ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ (Actor Shiva Rajkumar) ಆರೋಗ್ಯ ಹದಗೆಟ್ಟಿರುವ ವಿಚಾರ ತಿಳಿದು ಅಭಿಮಾನಿಗಳಷ್ಟೇ ಅಲ್ಲ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಕೂಡ ಆತಂಕಗೊಂಡರು. ನಟ ಯಶ್ ಹಾಗೂ ಕಿಚ್ಚ ಸುದೀಪ್ (Kichcha Sudeep), ಡಾಲಿ ಧನಂಜಯ್ ಸೇರಿದಂತೆ ಹಲವರು ಅವರ ಆರೋಗ್ಯ ವಿಚಾರಿಸಿದ್ರು.
ಇದೀಗ ಶಿವರಾಜ್ ಕುಮಾರ್ ಸರ್ಜರಿಗೆಂದು ಅಮೆರಿಕಾಗೆ ತೆರಳುತ್ತಿದ್ದಾರೆ. ಇಂದು ರಾತ್ರಿಯ ಫ್ಲೈಟ್ಗೆ ಶಿವಣ್ಣ (Shivanna) US ನತ್ತ ಪಯಾಣ ಬೆಳೆಸಲಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತಾಡಿದ ಶಿವಣ್ಣ, ಸರ್ಜರಿ ಬಗ್ಗೆ ಮಾತಾಡುತ್ತಾ ಭಾವುಕರಾದ್ರು.
ಸರ್ಜರಿಗೂ ಮುನ್ನ ಶಿವಣ್ಣ ಮಾತು!
ಹೊಸ ವರ್ಷಕ್ಕೆ ನಾನು ಕರ್ನಾಟಕದಲ್ಲಿ ಇರಲ್ಲು ಆಗ್ತಿಲ್ಲ ಎನ್ನುವ ಬೇಸರ ನನಗಿದೆ. ನಾನು ಕೂಡ ಮಿಸ್ ಮಾಡಿಕೊಳ್ತೇನೆ ಎಂದ ಶಿವಣ್ಣ, ಸರ್ಜರಿ ಬಗ್ಗೆ ಮಾತಾಡಿದ್ರು. ಹಲವು ಬಾರಿ ಆರೋಗ್ಯ ತಪಾಸಣೆ ನಡೆದಿದೆ. ರಿಪೋರ್ಟ್ ಚೆನ್ನಾಗಿದೆ ಅಂದ್ರು, ಸರ್ಜರಿ ಅಂತ ಬಂದಾಗ ಒಂದಷ್ಟು ಆತಂಕ ಆಗೋದು ಸಹಜ. ಹೀಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್ ಕೂಡ ಬಂದು ಧೈರ್ಯ ಹೇಳ್ತಿದ್ದಾರೆ ಎಂದ್ರು.
ಡಿಸೆಂಬರ್ 24ಕ್ಕೆ ನನಗೆ ಸರ್ಜರಿ ಇದೆ
ಇದೇ ತಿಂಗಳ 24ನೇ ತಾರೀನಿಂದು ನನಗೆ ಸರ್ಜರಿ ಆಗುತ್ತೆ. ತುಂಬಾ ದಿನಗಳು ಆಗಿರೋದ್ರಿಂದ ನನಗೂ ಸ್ವಲ್ಪ ಆತಂಕ ಇದೆ. ನನಗೆ ಮುರುಗೇಶ್ ಎಂಬ ಡಾಕ್ಟರ್ ಚಿಕಿತ್ಸೆ ನೀಡ್ತಾರೆ. ಅರಾಮಾಗಿ ಬನ್ನಿ ಸರ್, ಭಯ ಪಡಬೇಕಿಲ್ಲ ಅಂತ ಹೇಳಿದ್ದಾರೆ ಎಂದು ಶಿವಣ್ಣ ಮಾಧ್ಯಮಗಳಿಗೆ ತಿಳಿಸಿದ್ರು.
ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ
ಹೊಸ ವರ್ಷದ ಆಚರಣೆಯನ್ನು ಮಿಸ್ ಮಾಡ್ಕೋತಿನಿ. ಎಲ್ಲರಿಗೂ 2025 ಒಳ್ಳೆಯದನ್ನು ಮಾಡಲಿ. ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗ್ತಿರುವ ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ ಎಂದ್ರು.
ಮಾತಾಡುತ್ತಲೇ ಭಾವುಕರಾದ ಶಿವಣ್ಣ
ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಎಂದ ಶಿವಣ್ಣ ಭಾವುಕರಾದ್ರು. ಎಲ್ಲಾ ವೈದ್ಯರೂ ನನಗೆ ಧೈರ್ಯ ತುಂಬಿದ್ದಾರೆ. ಅಪರೇಷನ್ ಮಾಡುವ ಡಾ.ಮುರುಗೇಶ್ ಜೊತೆ ನಾನು ಮಾತನಾಡಿದ್ದೇನೆ. ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಅಪರೇಷನ್ ನಡೆಯಲಿದೆ. ನ್ಯೂರಾಲಜಿಸ್ಟ್ ಕೂಡ ಒಂದಷ್ಟು ಸಲಹೆ ನೀಡಿದ್ದಾರೆ. ಬ್ಲಡ್ ರಿಪೋರ್ಟ್ ಸೇರಿ ಎಲ್ಲಾ ರಿಪೋರ್ಟ್ ಗಳು ಪಾಸಿಟಿವ್ ಆಗಿಯೇ ಬಂದಿವೆ ಎಂದು ಹೇಳಿದ್ರು.
ನಿಮ್ಮ ಪ್ರೀತಿಗೆ ಸದಾ ಚಿರಋಣಿ
ನಾನು ಸರ್ಜರಿ ಹೋಗ್ತಿದ್ದೇನೆ ಅಂತ ನನ್ನನ್ನು ನೋಡಲು ಅಭಿಮಾನಿಗಳು ಬಂದಿದ್ದಾರೆ. ಕನ್ನಡ ಚಿತ್ರರಂಗ ಗಣ್ಯರು, ನಟರು ಕೂಡ ಬಂದಿದ್ರು. ಇಂತಹ ಟೈಮಲ್ಲಿ ನಮಗೆ ಧೈರ್ಯ ಹೇಳ್ತಿದ್ದಾರೆ. ಅವರ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಶಿವರಾಜ್ಕುಮಾರ್ ಹೇಳಿದ್ರು.
ಶಿವರಾಜ್ ಕುಮಾರ್ ಹಾಗೂ ಸುದೀಪ್ ಆತ್ಮೀಯರಾಗಿದ್ದಾರೆ. ಇಬ್ಬರ ನಡುವೆ ಅಣ್ಣ-ತಮ್ಮನ ಬಾಂಧವ್ಯವಿದೆ. ಶಿವಣ್ಣ ಪತ್ನಿ ಗೀತಾ ಅವರನ್ನು ಗೀತಾಕ್ಕ ಎಂದೇ ಕರೆಯುವ ಸುದೀಪ್ ಇಬ್ಬರ ಮೇಲೆ ಅಷ್ಟೇ ಪ್ರೀತಿ ಗೌರವ ಹೊಂದಿದ್ದಾರೆ. ಹೀಗಾಗಿ ಇಂದು ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ರು.
ಕಿಚ್ಚ ಸುದೀಪ್ ಕೆಲ ಕಾಲ ಶಿವಣ್ಣನ ಜೊತೆ ಮಾತಾಡಿದ್ರು. ಬಳಿಕ ಪ್ರೀತಿಯ ಅಪ್ಪುಗೆ ನೀಡಿದ್ರು. ಈ ವೇಳೆ ಸುದೀಪ್ ಭಾವುಕರಾದಂತೆ ಕಂಡ್ರು. ಶಿವಣ್ಣನನ್ನು ಸುದೀಪ್ ಅಣ್ಣನ ಸ್ಥಾನದಲ್ಲಿ ನೋಡ್ತಾರೆ. ಹೀಗಾಗಿ ಕೊಂಚ ಭಾವುಕರಾಗಿದ್ರು.
Published by
