
ಭಾರತದಲ್ಲಿ 596 ಮಿಲಿಯನ್ ನಷ್ಟು ವಾಟ್ಸಾಪ್ ಬಳಕೆದಾರರಿದ್ದಾರೆ. ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಇದನ್ನು ಬಳಸುತ್ತಿದ್ದಾರೆ. ಈ ಅಂಕಿ-ಅಂಶ ದೇಶದಲ್ಲಿ ಫೇಸ್‌ಬುಕ್ ಮೇಸೆಂಜಿಂಗ್ ಆಯಪ್ ನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಹುತೇಕ ಭಾರತೀಯರಿಗೆ WhatsApp ಮೆಸೇಜಿಂಗ್ ಆಯಪ್ ಗಿಂತ ಹೆಚ್ಚಾಗಿದೆ.
ಜೀವನದ ಒಂದು ಭಾಗವಾಗಿದೆ. ಇದು ಇಲ್ಲದೆ ಬದುಕುವ ಕನಸೇ ಕಾಣದಂತಾಗಿದೆ. ಜೀವನದ ಗಂಭೀರ ಬಿಕ್ಕಟ್ಟು ಚರ್ಚಿಸುವುದರಿಂದ ಹಿಡಿದು, ಜೋಕ್ ಹೊಡೆಯುವುದು, ಮೇಮ್‌ಗಳ ಹಂಚಿಕೆ, ಕುಟುಂಬ, ಸ್ನೇಹಿತರೊಂದಿಗೆ ಮಾತುಕತೆ, ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಸಂಪರ್ಕತೆ ಹೆಚ್ಚಿಸುತ್ತದೆ.
ಆದರೆ ಇದನ್ನೂ ಊಹಿಸಿಕೊಳ್ಳಿ; ಒಂದೊಮ್ಮೆ ಯಾರೋ ಒಬ್ಬರಿಗೆ ನಿಮ್ಮ ವಾಟ್ಸಾಪ್ ವೈಯಕ್ತಿಕ ಸಂದೇಶಗಳು, ಹಂಚಿಕೊಂಡ ನೆನಪುಗಳು ಸಿಕ್ಕಿದರೆ ಹೇಗಾಗಬೇಡ. ನಿಜಕ್ಕೂ ಭಯವಾಗುತ್ತದೆ? ಇದು ಕೇವಲ ಕಾಲ್ಪನಿಕ ಕಥೆ ಅಥವಾ ದುಃಸ್ವಪ್ನವಲ್ಲ – WhatsApp ಹ್ಯಾಕಿಂಗ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಇದು ವಾಸ್ತವವಾಗಿದೆ.
ಆತ್ಮೀಯ ಸ್ನೇಹಿತ ನಿಮ್ಮನ್ನು ಬಲೆಗೆ ಬೀಳಿಸಿದಾಗ
ನೀವು ನಿಮ್ಮ ಮೊಬೈಲ್ ಫೋನ್ ನೋಡುತ್ತಾ WhatsApp ಸಂದೇಶಗಳನ್ನು ವೀಕ್ಷಿಸುತ್ತಿದ್ದಂತೆಯೇ ಹ್ಯಾಕಿಂಗ್ ಬಲೆಗೆ ಬೀಳಬಹುದು. ಇದ್ದಕ್ಕಿದ್ದಂತೆ ಬಹುಕಾಲದ ಸ್ನೇಹಿತ, ಅನೇಕ ವರ್ಷಗಳಿಂದ ಗೊತ್ತಿರುವ ಗೆಳೆಯ ಎಂಬಂತಹ ನೋಟಿಫಿಕೇಷನ್ ಬರುತ್ತದೆ. ನೀವು ಅಲ್ಲಿ ಚಾಟ್ ಮಾಡಲು ಶುರು ಮಾಡುತ್ತಿದ್ದಂತೆಯೇ ಶುಭಾಶಯ ಹೇಳುವುದರೊಂದಿಗೆ ನಿಧಾನವಾಗಿ ಬಲೆಗೆ ಬೀಳಿಸುವ ಪ್ರಯತ್ನ ನಡೆಯುತ್ತದೆ. ಹೇ, ನಾನು ಹೊಸ ಫೋನ್ ಪಡೆದುಕೊಂಡಿದ್ದೇನೆ. ಅಚಾನಕ್ಕಾಗಿ ಕೋಡ್ ವೊಂದನ್ನು ನಿಮ್ಮ ನಂಬರ್ ಗೆ ಕಳುಹಿಸಿದ್ದೇನೆ. ಅದನ್ನು ನನಗೆ ವಾಪಸ್ ಕಳುಹಿಸಬಹುದೇ? ಎಂದು ಕೇಳಲಾಗುತ್ತದೆ. ಯಾವುದೇ ಎಚ್ಚರಿಕೆ ಸಂದೇಶ ಬರಲ್ಲ. ನೀವು ಎಲ್ಲಾ ವಿಷಯಗಳನ್ನು ಹೇಳಿಕೊಂಡ ನಂತರ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಿದರೆ ಹ್ಯಾಕಿಂಗ್ ಬಲೆಗೆ ಬಿದ್ದೀರಿ ಎಂಬುದು ಸ್ಪಷ್ಟ.
