ಬೆಳಗಾವಿ: ವಿಧಾನಸಭೆ ಚಳಿಗಾಲದ ಅಧಿವೇಶನದ (Winter Session) ಕೊನೆಯ ದಿನವಾದ ನಿನ್ನೆ ಕಲಾಪದಲ್ಲಿ ಭಾರೀ ಹೈಡ್ರಾಮ ಉಂಟಾಗಿತ್ತು. ಗುರುವಾರ ಮಧ್ಯಾಹ್ನ ಪರಿಷತ್‌ನಲ್ಲಿ ಅಂಬೇಡ್ಕರ್ (Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ.

ಈ ವೇಳೆ ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ಅವರು ತಮ್ಮ ವಿರುದ್ಧ ಅಸಂವಿಧಾನಿಕ (Unparliamentary) ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮಾಡಿದ್ದರು. ಸಿಟಿ ರವಿ ಅವರ ಬಂಧನ ಕೂಡ ಆಗಿದೆ, ಇಂದು ನ್ಯಾಯಾಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ಧರಣಿ

ಈ ಬಗ್ಗೆ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಗೃಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದರು. ಅದನ್ನ ನಾವು ನಿನ್ನೆ ಖಂಡಿಸಿ ಪ್ರತಿಭಟನೆ ನಡೆಸಿದೆವು. ಏಕೆಂದರೆ ಅಂಬೇಡ್ಕರ್ ಅವರಿಂದಲೇ ನಾವು ಎಂಎಲ್‌ಎ, ಮಂತ್ರಿ ಆಗಲಿಕ್ಕೆ ಸಾಧ್ಯವಾಗಿದೆ ಎಂದರು.

ನನಗೆ ಹೇಳಬಾರದ ಪದ ಹೇಳಿದ್ರು ಎಂದು ಕಣ್ಣೀರಿಟ್ಟ ಹೆಬ್ಬಾಳ್ಕರ್

ಧರಣಿ ಮುಗಿಸಿ ಸೀಟ್ ಮೇಲೆ ಕುಳಿತಿದ್ದೇವು ಆಗ ಸಿಟಿ ರವಿ ಅವರು ಇದ್ದಕ್ಕಿದ್ದಂತೆ ಬಂದು ರಾಹುಲ್ ಗಾಂಧಿಗೆ ಡ್ರಗ್ ಎಡಿಕ್ಟ್ ಎಂದರು, ಆಗ ನನಗೆ ಕೋಪ ಬಂದು, ತಾವು ಕೂಡ ಎಕ್ಸಿಡೆಂಟ್ ಮಾಡಿದ್ದೀರಿ ನೀವು ಕೊಲೆಗಾರರಾಗ್ತಿರಿ ಅಂದೆ… ಆಗ ಅವರು ತಿರುಗೆ ನನಗೆ ಹೇಳಬಾರದ ಪದವನ್ನ ಒಂದಬಾರಿ ಅಲ್ಲ ಎರಡು ಬಾರಿ ಅಲ್ಲ ಪದೇ ಪದೇ ಮೂರ್ನಾಲ್ಕು ಬಾರಿ ಹೇಳಿದ್ರು ಎಂದು ಹೆಬ್ಬಾಳ್ಕರ್ ಅವರು ಕಣ್ಣೀರು ಹಾಕಿದರು.

ಆ ವೇದಿಕೆಯಲ್ಲಿ ಎಲ್ಲರೂ ದೃತರಾಷ್ಟ್ರರಾದರು

ನಾನು ಇದಕ್ಕೆಲ್ಲಾ ಹೆದರಲ್ಲ ಆದರೆ, ನಾನೊಬ್ಬ ಮಹಿಳೆ, ತಾಯಿ, ಸಹೋದರಿ, ಅತ್ತೆ…. ನನಗೆ ಆ ತರಾ ಹೇಳಿದ್ದಕ್ಕೆ ನನಗೆ ಅಪಮಾನವಾಗಿದೆ. ಇಲ್ಲಿಯವರೆಗೂ ನಾನು ಒಂದು ಇರುವೆಗೂ ಕಾಟ ಕೊಟ್ಟವಳಲ್ಲ, ಕೆಟ್ಟವರನ್ನ ಕಂಡ್ರೆ ದೂರ ಇರೋಳು… ಆ ವೇದಿಕೆಯಲ್ಲಿ ಎಲ್ಲರೂ ದೃತರಾಷ್ಟ್ರರಾದರು. ನಮ್ಮ ಪಕ್ಷದವರು ಮಾತ್ರ ನನ್ನ ಬೆನ್ನಿಗೆ ನಿಂತರು ಎಂದು ಹೇಳಿದರು.

ಸಿಟಿ ರವಿ ಸುಳ್ಳು ಹೇಳ್ತಿದಾರೆ

ಅಂಬೇಡ್ಕರ್ ಗೆ ಅವಮಾನ ಮಾಡಿರುವುದನ್ನ ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತಾಡ್ತಾರೆ ನನ್ನ ಬಗ್ಗೆ ಮಾತಾಡ್ತಾರೆ ಅಂದ್ರೆ ಏನ ಅರ್ಥ? ಅವರು ಆ ಪದ ಬಳಕೆ ಮಾಡಿರುವುದರಿಂದ ಬಹಳ ಅವಮಾನ ಆಗಿದೆ. ಅವರು ಆ ಪದ ಬಳಕೆ ಮಾಡಿದ್ದರೂ ಈಗ ಇಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದರು.

Published by

Leave a Reply

Your email address will not be published. Required fields are marked *