Lucky Man : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ.

ಅಂಥದ್ದೆ ಮಹಿಮೆ ಇದೀಗ ಸಿಂಗಾಪೂರ್​ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ. ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಭಾರತೀಯ ಮೂಲದ ವ್ಯಕ್ತಿ ತನ್ನ ಹೆಂಡತಿಯ ಮಾತನ್ನು ಕೇಳಿ ಇದೀಗ 8 ಕೋಟಿ ರೂ. ಮೌಲ್ಯದ ಲಕ್ಕಿ ಡ್ರಾ ಗೆದ್ದಿದ್ದಾರೆ. ಪತ್ನಿಗಾಗಿ ಚಿನ್ನದ ಸರ ಖರೀದಿಸಿದ ನಂತರ ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಡಾಲರ್ ಬಹುಮಾನವನ್ನು ಗೆದಿದ್ದಾರೆ. ಮೂರು ತಿಂಗಳ ಹಿಂದೆ ಪತ್ನಿಗಾಗಿ ಖರೀದಿಸಿದ ಚಿನ್ನದ ಸರ ಇದೀಗ ಅದೃಷ್ಟವನ್ನು ತಂದುಕೊಟ್ಟಿದೆ. ಒಂದೇ ರಾತ್ರಿಯಲ್ಲಿ ಈ ವ್ಯಕ್ತಿ ಕೋಟ್ಯಧೀಶ್ವರನಾಗಿದ್ದಾನೆ.

ವಿವರಣೆಗೆ ಬರುವುದಾದರೆ, ಬಾಲಸುಬ್ರಮಣ್ಯಂ ಚಿದಂಬರಂ ಎಂಬುವವರು 21 ವರ್ಷಗಳಿಂದ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಆಭರಣ ಕಂಪನಿಯ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಲಕ್ಕಿ ಡ್ರಾ ನಡೆಸಲಾಯಿತು. ಆ ಆಭರಣ ಮಳಿಗೆಯಲ್ಲಿ 250 ಡಾಲರ್​ಗಿಂತ ಹೆಚ್ಚು ಮೌಲ್ಯದ ಆಭರಣಗಳನ್ನು ಖರೀದಿಸಿದವರು ಲಕ್ಕಿ ಡ್ರಾಗೆ ಅರ್ಹರಾಗಿರುತ್ತಾರೆ.

ತನ್ನ ಪತ್ನಿ ಚಿನ್ನದ ಸರ ಕೊಡಿಸುವಂತೆ ಕೇಳಿದ್ದಳು. ಹೀಗಾಗಿ ಚಿದಂಬರಂ ಅವರು ಆಭರಣದ ಮಳಿಗೆಗೆ ಹೋಗಿ ಹೆಂಡತಿಗಾಗಿ 6000 ಡಾಲರ್ ಮೌಲ್ಯದ ಚಿನ್ನವನ್ನು ಖರೀದಿಸಿ, ಮನೆಗೆ ಬಂದಿದ್ದರು. ಇದಾದ ಮೂರು ತಿಂಗಳ ಬಳಿಕ ಲಕ್ಕಿ ಡ್ರಾನಲ್ಲಿ 8 ಕೋಟಿ ರೂ. ಬಂಪರ್​ ಬಹುಮಾನ ಸಿಕ್ಕಿದೆ. ಇದನ್ನು ಕೇಳಿ ಚಿದಂಬರಂ ಕುಟುಂಬ ಕುಣಿದು ಕುಪ್ಪಳಿಸಿದೆ.

ಇಷ್ಟು ದೊಡ್ಡ ಲಕ್ಕಿ ಡ್ರಾ ಗೆದ್ದಿದ್ದಕ್ಕೆ ಕಣ್ಣೀರು ಹಾಕುತ್ತಾ ಚಿದಂಬರಂ ಸಂತಸ ವ್ಯಕ್ತಪಡಿಸಿದರು. ತಂದೆ ತೀರಿಕೊಂಡ ದಿನವೇ ಈ ಸುದ್ದಿ ಕೇಳಿ ಒಂದು ಕಡೆ ಖುಷಿಯಾಯಿತು ಎಂದರು. ತಮ್ಮ ತಾಯಿಯೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ಮತ್ತು ಗೆದ್ದ ಹಣದ ಒಂದು ಭಾಗವನ್ನು ಸಮುದಾಯಕ್ಕೆ ದಾನ ಮಾಡಲು ಯೋಜಿಸಿರುವುದಾಗಿ ಚಿದಂಬರಂ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

Published by

Leave a Reply

Your email address will not be published. Required fields are marked *