ಆ ನಯವಾದ ಸಂದೇಶ, ವಿಶ್ವಾಸದ ಕ್ಷಣ, ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಕ್ಕೆ ಎಡೆ ಮಾಡಿಕೊಡುತ್ತದೆ. ತಣ್ಣನೆಯ ಸತ್ಯ ಮುಳುಗುತ್ತದೆ. ಅಗತ್ಯವಿರುವ ಸ್ನೇಹಿತ.. ನಿಜವಾಗಿಯೂ ಸ್ನೇಹಿತನಲ್ಲ!
ಭಾರತದಲ್ಲಿ WhatsApp ಹ್ಯಾಕಿಂಗ್
ಒಂದು ಬಾರಿ ನಿಮ್ಮ ವಾಟ್ಸಾಪ್ ಹ್ಯಾಕಿಂಗ್ ಆದರೆ, ನಿಮ್ಮ ಸಂಪರ್ಕದಲ್ಲಿರುವ ಇತರರ ಖಾತೆಗಳನ್ನು ಹ್ಯಾಕರ್ ಗಳು ಗುರಿ ಮಾಡುತ್ತಾರೆ. ಅದೇ ಸರಳ ತಂತ್ರವನ್ನು ಬಳಸುತ್ತಾರೆ. ಹೀಗೆ ಒಬ್ಬರಾದ ನಂತರ ಮತ್ತೊಬ್ಬರನ್ನು ಸಾಲು ಸಾಲಾಗಿ ಹ್ಯಾಕಿಂಗ್ ಬಲೆಗೆ ಬೀಳಿಸುತ್ತಾರೆ. ಫೋನ್ ಗಳು ಸ್ವೀಚ್ ಆಫ್ ಆದಾಗ ಆರು ನಂಬರ್ ಗಳ ಕೋಡ್ಸ್ ನ್ನು ವಾಟ್ಸಾಪ್ ಗೆ ಕಳುಹಿಸುವ ಮೂಲಕ ನಿಮ್ಮ ಖಾತೆ ಹೈಜಾಕ್ ಮಾಡುತ್ತಾರೆ. ನೇರವಾಗಿ ಈ ಹಗರಣ ಮಾಡುತ್ತಿದ್ದರೂ ಅನೇಕರು ಅದರ ಬಲೆಗೆ ಬೀಳುತ್ತಿದ್ದಾರೆ. ಮೋಸಹೋದ ಹತಾಶೆಯಲ್ಲಿ ನೀವು ಏನೇ ಮಾಡಿದರೂ ಮರಳಿ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಎಲ್ಲಾ ನಂತರ ಹ್ಯಾಂಕರ್ಸ್ ನಿಮ್ಮ ವಾಟ್ಸಪ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ.
