಲಿ ಯಾರಿದ್ದಾರೆ..? ಎನ್ನುವುದನ್ನ ಕಾಯ್ತು ನೋಡಬೇಕಿದೆ..
Published by
twelvenewz.com