ತೆಲಂಗಾಣ: ಹೊಸ ವರ್ಷದ ಪ್ರಯುಕ್ತ ಇಲ್ಲಿನ ಬಾರೊಂದರಲ್ಲಿ ಮದ್ಯ(Alcohol) ಕಳ್ಳತನ ಮಾಡಲು ಬಂದ ವ್ಯಕ್ತಿ ಒಂದಿಷ್ಟು ನಗದು ಮತ್ತು ಕೆಲ ಮದ್ಯದ ಬಾಟಲಿಗಳನ್ನು ಕದ್ದ ಇತ, ಬಳಿಕ ಬಾರಲ್ಲಿಯೇ ಕಂಠಪೂರ್ತಿ ಕುಡಿದು ಬಾರ್ನಲ್ಲಿಯೇ ಅಮಲಿನಲ್ಲಿ ಮಲಗಿದ್ದಾನೆ. ಮರುದಿನ ಮುಂಜಾನೆ ಮದ್ಯದಂಗಡಿ ತೆರೆದ ಮಾಲೀಕ ಗಾಬರಿಯಾಗಿದ್ದಾನೆ.
ಹೈದರಬಾದ್ನ ಮೇದಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಇಲ್ಲಿ ಕನದುರ್ಗಾ ಬಾರ್ನ ಮೇಲ್ಚಾವಣಿಯ ಹಂಚು ತೆಗೆದು ಬಾರ್ನೊಳಗೆ ನುಗ್ಗಿದ ವ್ಯಕ್ತಿ ಮೊದಲು ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ. ಬಳಿಕ ಕಳ್ಳತನ ಮಾಡಿ, ಕುಡಿದು ಮಲಗಿದ್ದಾನೆ ಎಂದು ವರದಿಯಾಗಿದೆ.
ಬಾ ಗುರು ಕಥೆ ಕೇಳು ಚಾನೆಲ್ subscribe ಮಾಡಿ
ಇದೀಗ ಬಾರ್ನಲ್ಲಿ ಸಿಕ್ಕರುವ ಇತನ ಪೋಟೋ ಭಾರಿ ವೈರಲ್ ಆಗಿದೆ. ಕಂಠಪೂರ್ತಿ ಕುಡಿದ ಹಿನ್ನೆಲೆ ಇತನ ಗುರುತು ಪತ್ತೆಯಾಗಿಲ್ಲ. ಇತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಾರ್ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಡೆದಿದ್ದೇನು?
ಎಂದಿನಂತೆ ರಾತ್ರಿ 10 ಗಂಟೆಗೆ ಬಾರ್ ಮುಚ್ಚಲಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ವ್ಯಕ್ತಿ ತಡರಾತ್ರಿ ಕಳ್ಳತನ ಮಾಡಲು ಬಂದಿದ್ದಾನೆ. ಆದರೆ, ಬಾರ್ನೊಳಗೆ ಬರುವ ಮುಂಚೆ ಪಾನಮತ್ತನಾಗಿದ್ದ ಇತ. ಮತ್ತಷ್ಟು ಕುಡಿದ್ದಾನೆ. ಹೀಗಾಗಿ, ಅಮಲಿನಲ್ಲಿದ್ದ ಇತ ಹೊರಗಡೆ ಹೊಗಲು ಆಗಿಲ್ಲ. ಅಲ್ಲಿಯೇ ಮಲಗಿದ್ದಾನೆ. ಇದನ್ನು ಬೆಳಗ್ಗೆ ಬಾರ್ ಮಾಲೀಕರು ಗಮನಿಸಿದ್ದಾರೆ. (ಏಜೆನ್ಸೀಸ್).
Published by
twelvenewz.com