
ಮಳೆಗಾಲ ಮುಕ್ತಾಯಗಿ ನಿಧಾನವಾಗಿ ಚಳಿಯೂ ಆವರಿಸಿದ್ದರು, ಕೂಡ ಇನ್ನೂ ಮಳೆಯ ಅಬ್ಬರ ನಿಂತಿಲ್ಲ. ಕೆಲವೆಡೆ ಈಗಲೂ ಭಾರೀ ಮಳೆಯಾಗುತ್ತಿದೆ. ಮುಂದಿನ 4 ದಿನ ಮತ್ತೆ ಭಾರೀ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಡಿಸೆಂಬರ್ 8 ರಿಂದ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ.
ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ.
ಫೆಂಗಲ್ ಚಂಡಮಾರುತದ ಹಾನಿಯಿಂದ ಇದೀಗ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿ ಸಾಗರದಲ್ಲಿ ಕಂಡು ಬರುತ್ತಿದೆ. ಮೊದಲ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ.14-15ಕ್ಕೆ ಮಳೆಯಾಗಲಿದೆ. 2ನೇ ವಾಯುಭಾರ ಕುಸಿತ ಡಿ.16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿ.17-18ಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
Published by