ಬಳಿಕ ನಿಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಿ, ವೈಯುಕ್ತಿಕ ಮಾಹಿತಿ ಹಂಚಿಕೊಳ್ಳಬಹುದು ಅಥವಾ UPI ಪಾವತಿ ಮೂಲಕ ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳಬಹುದು. ಹ್ಯಾಕಿಂಗ್ ಕುರಿತು ನಿಮ್ಮ ಸಂಪರ್ಕದಲ್ಲಿರುವವರಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದಾಗ ಹ್ಯಾಕರ್ ಗಳು ತ್ವರಿತಗತಿಯಲ್ಲಿ ಸಂದೇಶಗಳನ್ನು ಡಿಲೀಟ್ ಮಾಡುತ್ತಾರೆ. ಹೀಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹ್ಯಾಕಿಂಗ್ ಬಲೆಗೆ ಬೀಳುತ್ತಿದ್ದಾರೆ.
ದೇಶದ ಹೆಸರಾಂತ ಭಾರತೀಯ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂತೋಷ್ ಶಿವನ್ ತಮ್ಮ ವಾಟ್ಸಾಪ್ ಹ್ಯಾಕ್ ಮಾಡಲಾಗಿದೆ ಎಂದು ಇನ್ಟ್ಸಾಗ್ರಾಮ್ ನಲ್ಲಿ ತಿಳಿಸಿದ್ದಾರೆ. ತಮ್ಮ ಖಾತೆಯಿಂದ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಪಾಲೋವರ್ಸ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ. ದಯವಿಟ್ಟು ನನ್ನ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ, ಇದು ಹಗರಣ” ಎಂದು ಅವರು ಫೋಸ್ಟ್ ಮಾಡಿದ್ದಾರೆ.
ಈ ಹಿಂದೆ ಆಗಸ್ಟ್ 2024ರಲ್ಲಿ NCP ಸಂಸದೆ ಸುಪ್ರಿಯಾ ಸುಳೆ ಕೂಡಾ ತನ್ನ ಫೋನ್ ಮತ್ತು ವಾಟ್ಸಾಪ್ ಖಾತೆ ಹ್ಯಾಕ್ ಆಗಿರುವುದಾಗಿ ಹೇಳಿಕೊಂಡಿದ್ದರು. ಇತರ ಅನೇಕ ಮಂದಿ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಜಾಹಿರಾತು WPP ಸಿಇಒ ಮಾರ್ಕ್ ರೀಡ್ ಕೂಡಾ ಡೀಪ್ ಫೇಕ್ ಹಗರಣಕ್ಕೆ ಗುರಿಯಾಗಿದ್ದರು. ಎಲ್ಲಾ WhatsApp ಬಳಕೆದಾರರಿಗೆ ಅತ್ಯಂತ ಮುಖ್ಯವಾದ ಸಲಹೆ ಏನೆಂದರೆ, ನಿಮ್ಮ ಫೋನ್‌ಗೆ ಕಳುಹಿಸಿದ ಆರು-ಅಂಕಿಯ ಕೋಡ್ ಅನ್ನು ಯಾರು ಕೇಳಿದರೂ ಅಥವಾ ಅವರು ಹೇಗೆ ಕೇಳಿದರೂ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇವುಗಳು ಯಾವಾಗಲೂ ನಿಮ್ಮ ಖಾತೆಯನ್ನು ಹೈಜಾಕ್ ಮಾಡಲು ಮಾಡುವ ತಂತ್ರವಾಗಿರುತ್ತವೆ. ಹಣ ಅಥವಾ ಸೂಕ್ಷ್ಮ ಮಾಹಿತಿಗಾಗಿ ಇತರರನ್ನು ಗುರಿಯಾಗಿಸಲು ಬಳಸಲಾಗುತ್ತದೆ.
