
ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವೆಲ್ಲ ಆಟಗಾರರನ್ನು ಖರೀದಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ರೈಟ್ ಟು ಮ್ಯಾಚ್’ ಅಡಿಯಲ್ಲಿ ₹18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ.ಹರಾಜು ಪ್ರಕ್ರಿಯೆಯಲ್ಲಿ ಅರ್ಷದೀಪ್ ಅವರ ಖರೀದಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ಗರಿಷ್ಠ ₹18 ಕೋಟಿಗೆ ಬಿಡ್ ಸಲ್ಲಿಸಿತ್ತು. ಆದರೆ ‘ರೈಟ್ ಟು ಮ್ಯಾಚ್’ ಅಡಿಯಲ್ಲಿ ಅರ್ಷದೀಪ್ ಅವರನ್ನು ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಯಿತು.

ಶ್ರೇಯಸ್ ಅಯ್ಯರ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹26.75 ಕೋಟಿ
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್₹26.75 ಕೋಟಿಗೆ ಪಂಜಾಬ್ ತೆಕ್ಕೆಗೆ ಶ್ರೇಯಸ್ ಅಯ್ಯರ್

ರಿಷಭ್ ಪಂತ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹27 ಕೋಟಿ
ಖರೀದಿಸಿದ ತಂಡ: lucknow supergaints

ಕಗಿಸೋ ರಬಾಡ
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹10.75 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಜೋಸ್ ಬಟ್ಲರ್
ಮೂಲ ಬೆಲೆ : ₹2 ಕೋಟಿ
ಮಾರಾಟವಾದ ಮೊತ್ತ: ₹15.75 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಯುಜುವೇಂದ್ರ ಚಹಾಲ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹18.00 ಕೋಟಿ
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಡೇವಿಡ್ ಮಿಲ್ಲರ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹7.50 ಕೋಟಿ
ಖರೀದಿಸಿದ ತಂಡ: lucknow supergaints

ಲಿಯಂ ಲಿವಿಂಗ್ಸ್ಟನ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹08.75 ಕೋಟಿ
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೊಹಮ್ಮದ್ ಶಮಿ
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹10.00 ಕೋಟಿ
ಖರೀದಿಸಿದ ತಂಡ: ಸನ್ ರೈಸೆರ್ಸ್ ಹೈದ್ರಾಬಾದ್

ಮೊಹಮ್ಮದ್ ಸಿರಾಜ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹12.75 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಮಿಚೆಲ್ ಸ್ಟಾರ್ಕ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹11.25 ಕೋಟಿ
ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

ಕೆ ಎಲ್ ರಾಹುಲ್
ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಮೊತ್ತ: ₹14.00ಕೋಟಿ
ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್
ಮಾರ್ಕಿ ಪ್ಲೇಯರ್ಸ್ ಆಕ್ಷನ್ ನಲ್ಲಿ ಮೇಲಿನ ಇಷ್ಟು ಆಟಗಾರರು ಆಯಾ ತಂಡಗಳ ಪಾಲಗಿದ್ದಾರೆ
Published by
Twelvenewz.com
✍️Prashantha h v