ತಮಿಳುನಾಡು ಕೇರಳ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಫೆಂಗಲ್ ಚಂಡಮಾರುತ ಅಬ್ಬರದಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಇನ್ನೇನು ಮಳೆಯ ಕಾಟ ಮುಗಿತಪ್ಪ ಎನ್ನುವಷ್ಟರಲ್ಲಿ ಮತ್ತೆ ಸೈಕ್ಲೋನ್ ಕಾಟ ಶುರುವಾಗುವ ಸೂಚನೆಗಳಿವೆ.

ಫೆಂಗಲ್ ಪರಿಣಾಮ ಮೂರು ದಿನ ಮಳೆ ಸುರಿದು ಈಗಷ್ಟೇ ನಿಂತಿದೆ, ಹೀಗೆ ಸ್ವಲ್ಪ ಮಳೆ ಕಮ್ಮಿಯಾಗುತ್ತಿದ್ದಂತೆಯೇ ಇನ್ನೂ ಎರಡು ಸೈಕ್ಲೋನ್ ಸೃಷ್ಟಿಯಾಗುವ ಲಕ್ಷಣಗಳು ಕಂಡುಬಂದಿದೆ.

ಮುಂದಿನ 10 ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ೨ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಈ ಪರಿಣಾಮ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಡಿ.14 ಮತ್ತು 15 ರಂದು ಮಳೆಯಾಗಲಿದೆ.ಇನ್ನು ಮತ್ತೊಂದು ಎರಡನೇ ವಾಯುಭಾರ ಕುಸಿತ ಡಿ. 16ಕ್ಕೆ ಸಂಭವಿಸಲಿದ್ದು, ಮತ್ತೆ ಡಿ. 17 ಹಾಗೂ 18ಕ್ಕೆ ಹೆಚ್ಚು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದೆ.

Published by

Leave a Reply

Your email address will not be published. Required fields are marked *