ವಾಟ್ಸಾಪ್ ಅಕೌಂಟ್ ಹ್ಯಾಕಿಂಗ್ ನಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಮೂರು ಪ್ರಮುಖ ಸುರಕ್ಷತಾ ಕ್ರಮಗಳು
ಎರಡು ಬಾರಿ ಪರಿಶೀಲಿಸಿಕೊಳ್ಳಿ: WhatsApp ನ ಎರಡು-ಹಂತದ ಪರಿಶೀಲನೆಯು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಆಯಪ್ ನಲ್ಲಿ Settings > Account > Two-Step Verification ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ವೈಯಕ್ತಿಕ ಪಿನ್ ಮತ್ತು ಆರು-ಅಂಕಿಯ ಕೋಡ್ ನೀಡುುವ ಅಗತ್ಯವಿದೆ. ನಂತರ ನಿಮ್ಮ ಖಾತೆಯನ್ನು ಹೊಸ ಫೋನ್‌ಗೆ ಸೇರಿಸಲು ಎರಡೂ ಅಗತ್ಯವಿರುತ್ತದೆ.
ಇಮೇಲ್ ವಿಳಾಸವನ್ನು ಸೇರಿಸಿ: Settings > Account ನ್ನು ನಿಮ್ಮ ಖಾತೆಯ ಇಮೇಲ್ ಅಡ್ರೆಸ್ ಗೆ ಸೇರಿಸಬೇಕು. ಇದು ನೀವು ಎಂದಾದರೂ ನಿಮ್ಮ ಖಾತೆಯನ್ನು ಮರುಪಡೆಯಬೇಕಾದರೆ ನಿಮ್ಮ ಗುರುತನ್ನು ಪರಿಶೀಲಿಸಲು ನೆರವಾಗುತ್ತದೆ. ಇದು ಹೈಜಾಕ್ ನಿಲ್ಲಿಸದಿದ್ದರೂ ಮತ್ತೆ ಮಾಹಿತಿ ಪಡೆಯಲು ನೆರವಾಗಬಹುದು.
Passkey ಸೆಟ್ ಮಾಡಿ (ಲಭ್ಯವಿದ್ದರೆ): ನಿಮ್ಮ ಮೊಬೈಲ್ ನಲ್ಲಿ ಮಾಡಬಹುದಾದರೆ ಫಿಂಗರ್‌ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ ನಿಮ್ಮ ಬಯೋಮೆಟ್ರಿಕ್ ದೃಢೀಕರಣಕ್ಕೆ WhatsApp ಲಾಗಿನ್ ಲಿಂಕ್ ಮಾಡಲು Passkey ಸೆಟ್ ಮಾಡಬೇಕು.
ನಿಷ್ ಪ್ರಯೋಜಕ ಸಹಾಯವಾಣಿ 1930: ಇಂತಹ ಹ್ಯಾಕಿಂಗ್ ಅಪರಾಧ ಕುರಿತು ಮಾಹಿತಿಗೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ 1930 ತೆರೆಯಲಾಗಿದೆ. ಆದರೆ, ಇದು ಹೆಚ್ಚಿನ ಜನರಿಗೆ ನೆರವಾಗುತ್ತಿಲ್ಲ. TNIE ಕೂಡ ಶುಕ್ರವಾರ ಈ ಸಹಾಯವಾಣಿ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಇಂದಿನ ಡಿಜಿಟಲ್ ಯುಗದಲ್ಲಿ ನಂಬಿಕೆಯು ಅಮೂಲ್ಯವಾಗಿದ್ದು, ನಿಮ್ಮ ಆನ್‌ಲೈನ್ ಸುರಕ್ಷತೆಯೂ ಅಷ್ಟೇ ಪ್ರಮುಖವಾಗಿದೆ. WhatsApp ಲಕ್ಷಾಂತರ ಜೀವಗಳನ್ನು ಸಂಪರ್ಕಿಸುತ್ತದೆ, ಆದರೆ ನೀವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯಿಂದ ಮಾತ್ರ ಇದು ಸುರಕ್ಷಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಜಾಗರೂಕರಾಗಿರುವುದರಿಂದ ಸರಿಯಾದ ಸುರಕ್ಷತಾ ಸೆಟ್ಟಿಂಗ್ ಬಳಸುವ ಮೂಲಕ ಮತ್ತು ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವ ಮೂಲಕ, ನೀವು ಹ್ಯಾಕರ್‌ಗಳನ್ನು ದೂರವಿಡಬಹುದು
Published by
